HomePage_Banner
HomePage_Banner
HomePage_Banner

ಬಂಟ್ವಾಳ: ಕಡೇಶ್ವಾಲ್ಯದ ಜಯಲಕ್ಷ್ಮಿ ಜಿ. ಯವರಿಗೆ ಕ್ರೀಡಾರತ್ನ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

ಬಂಟ್ವಾಳ:  ಕಡೇಶ್ವಾಲ್ಯ ಗ್ರಾಮದ ನಿವಾಸಿ ಜಯಲಕ್ಷೀ ಜಿ. ಅವರು 2017ನೇ ಸಾಲಿನ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ಅವರು ಪ್ರಸಕ್ತ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬಾಲ್ ಬಾಡ್ಮಿಂಟನ್ ಕೋಚಿಂಗ್ ನೀಡುತ್ತಿದ್ದಾರೆ. ಕಡೇಶ್ವಾಲ್ಯ ಪೆರ್ಲಾಪು ಗಾಣದಕೊಟ್ಯ ನಿವಾಸಿ ದಿ. ವಿಶ್ವನಾಥ ಸಪಲ್ಯ ಮತ್ತು ರೇವತಿ ದಂಪತಿಯ ಪುತ್ರಿಯಾಗಿರುವ ಅವರು ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪೂರ್ಣಗೊಳಿಸಿ, ಬಳಿಕ ಆಳ್ವಾಸ್‌ನಲ್ಲಿ ಪಿಯು ಉಚಿತ ಶಿಕ್ಷಣ ಪಡೆದಿರುತ್ತಾರೆ. ಅದೇ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿರುತ್ತಾರೆ. ತನ್ನ ಕೋಚ್ ಪ್ರವೀಣ್ ಕುಮಾರ್ ಅವರಿಂದ ಬಾಲ್ ಬ್ಯಾಡ್ಮಿಂಟನ್ ಕಲಿತು ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಕರ್ನಾಟಕ ತಂಡದ ನಾಯಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಾಲ್ಕು ಬಾರಿ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಸತತ ಆರು ಬಾರಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ, ಸತತ ಐದು ಬಾರಿ ಸೀನಿಯರ್ ನ್ಯಾಷನಲ್ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ, ಸತತ ಮೂರು ಬಾರಿ ಫೆಡರೇಶನ್ ಕಪ್ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ,  ಸತತ ಮೂರು ಬಾರಿ ಇಂಟರ್ ಜೋನ್ ಬಾಲ್ ಬ್ಯಾಡ್ಮಿಂಟನ್ ಚಿನ್ನದ ಪದಕ ಪಡೆದಿದ್ದಾರೆ ಜಯಲಕ್ಷ್ಮೀ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.