HomePage_Banner
HomePage_Banner
HomePage_Banner

ಎಸ್‌ವೈಎಸ್ ಪುತ್ತೂರು ಸೆಂಟರ್ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್

Puttur_Advt_NewsUnder_1
Puttur_Advt_NewsUnder_1
  • ಎಸ್ಸೆಸ್ಸೆಫ್ ಜಿಲ್ಲಾ ಬ್ಲಡ್ ಸೈಬೋ 200ನೇ ಕ್ಯಾಂಪ್ ಯಶಸ್ವಿಗೆ ಕರೆ

ಪುತ್ತೂರು: ಪೈಗಂಬರ್ (ಸ.ಅ) ರವರ ಹಾದಿಯಲ್ಲಿ ಗೆಲುವಿದೆ ಎಂಬ ಘೋಷಣೆಯಡಿಯಲ್ಲಿ ಎಸ್ ವೈ ಎಸ್ ಪುತ್ತೂರು ಸೆಂಟರ್ ವತಿಯಿಂದ ಬೃಹತ್ ಮೌಲಿದ್ ಕಾರ್ಯಕ್ರಮ ಸೆಂಟರ್ ಅಧ್ಯಕ್ಷ ಅಬ್ದುಲ್ ರ್ರಝಾಕ್ ಖಾಸಿಮಿ ಕೂರ್ನಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಯ್ಯದ್ ಸಾದಾತ್ ತಂಙಳ್ ಕರ್ವೇಲು ದುಆಗೆ ನೇತೃತ್ವ ನೀಡಿದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್ ವೈ ಎಸ್ ಈಸ್ಟ್ ಜಿಲ್ಲಾ ಅಧ್ಯಕ್ಷ ಅಬೂಬಕರ್ ಸಅದಿ ಮಜೂರುರವರು ಪೈಗಂಬರ್ (ಸ.ಅ) ರವರ ಆದರ್ಶ ಬದುಕು ಜಗತ್ತಿಗೆ ಮಾದರಿಯಾಗಿದ್ದು, ಅವರ ಅನುಕರಣೆಯಿಂದ ಮಾತ್ರ ವಿಶ್ವಶಾಂತಿ ಸಿಗಲಿದೆ ಎಂದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಸಾಂಧರ್ಭಿಕವಾಗಿ ಮಾತನಾಡಿದರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಇದರ 200ನೇ ಬ್ಲಡ್ ಕ್ಯಾಂಪ್ ನ.8ರಂದು ಮಿತ್ತೂರು ಕೆಜಿಎನ್ ದಾರುಲ್ ಇರ್ಶಾದ್ ನಲ್ಲಿ ನಡೆಯಲಿದ್ದು, ಅದರ ಯಶಸ್ವಿಗಾಗಿ ಕರೆ ನೀಡಲಾಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ನಾಯಕರಾದ ಆದಂ ಹಾಜಿ ಪಡೀಲ್, ಹಸೈನಾರ್ ಹಾಜಿ ಮಜ್ಮ ಕೊಡಿಪ್ಪಾಡಿ, ಇಸ್ಮಾಯಿಲ್ ಹಾಜಿ ಬನ್ನೂರು, ಎಸ್ ವೈ ಎಸ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ, ಜಿಲ್ಲಾ ನಾಯಕರಾದ ಎಂ ಎಚ್ ಹಾಜಿ ಉಪ್ಪಿನಂಗಡಿ, ಅಬ್ದುಲ್ಲಾ ಮುಸ್ಲಿಯಾರ್, ಎಸ್.ಎಂ.ಎ. ರಾಜ್ಯ ಉಪಾಧ್ಯಕ್ಷ ರಾದ ಹಮೀದ್ ಹಾಜಿ ಕೊಡುಂಗಾಯಿ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ರೌಫ್ ಖಾನ್ ಕುಂದಾಪುರ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರುಗಳಾದ ಶಾಕಿರ್ ಹಾಜಿ ಮಿತ್ತೂರು, ನವಾಝ್ ಬಟ್ಕಳ, ಅಶ್ರಫ್ ರಝಾ ಅಮ್ಜದಿ, ಕಬೀರ್ ಅಮ್ಜದಿ ಹೊನ್ನಾವರ, ಕೆ ಎಂ.ಎಚ್ ಝುಹ್ರಿ ಕೊಂಬಾಳಿ, ಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ರಶೀದ್ ಹಾಜಿ ವಗ್ಗ, ಕರೀಂ ಬೋಳಂತೂರು, ಮುಹಮ್ಮದಲಿ ತುರ್ಕಳಿಕೆ, ಶರೀಫ್ ಬೆರ್ಕಳ, ಇಕ್ಬಾಲ್ ಮಾಚಾರ್, ಮುಸ್ತಫಾ ಯು.ಪಿ., ಹಕೀಂ ಕಳಂಜಿಬೈಲ್, ಫೈಝಲ್ ಝುಹ್ರಿ ಕಲ್ಲುಗುಂಡಿ, ರಝಾಕ್ ಸಅದಿ ಕೊಡಿಪ್ಪಾಡಿ, ಅಬ್ದುರ್ರಹ್ಮಾನ್ ಶರಫಿ ವಿಟ್ಲ, ಸಲೀಂ ಹಾಜಿ ಬೈರಿಕಟ್ಟೆ, ಎಸ್ಸೆಸ್ಸೆಫ್ ಈಸ್ಟ್ ಝೋನ್ ಪ್ರ.ಕಾರ್ಯದರ್ಶಿ ಶಫೀಕ್ ಮಾಸ್ಟರ್, ಪುತ್ತೂರು ಡಿವಿಷನ್ ಪ್ರ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಬ್ಲಡ್ ಸೈಬೋ ಉಸ್ತುವಾರಿ ಹಾರಿಸ್ ಅಡ್ಕ, ಎಸ್ ವೈ ಎಸ್ ಪುತ್ತೂರು ಸೆಂಟರ್ ಇಸಾಬ ಅಮೀರ್ ಶಾಹುಲ್ ಹಮೀದ್ ಕಬಕ, ಅಬ್ಬು ನರಿಮೊಗರು, ಉಮರ್ ನರಿಮೊಗರು, ಜಮಾಲ್ ಮೈದಾನಿಮೂಲೆ, ಹಸನ್ ಸಅದಿ, ಮುಕ್ವೆ ಬಾಖವಿ ಉಸ್ತಾದ್, ಫಾರೂಕ್ ಬನ್ನೂರು, ರಫೀಕ್ ಬೀಟಿಗೆ, ಕಸ್ತೂರಿ ಹಾಜಿ, ಉಮರ್ ಕುಕ್ಕಿಲ,ಫಾಳಿಲಿ ಉಸ್ತಾದ್ ಕಬಕ, ಅಬ್ದುಲ್ ಖಾದರ್ ಸಾಲ್ಮರ, ಖಾದರ್ ಮರಿಕೆ ಉಪಸ್ಥಿತರಿದ್ದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಸಾಲಿಹ್ ಮುರ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.