HomePage_Banner
HomePage_Banner
HomePage_Banner

ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾದ ಕಾರ್ಯಕಾರಿಣೆ ಸಭೆ | 20 ಮಂದಿ ಫಲಾನುಭವಿಗಳಿಗೆ ಸುಕನ್ಯ ಸಮೃದ್ಧಿ ಪಾಸ್ ಬುಕ್ ವಿತರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಸರಕಾರದ ಯೋಜನೆಯಾದ ಸುಕನ್ಯ ಸಮೃದ್ಧಿ ಯೋಜನೆ ಬಡವರಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾದ ವತಿಯಿಂದ ದಾನಿಗಳ ನೆರವಿನಿಂದ 20 ಮಕ್ಕಳಿಗೆ ಸುಕನ್ಯ ಸಮೃದ್ಧಿ ಯೋಜನೆಗೆ ಸಂಬಂಧಿಸಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದಿದ್ದು, ಅದರ ಪಾಸ್ ಬುಕ್ ವಿತರಣೆಯನ್ನು ನ.3ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ವಿತರಣೆ ಮಾಡಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಫಲಾನುಭವಿಗಳಿಗೆ ಪಾಸ್ ಬುಕ್‌ಗಳನ್ನು ವಿತರಣೆ ಮಾಡಿ ಮಾತನಾಡಿ ಮಹಿಳೆಯರು ಸಂಘಟನೆಗೊಂಡಾಗ ಮಾತ್ರ ಪಕ್ಷ ಇನ್ನಷ್ಟು ಬಲಿಷ್ಠಗೊಳ್ಳುತ್ತದೆ ಈ ದಿಸೆಯಲ್ಲಿ ಎಲ್ಲರೂ ಉತ್ತಮ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ತಿಳಿಸಿದರು. ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ತ್ರಿವೇಣಿ ಪೆರ್ವೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ  ಯಶಸ್ವಿನಿ ಶಾಸ್ತ್ರಿ ಅವರಿ ಪಕ್ಷದ ಮುಂದಿನ ಕಾರ್ಯಕ್ರಮಗಳು ಮತ್ತು ಗ್ರಾಮ ಪ್ರವಾಸದ ಕುರಿತು ಮಾಹಿತಿ ನೀಡಿದರು. ಜಿ.ಪಂ ಸದಸ್ಯರಾದ ಶಯನಾ ಜಯಾನಂದ್, ಜಯಶ್ರೀ ಕೋಡಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಗ್ರಾಮಾಂತರ ಮಂಡಲ ಉಪಾಧ್ಯಾಕ್ಷರಾದ ಉಷಾಚಂದ್ರ ಮುಳಿಯ, ಉಷಾ ನಾರಾಯಣ, ಖಜಾಂಚಿ ಶ್ರೀಮತಿ ವಿಜಯಲಕ್ಷ್ಮಿ ವಿಟ್ಲ, ಸುಷ್ಮಾ ಸತೀಶ್, ಶ್ವೇತಾ ಬೆಳ್ಳಿಪ್ಪಾಡಿ, ಸದಸ್ಯರಾದ ಸರಸ್ವತಿ ಪೆರ್ನೆ, ಪಾರ್ವತಿ ಎಂ. ಪ್ರಭಾ ರೈ ಕೊಳ್ತಿಗೆ, ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾದ ಕಾರ್ಯದರ್ಶಿ ಜಗದೀಶ್ವರಿ ಮಿತ್ತೂರು, ಚಂದ್ರಕಲಾ ಆಚಾರ್ಯ, ಸೌಮ್ಯ ಕರುಣಾಕರ, ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಪ್ರಫುಲ್ಲ ಆರ್ ರೈ, ಪ್ರಭಾ ಕೋಂಟ್ರುಪ್ಪಾಡಿ, ವೀಣಾ ಕರ್ಗಲ್ಲು, ಉಪಸ್ಥಿತರಿದ್ದರು. ಪುತ್ತೂರು ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಯಶೋಧ ಕೆ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಾಗವೇಣಿ ಪೆರ್ಲಂಪ್ಪಾಡಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.