HomePage_Banner
HomePage_Banner
HomePage_Banner

ತಾ.ಯುವ ಬಂಟರ ಸಂಘದ ಆಶ್ರಯದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಭಿಷೇಕ್ ಶೆಟ್ಟಿರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1


ಚಿತ್ರ- ಜೀತ್ ಪುತ್ತೂರು

ವರದಿ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: 2019ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ನಡುಬೈಲು ಅಭೀಷೇಕ್ ಶೆಟ್ಟಿ ಮನವಳಿಕೆಗುತ್ತುರವರನ್ನು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಪುತ್ತೂರು ತಾಲೂಕು ಬಂಟರ ಸಂಘ, ಮಹಿಳಾ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಕಾರದಲ್ಲಿ ನ.4ರಂದು ಪುತ್ತೂರು ಸುಂದರ್ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಛಾವಡಿ ಸನ್ಮಾನವನ್ನು ಮಾಡಿ ಗೌರವಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾತೃ ಸಂಘದ ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈ, ಬಂಟರ ಸಂಘದ ನಿಕಟಪೂರ್ವ ಪ್ರಧಾನ ಕಾರ್‍ಯದರ್ಶಿ ಶಶಿಕುಮಾರ್ ರೈ ಬಾಲ್ಯೊಟ್ಟುರವರುಗಳು ಏಕಲವ್ಯ ಪ್ರಶಸ್ತಿ ವಿಜೇತ ಅಭಿಷೇಕ್ ಶೆಟ್ಟಿ ಅಭಿನಂದಿಸಿ, ಸಂದಬೋಚಿತವಾಗಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಅಭಿಷೇಕ್ ಶೆಟ್ಟಿರವರು ಕೃತಜ್ಞತೆ ಸಲ್ಲಿಸಿದರು. ಸಮಾರಂಭದಲ್ಲಿ ಅಭಿಷೇಕ್ ಶೆಟ್ಟಿಯವರ ತಂದೆ ಜಗನ್ನಾಥ ಶೆಟ್ಟಿ ನಡುಬೈಲು, ತಾಯಿ ತುಳಸಿ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಬಂಟರ ಸಂಘದ ಕೋಶಾಧಿಕಾರಿ ನಿತ್ಯಾನಂದ ಶೆಟ್ಟಿ ಮನವಳಿಕೆ, ನಿರ್ದೇಶಕ ಸಾಜ ಸಂತೋಷ್ ಶೆಟ್ಟಿ, ಕಾವು ದಿವ್ಯನಾಥ್ ಶೆಟ್ಟಿ, ಬಂಟರ ಸಂಘದ ನಿಕಟಪೂರ್ವ ಕೋಶಾಧಿಕಾರಿ ರಮೇಶ್ ರೈ ಡಿಂಬ್ರಿ, ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಮಹಿಳಾ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ವತ್ಸಲಾ ಪದ್ಮನಾಭ ಶೆಟ್ಟಿ, ಮಲ್ಲಿಕಾ ಜೆ ರೈ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೂಪರೇಖಾ, ಗುಣಧರ್ ರೈ, ಉಮಾಪ್ರಸಾದ್ ರೈ ನಡುಬೈಲು, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪ್ರಣಮ್ ಶೆಟ್ಟಿ, ಮಾಜಿ ಅಧ್ಯಕ್ಷ ಪುನೀತ್ ರೈ ಕುರಿಯ ಏಳ್ನಾಡುಗುತ್ತು, ಶ್ರೀರಾಮ್ ಪಕ್ಕಳ ಕರ್ನೂರು, ಭರತ್ ರೈ ಪಾಲ್ತಾಡು, ಮಮತಾ ಪ್ರಭಾಕರ್ ಶೆಟ್ಟಿ, ಶಾನ್ಯ ಶೆಟ್ಟಿ, ರವಿಚಂದ್ರ ರೈ ಕುಂಬ್ರ, ದಿವಿತ್ ಯು ರೈ, ಪವಿತ್ ಯು. ರೈ, ಹಿಮಾಂಶು ಆರ್ ಶೆಟ್ಟಿ ಉಪಸ್ಥಿತರಿದ್ದರು. ಯುವ ಬಂಟರ ಸಂಘದ ಕ್ರೀಡಾ ಸಂಚಾಲಕ ಶಶಿರಾಜ್ ರೈ ಸನ್ಮಾನಿತರ ಪರಿಚಯಗೈದರು, ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಂಬಳತಡ್ಡರವರು ಸನ್ಮಾನ ಪತ್ರವಾಚಿಸಿದರು, ಸದಾಶಿವ ಶೆಟ್ಟಿ ಮಾರಂಗ ವಂದಿಸಿದರು. ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು ಕಾರ್‍ಯಕ್ರಮ ನಿರೂಪಿಸಿದರು. ಯುವ ಬಂಟರ ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆರವರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.