HomePage_Banner
HomePage_Banner
HomePage_Banner

ನ.5: ಪುತ್ತೂರಿನಲ್ಲಿ ಆರ್ಲಪದವು ಕಮ್ಯುನಿಕೇಶನ್ ಸೆಂಟರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಎಂಜೆ ಕಮ್ಯುನಿಕೇಶನ್ ಸೆಂಟರ್ ಅಧೀನದಲ್ಲಿರುವ ಆರ್‍ಲಪದವು ಕಮ್ಯುನಿಕೇಶನ್ ಸೆಂಟರ್‌ನ ಕಚೇರಿ ಮತ್ತು ಸೇವಾ ಕಾರ್‍ಯ ಉದ್ಘಾಟನೆ ನ.೫ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದರುಗಡೆಯ ಎ.ಎಂ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.

ಸೇವಾ ಕಾರ್‍ಯ ಉದ್ಘಾಟನೆಯಲ್ಲಿ ವಿಶೇಷ ಅಭ್ಯಾಗತರಾಗಿ ಸಯ್ಯದ್ ಹಸನ್ ಅಬ್ದುಲ್ಲ ಇಂಬಿಚ್ಚಿಕೋಯ ಗಾಳಿಮುಖ ಉಪಸ್ಥಿತರಿರಲಿದ್ದು ಕಚೇರಿ ಉದ್ಘಾಟನೆಯನ್ನು ಶಾಸಕ ಸಂಜೀವ ಮಠಂದೂರು ನೆರವೇರಿಸಲಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

ಶೈಕ್ಷಣಿಕ ಮಾಹಿತಿ ಹಾಗೂ ಕಾರ್‍ಯ ವಿಭಾಗವನ್ನು ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಲಿದ್ದು ವಿದ್ಯಾರ್ಥಿ ವೇತನ ಮಾಹಿತಿ ಹಾಗೂ ಸೇವಾ ಕಾರ್ಯವನ್ನು ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್ ಉದ್ಘಾಟಿಸಲಿದ್ದಾರೆ. ಕಾನೂನಾತ್ಮಕ ಸೇವೆಗಳ ಕಾರ್‍ಯ ವಿಭಾಗವನ್ನು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಉದ್ಘಾಟಿಸಲಿದ್ದು, ಸ್ಥಳಿಯ ಪಂಚಾಯತ್‌ಗಳ ಸವಲತ್ತುಗಳ ಮಾಹಿತಿ ಕಾರ್‍ಯ ವಿಭಾಗವನ್ನು ರಾಜ್ಯ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಬಡಗನ್ನೂರು ಉದ್ಘಾಟಿಸಲಿದ್ದಾರೆ. ಧಾರ್ಮಿಕ ಕೇಂದ್ರಗಳ ಸವಲತ್ತುಗಳ ಮಾಹಿತಿ ವಿಭಾಗ ಉದ್ಘಾಟನೆಯನ್ನು ಕುಂಬ್ರ ಕೆಐಸಿ ಅಧ್ಯಕ್ಷ ಅಹ್ಮದ್ ಹಾಜಿ ಆಕರ್ಷನ್ ನೆರವೇರಿಸಲಿದ್ದಾರೆ.

ಭೂದಾಖಲೆಗಳ ಸರಿಪಡಿಸುವಿಕೆ ಕಾರ್‍ಯ ವಿಭಾಗವನ್ನು ರೈ ಎಸ್ಟೇಟ್‌ನ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು ಎನ್‌ಟಿಟಿ ಪೂರ್ವ ಪ್ರಾಥಮಿಕ ಶಿಕ್ಷಕಿಯರ ತರಬೇತಿ ಕಾರ್‍ಯ ವಿಭಾಗವನ್ನು ಜ್ಞಾನ ಮಂದಾರ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಕಾರ್‍ಯದರ್ಶಿ ಸೋಮಶೇಖರ್ ಹಾಗೂ ಐ.ಸಿ ಕೈಲಾಸ್ ನೆರವೇರಿಸಲದ್ದಾರೆ. ಅಲ್ಲದೇ ಇನ್ನಿತರ ವಿವಿಧ ವಿಭಾಗಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ ಎಂದು ಆರ್‍ಲಪದವು ಕಮ್ಯುನಿಕೇಶನ್ ಸೆಂಟರ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.