HomePage_Banner
HomePage_Banner
HomePage_Banner
HomePage_Banner

ಯಶಸ್ಸಿನ ಹಾದಿಯಲ್ಲಿ ಬಾಡ್ಮಿಂಟನ್ ಆಟಗಾರ್ತಿ ದೀಪಿಕ. ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಸನ್ನೆಲ್ಲರೂ ಕಾಣುತ್ತಾರೆ, ಆದರೆ ಆ ಕನಸನ್ನು ನನಸನ್ನಾಗಿಸುವವರು ಅತೀ ವಿರಳ. ಈ ವಿರಳರಲ್ಲೊಬ್ಬರಾಗಿ ಸದಾ ಲವಲವಿಕೆಯಿಂದ ಕೂಡಿ ತಮ್ಮ ಪ್ರತಿಭೆ ಏನೂ ಅಲ್ಲ ಎಂಬಂತೆ ಎಲೆ ಮರೆಯ ಕಾಯಿಯಂತೆ ಜೀವಿಸುತ್ತಿದ್ದಾರೆ ದೀಪಿಕ. ಕೆ

ಛಲವೊಂದಿದ್ದರೆ ಸಾಧಿಸಲು ಮಾರ್ಗಗಳು ನೂರು ಎಂಬುವುದಕ್ಕೆ ಉತ್ತಮ ಉದಾಹರಣೆ ಇವರು. ಕೇವಲ ಒಂದೇ ವಿಷಯದಲ್ಲಿ ಆಸಕ್ತಿಯನ್ನು ಹೊಂದಿರಬೆಕೆಂದೇನಿಲ್ಲ, ಎಲ್ಲಾ ವಿಷಯಗಳನ್ನೂ ಕಲಿಯಬೇಕೆಂಬ ಇವರ ತವಕ ವಿಶೇಷವಾಗಿದೆ. ಚಿಕ್ಕ ವಯಸ್ಸಿನಿಂದಲೂ ಬಾಡ್ಮಿಂಟನ್‌ನಲ್ಲಿ ವಿಶೇಷ ಆಸಕ್ತಿ ತೊರಿದ ಇವರು ಯಕಗಾನ, ಚಿತ್ರಕಲೆ, ಚೆಸ್, ಇನ್ನಿತರ ಆಟೋಟಗಳಲ್ಲೂ ಪರಿಣಿತರು.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮದ ವಿಜಯ ವಿಠಲ ಕೆ. ಮತ್ತು ಸಲಿಲ ಕುಮಾರಿ ವಿ.ಕೆ ದಂಪತಿಯ ಪುತ್ರಿ. ಪ್ರಸ್ತುತ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ದ್ವಿತೀಯ ವರ್ಷದ ವ್ಯಾಸಂಗವನ್ನು ನಡೆಸುತ್ತಿದ್ದಾರೆ. ದೀಪಿಕ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆ, ಕುರುಡಪದವು ಇಲ್ಲಿ ಪೂರೈಸಿದರು. ಇವರು ತಮ್ಮ ಎಂಟನೇ ವಯಸ್ಸಿನಲ್ಲಿಯೇ ಕ್ರೀಡಾ ಕ್ಷೇತ್ರದತ್ತ ಒಲವನ್ನು ತೋರಿದರು. ಇಲ್ಲಿಂದಲೇ ಬ್ಯಾಡ್ಮಿಂಟನ್ ಅಚ್ಚುಮೆಚ್ಚಾಯಿತು. ಚಿಕ್ಕ ವಯಸ್ಸಿನಲ್ಲೇ ಆಟೋಟಗಳಲ್ಲಿ ತಮ್ಮ ಮಿಂಚನ್ನು ಹಬ್ಬಿಸಿದ್ದಾರೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಸಾದೃಶ ನಿದರ್ಶನ ಕುಮಾರಿ ದೀಪೀಕ ಕೆ. 2015-16ನೇ ಸಾಲಿನಲ್ಲಿ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಹಾಗೂ ಚೆಸ್‌ನಲ್ಲಿ ಪ್ರಥಮ, 2016-17 ನೇ ಸಾಲಿನಲ್ಲಿ ವಲಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಪ್ರಥಮ ಸ್ಥಾನ, 2017-18 ಸಾಲಿನಲ್ಲಿ ಕೆರಳದ ಕಣ್ಣೂರಿನಲ್ಲಿ ನಡೆದ ವಿಭಾಗ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ, 2018-19 ಮತ್ತು 2019-20ನೇ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ಇತ್ತೀಚೆಗೆ ವಿದ್ಯಾಭಾರತಿ ವತಿಯಿಂದ ನಡೆದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದಲ್ಲಿ ನಾಲ್ಕನೇಯ ಸ್ಥಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಆಟ ಮಾತ್ರವಲ್ಲದೆ ಸಾಂಸ್ಕೃತಿಕ ವಿಚಾರದಲ್ಲೂ ತಾನು ಸೈ ಎಂದು ಜಿಲ್ಲಾ ಮಟ್ಟದ ಯಕ್ಷಗಾನ ಸ್ಪರ್ದೆಯಲ್ಲಿ ಬಹುಮಾನಗಳಿಸಿಕೊಳ್ಳುವ ಮೂಲಕ ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಸ್ಪರ್ದಾತ್ಮಕ ಪರೀಕ್ಷೆಗಳಗಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಪಳಗಿದ ಇವರು ಮುಂದೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬ ಕನಸನ್ನು ಹೊಂದಿದ್ದಾರೆ.

