HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಟಿಪ್ಪರ್ ಲಾರಿ ಡಿಕ್ಕಿ-ಬೈಕ್ ಸವಾರ ಮೃತ್ಯು | ಟಿಪ್ಪರ್‌ಗಳ ಅತಿವೇಗದ ಚಾಲನೆಗೆ ಕಡಿವಾಣಕ್ಕೆ ನಾಗರಿಕರ ಆಗ್ರಹ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಪುಳಿತ್ತಡಿಯ ಸಮೀಪ ಮಂಗಳವಾರ ರಾತ್ರಿ ನಡೆದಿದೆ. ಬಜತ್ತೂರು ಗ್ರಾಮದ ಪಂರ್ದಾಜೆಯ ನಾಗೋಜಿ ನಿವಾಸಿ ಚೆನ್ನಪ್ಪ ಗೌಡರ ಪುತ್ರ ನಾರಾಯಣ ಗೌಡ (40) ಮೃತ ಪಟ್ಟವರು.

 

ಕೃಷಿಕರಾಗಿದ್ದ ನಾರಾಯಣ ಗೌಡರು ಉಪ್ಪಿನಂಗಡಿಗೆ ಬಂದಿದ್ದು, ಮಂಗಳವಾರ ರಾತ್ರಿ ಸುಮಾರು ಏಳೂವರೆಯ ಸುಮಾರಿಗೆ ಉಪ್ಪಿನಂಗಡಿ ಕಡೆಯಿಂದ ಮನೆಗೆ ಹಿಂದಿರುಗುವ ಮಧ್ಯೆ ಪುಳಿತ್ತಡಿ ಬಳಿಯ ಪದಾಳ ದೇವಾಲಯ ಸಮೀಪ ಇವರ ಬೈಕ್ ಗೆ ಪೆರಿಯಡ್ಕ ಕಡೆಯಿಂದ ಹಳೆಗೇಟು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕೃಷಿಕರಾಗಿದ್ದು, ಸುಮಾರು ಒಂದೂವರೆ ವರ್ಷದ ಗಂಡು ಮಗು, ಪತ್ನಿ, ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಟಿಪ್ಪರ್ ಚಾಲಕನ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ಸ್ಥಳದಲ್ಲಿ ಉಪ್ಪಿನಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್‌ಗಳ ಅತೀ ವೇಗಕ್ಕೆ ಕಡಿವಾಣ ಬೀಳಲಿ: ಅಕ್ರಮ, ಸಕ್ರಮ ಮರಳು, ಜಲ್ಲಿ, ಕೆಂಪುಕಲ್ಲು ಸಾಗಾಟಕ್ಕೆ ರಸ್ತೆ ಕಾಮಗಾರಿಯ ಕೆಲಸಕ್ಕೆ ಟಿಪ್ಪರ್ ಲಾರಿಗಳನ್ನು ಅತೀ ಹೆಚ್ಚು ಬಳಸುತ್ತಿದ್ದು, ಅದರ ಚಾಲಕರಿಗೆ ಟ್ರಿಪ್‌ನ ಆಧಾರದಲ್ಲಿ ಸಂಬಳ ನಿಗದಿಯಾಗಿರುತ್ತದೆ. ಆದ್ದರಿಂದ ಅವರು ನಿಗದಿತ ಸಮಯದಲ್ಲಿ ಹೋಗಬೇಕಾದ ಸ್ಥಳವನ್ನು ತಲುಪಲು ಅತೀ ವೇಗದಲ್ಲಿ ಹೋಗುತ್ತಿದ್ದು, ರಸ್ತೆಯಲ್ಲಿ ಟಿಪ್ಪರ್ ಗಳು ಯಮದೂತನಂತೆ ಓಡಾಡಿ, ಸಾವು- ನೋವಿಗೆ ಕಾರಣವಾಗುತ್ತಿವೆ. ಆದ್ದರಿಂದ ಅವುಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಕೇಳಿ ಬಂತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.