HomePage_Banner
HomePage_Banner
HomePage_Banner

ಬಡಗನ್ನೂರು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
  • ಜನಪ್ರತಿನಿಧಿಗಳು ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡಬಾರದು: ಅನಿತಾ ಹೇಮನಾಥ ಶೆಟ್ಟಿ

ಪುತ್ತೂರು; ಚುನಾವಣೆ ಸಂದರ್ಭದಲ್ಲಿ ಮತ್ರ ರಾಜಕೀಯ ಇರಬೇಕು ಚುನಾವಣೆ ಮುಗಿದ ಬಳಿಕ ಯಾವೊಬ್ಬ ಜನಪ್ರತಿನಿಧಿಯೂ ಯಾವುದೇ ವಿಚಾರದಲ್ಲಿ ರಾಜಕೀಯ ಮಾಡಬಾರದು, ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡಲೇಬಾರದು ಎಂದು ನೆಟ್ಟಣಿಗೆ ಮುಡ್ನೂರು ಜಿಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

ಅವರು ನ. ೪ ರಂದು ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರ ವ್ಯಾಪ್ತಿಯ ಬಡಗನ್ನೂರು ಗ್ರಾಮದ ನೆಕ್ರಾಜೆ- ಬಾಣಪದವು ಮತ್ತು ಬಡಗನ್ನೂರು ಗ್ರಾಪಂ ಕಚೇರಿ ಬಳಿ ಕುಡಿಯುವ ನೀರಿನ ಯೋಜನೆಯನ್ನು ಲೋಕಾರ್ಪಣೆಗೈದು ಮಾತನಾಡಿದರು.

ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರದ ಬಡಗನ್ನೂರು, ಪಡುವನ್ನೂರು, ಕೆಯ್ಯೂರು, ಕೆದಂಬಾಡಿ, ಕೊಳ್ತಿಗೆ, ಅರಿಯಡ್ಕ, ಮಾಡ್ನೂರು ಮತ್ತು ನೆಟ್ಟಣಿಗೆ ಮುಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜನತೆಯ ಬೇಡಿಕೆಗೆ ಪೂರಕವಾಗಿ ಕೆಲಸಕಾರ್ಯಗಳು ನಡೆದಿದೆ. ೫ ವರ್ಷದಲ್ಲಿ ಅತೀ ಹೆಚ್ಚು ಅನುದಾನವನ್ನು ವಿವಿಧ ಗ್ರಾಮಗಳಿಗೆ ನೀಡಿದ್ದೇನೆ. ಅನುದಾನ ಹಂಚಿಕೆಯಲ್ಲಿ ಲೆವಲೇಶವೂ ರಾಜಕೀಯ ಮಾಡಿಲ್ಲ. ಗ್ರಾಮಸ್ಥರ ಬೇಡಿಕೆಗನುಸಾರವಾಗಿ ಕುಡಿಯುವ ನೀರಿನ ಟ್ಯಾಂಕ್, ಕಾಂಕ್ರೀಟ್ ರಸ್ತೆ, ಕೊಳವೆ ಬಾವಿ, ಶಾಲಾ ಕಟ್ಟಡ ದುರಸ್ಥಿ, ಅಂಗನವಾಡಿ ಕಟ್ಟಡ ದುರಸ್ಥಿ, ದೈವಸ್ಥಾನಗಳ ಅಭಿವೃದ್ದಿ , ತಡೆಗೋಡೆ ಸೇರಿದಂತೆ ಹತ್ತು ಹಲವು ಯೋಜನೆಗಳ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಬಡಗನ್ನೂರು ಗ್ರಾಮದ ನೆಕ್ರಾಜೆ- ಬಾಣಜಾಲು ಮತ್ತು ಗ್ರಾಪಂ ಕಚೇರಿ ಬಳಿ ಕುಡಿಯುವ ನೀರು ಯೋಜನೆಯನ್ನು ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು ಅದನ್ನು ಈಡೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮದ ಪ್ರತೀ ಕಡೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಬಾರದು ಎಂದು ಉದ್ದೇಶದಿಂದ ಜಲಜೀವನ್ ಯೋಜನೆಯಿಂದ ಜಿಪಂ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಅತೀ ಹೆಚ್ಚು ಅನುದಾನವನ್ನು ತರಿಸುವಲ್ಲಿ ಸಫಲಳಾಗಿದ್ದೇನೆ. ಇದೇ ರೀತಿ ಗ್ರಾಮದ ಪ್ರತೀ ಒಳರಸ್ತೆಗಳೂ ಕಾಂಕ್ರೀಟ್ ರಸ್ತೆಯಾಗಬೇಕು ಎಂಬ ಕನಸು ಇದೆ ಅದನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಗುರುಪ್ರಸಾದ ರೈ ಕುದ್ಕಾಡಿ, ಪುರಂದರ ರೈ ಎಂ ಜಿ, ಪುರಂದರ ರೈ ಕುಡ್ಕಾಡಿ, ಸ್ಥಳೀಯ ಮುಖಂಡರುಗಳಾದ ಜಯರಾಜ್ ರೈ ಅಣಿಲೆ,ಸುಮಂತ್ ರೈ ಕುದ್ಕಾಡಿ,ಸೂಫಿ ಮಿನೋವು, ಸಿದ್ದಿಕ್ ಕೊಯಿಲ, ತ್ಯಾಂಪಣ್ಣ ಮೂಲ್ಯ ಸಿ ಚ್, ನಾರಾಯಣ ಪೂಜಾರಿ, ಹರೀಶ್ ಪೂಜಾರಿ ಕುದ್ಕಾಡಿ, ಸಿರಾಜುದ್ದೀನ್ ಅಣಿಲೆ,ವಸಂತ್ ದೊಡ್ಡಡ್ಕ ಪ್ರಕಾಶ್ ನೇರೊಳ್ತಡ್ಕ,ವಿಲಾಸ್ ದೊಡ್ಡಡ್ಕ ಹಾಗೂ ಬಡಗನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸೀಂ ಗಂಧದ, ಕಾರ್ಯದರ್ಶಿ ಶಾರದಾ ಕೆ ಹಾಗೂ ನಾಗರಿಕರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.