HomePage_Banner
HomePage_Banner
HomePage_Banner

ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ಪಾಂಗ್ಲಾಯಿ ಮುಂಡ್ಯತ್ತಾಯ ದೈವಸ್ಥಾನಕ್ಕೆ ಭೇಟಿ

Puttur_Advt_NewsUnder_1
Puttur_Advt_NewsUnder_1

 
ಪುತ್ತೂರು: ನಗರಸಭಾ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ವಾರ್ಡ್-19ರ ಸದಸ್ಯೆ ವಿದ್ಯಾ ಆರ್. ಗೌರಿ ಪಾಂಗ್ಲಾಯಿ ಮುಂಡ್ಯತ್ತಾಯ ದೈವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಬಳಿಕ ನಡೆದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯವಾಗಿ ವಾರ್ಡ್‌ನ ಅಭಿವೃದ್ಧಿ, ಸಮಸ್ಯೆಗಳಿಗೆ ಪರಿಹಾರ ಹಾಗೂ ವಾರ್ಡ್ 19ನ್ನು ಅತ್ಯುತ್ತಮ ವಾರ್ಡ್ ಆಗಿ ಮಾಡುವ ಬಗ್ಗೆ ಆಶಯ ವ್ಯಕ್ತಪಡಿಸಿದರು. ಪುತ್ತೂರನ್ನು ಸ್ವಚ್ಛ ಪುತ್ತೂರು, ಸುಂದರ ಪುತ್ತೂರು ಮಾಡುವಲ್ಲಿ ಹೆಚ್ಚಿನ ಮುತುರ್ವಜಿ ವಹಿಸುವುದಾಗಿ, ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಆಶ್ವಾಸನೆಯನ್ನು ಪ್ರಾಮಾಣಿಕವಾಗಿ ಪ್ರಯತ್ನಿಸುವ ಬಗ್ಗೆ, ಮುಂದಿನ ಎಲ್ಲಾ ಕಾರ್ಯಗಳಿಗೆ ಹಿತೈಷಿಗಳ ಸಹಕಾರ, ಬೆಂಬಲ ಅಗತ್ಯ ಎಂದರು.



ಕಾರ್ಯಕ್ರಮದಲ್ಲಿ ವಿದ್ಯಾ ಆರ್ ಗೌರಿಯವರ ಮಗ ಪವನ್, ಸೊಸೆ ಆಶಿಕಾ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಬಿಜೆಪಿ ನಗರ ಮಂಡಲ ಕಾರ್ಯದರ್ಶಿ, ಬೂತ್ ಅಧ್ಯಕ್ಷ ಶಿವಕುಮಾರ್, ಮುಂಡ್ಯತ್ತಾಯ ದೈವಸ್ಥಾನದ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ನಾಕ್, ಬೂತ್ ಕಾರ್ಯದರ್ಶಿ ವೀಕ್ಷಿತ್ ಕಲ್ಲಿಮಾರ್, ಮುಳಿಯ ಜುವೆಲ್ಲರ್‍ಸ್‌ನ ಕೇಶವ ಪ್ರಸಾದ್ ಮುಳಿಯ ಪುತ್ತೂರು ಹವ್ಯಾಕ ವಲಯದ ಈಶ್ವರ ಭಟ್ ರಾಜಗೋಪಾಲ ಶಗ್ರಿತ್ತಾಯ ವರದರಾಜ್ ಕಾಮತ್, ಪ್ರವೀಣ್ ಭಂಡಾರಿ, ಪ್ರವೀನ್, ಪ್ರೇಮ ಶಿವಪ್ಪ ಗೌಡ, ಚಂದ್ರಾವತಿ, ಬೇಬಿ, ಚೈತ್ರಾ ರೈ, ಸೂರಪ್ಪ, ರವಿರಾಜ್, ತಾರನಾಥ್, ಸುಕುಮಾರ್, ನಿತ್ಯಾನಂದ, ವೀಣಾ ಆಚಾಯ್, ವೀಣಾ, ನಾಗೇಶ್ ಪ್ರಭು ಲಕ್ಷ್ಮೀನಾರಾಯಣ, ಕರುಣಾಕರ್, ಆನಂದ್, ಪ್ರಕಾಶ್, ನವೀನ್, ಚಂದ್ರಾವತಿ, ಸೀತಾರಾಮ್, ಸಂತೋಷ್, ಕಿಶೋರ್, ಪ್ರೇಮಾಕಿಶೋರ್, ಜಯಾನಂದ ಕೆ, ವರಲಕ್ಷ್ಮೀ, ಈಶ್ವರಿ ಭಟ್, ವೆಂಕಟ್ರಮಣ ಭಟ್, ರವಿಶಂಕರ್ ಉಪ್ಪಂಗಳ ಮಹಾದೇವ ಶಾಸ್ತ್ರೀ, ಪುರುಷೋತ್ತಮ, ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು. ಮುಂಡ್ಯತ್ತಾಯ ದೈವಸ್ಥಾನದ ಸಮಿತಿ ಕಾರ್ಯದರ್ಶಿ, ಮಾಜಿ ನಗರಸಭಾ ಸದಸ್ಯ ವಿನಯ ಭಂಡಾರಿ ಸ್ವಾಗತಿಸಿ, ಮುಂಡ್ಯತ್ತಾಯ ದೈವಸ್ಥಾನದ ಸಮಿತಿ ಮಾಜಿ ಅಧ್ಯಕ್ಷ ಸಂಪತ್‌ಕುಮಾರ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.