HomePage_Banner
HomePage_Banner
HomePage_Banner

ನಗರಸಭೆ ಆಡಳಿತ ಪಕ್ಷಕ್ಕೆ ವಿಪಕ್ಷ ನಾಯಕರಾಗಿ ಶಕ್ತಿ ಸಿನ್ಹ ಆಯ್ಕೆ | ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಘೋಷಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭೆ ಆಡಳಿತ ಪಕ್ಷಕ್ಕೆ ವಿಪಕ್ಷ ನಾಯಕರನ್ನಾಗಿ ಶಕ್ತಿ ಸಿನ್ಹ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅವರು ಘೋಷಣೆ ಮಾಡಿದರು.

ನ.4ರಂದು ಪಕ್ಷದ ಕಚೇರಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಮಾರ್ಗದರ್ಶನದಂತೆ ಪಕ್ಷದ ಮುಖಂಡರು ಮತ್ತು ನಗರಸಭೆ ಕಾಂಗ್ರೆಸ್ ಸದಸ್ಯರಾದ ಯೂಸಫ್(ಡ್ರೀಮ್), ಶಕ್ತಿ ಸಿನ್ಹಾ, ರಾಬಿನ್ ತಾವ್ರೋ, ಮಹಮ್ಮದ್ ರಿಯಾಝ್ ಉಪಸ್ಥಿತಿಯಲ್ಲಿ ಘೋಷಣೆ ಮಾಡಿದರು. ಕಾಂಗ್ರೆಸ್‌ನ ನಗರಸಭೆ ಸದಸ್ಯರ ಪೈಕಿ ಶೈಲಾ ಪೈ ಗೈರಾಗಿದ್ದರೂ ಅವರೊಂದಿಗೆ ದೂರವಾಣಿ ಸಂಪರ್ಕ ಮಾಡಿ ಅವರ ಒಪ್ಪಿಗೆ ಪಡೆದು ಕೊಳ್ಳಲಾಗಿದೆ ಎಂದು ಮಹಮ್ಮದ್ ಬಡಗನ್ನೂರು ತಿಳಿಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ನಗರಸಭಾ ಸದಸ್ಯರಾದ ಯೂಸಫ್(ಡ್ರೀಮ್), ಶಕ್ತಿ ಸಿನ್ಹಾ, ರಾಬಿನ್ ತಾವ್ರೋ, ಮಹಮ್ಮದ್ ರಿಯಾಝ್, ಕೆಪಿಸಿಸಿ ಸದಸ್ಯ ಎಮ್ ಬಿ ವಿಶ್ವನಾಥ ರೈ, ಪೂಡಾದ ಮಾಜಿ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ವಿ, ಸೇವಾ ದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ಕಾಂಗ್ರೆಸ್ ಮುಖಂಡ ದಿನೇಶ್ ಪಿ.ವಿ, ಶಶಿಕಿರಣ್, ಗಂಗಾಧರ್ ರೈ ಎಳಿಕ, ಇಸಾಕ್ ಸಾಲ್ಮರ, ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ರೋಸ್‌ಮೇರಿ ಮತ್ತಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.