ಇವರ ಈ ಸಾಧನೆಗೆ ಅಧ್ಯಾಪಕರು, ಸ್ನೇಹಿತರು ಹಾಗೂ ಹೆತ್ತವರ ಪ್ರೋತ್ಸಾಹವೇ ಕಾರಣ, ತಂದೆ ದೈಹಿಕ ಶಿಕ್ಷಕರಾಗಿದ್ದು ತನ್ನೆಲ್ಲಾ ಸಾಧನೆಗಳಿಗೆ ಅವರ ಮಾರ್ಗದರ್ಶನವೇ ಸ್ಪೂರ್ತಿ ಎಂದಿದ್ದಾರೆ ದೀಪಿಕ. ಪ್ರತಿಭೆಯನ್ನು ಹೊಂದಿದ್ದರೆ ಅವಕಾಶಗಳು ತಾನಾಗಿಯೇ ಬಂದು ನಮ್ಮ ಕದ ತಟ್ಟುತ್ತದೆ. ತನಗೊದಗಿ ಬಂದ ಅವಕಾಶಗಳನ್ನು ಸದುಪಯೋಗಿಸಿದ ದೀಪಿಕರವರ ಕನಸುಗಳು ಈಡೇರಲಿ ಎಂಬುವುದೇ ನಮ್ಮ ಆಶಯ.

ಗಿಡವೊಂದು ದಷ್ಟಪುಷ್ಟವಾಗಿ ಬೆಳೆಯಲು ಅದಕ್ಕೆ ನೀರುಣಿಸುವವರು ಬೇಕು. ಅಂತೆಯೇ ದೀಪಿಕಾರ ಬದುಕಿನಲ್ಲಿ ಪ್ರೋತ್ಸಾಹಿಸಿದವರು ಪೋಷಕರು. ಗುರುವಾಗಿ, ಗೆಳೆಯನಾಗಿ,ಸದಾ ಬೆನ್ನೆಲುಬಾಗಿ ನಿಂತ ತಂದೆ ತಾಯಿಯರೇ ತನಗೆ ಸ್ಪೂರ್ತಿ ಎನ್ನುತ್ತಾರೆ ದೀಪಿಕ.

–  ಆಕರ್ಷ ಆರ್. ಆರಿಗ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಪದವಿ ಕಾಲೇಜು 
ನೆಹರು ನಗರ, ಪುತ್ತೂರು 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.