HomePage_Banner
HomePage_Banner
HomePage_Banner

ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಗೊಳಪಟ್ಟ `ಸಿ’ ಗ್ರೇಡ್ ಗೆ ಸೇರಿದ ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಸರಕಾರದ ನಿಯಾಮಾವಳಿಯಂತೆ ಸಮಿತಿಗೆ ಒಟ್ಟು 9 ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪ.ಜಾತಿ ಮತ್ತು ಪ.ಪಂಗಡದಿಂದ ವಿಶ್ವನಾಥ ನಾಯ್ಕ ಪುಡಿಂಕಲಡ್ಕ, ಎರಡು ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿದ್ದು ಜಾನಕಿ ಹೊಸಮನೆ ವೀರಮಂಗಲ ಮತ್ತು ಭಾರತಿ ಕಾಡಮನೆ ವೀರಮಂಗಲ, ಸಾಮಾನ್ಯ ಕ್ಷೇತ್ರದಿಂದ ಬಿ.ಶಿವರಾಮ ಭಟ್ ಬಾವ ಮನೆ ವೀರಮಂಗಲ, ಬೆಳಿಯಪ್ಪ ಗೌಡ ಪೆಲತ್ತಡಿ, ನಾರಾಯಣ ರೈ ಹೊಳರಾಡಿ, ಪುನೀತ್ ಕೆ.ಕೆ ಕೈಲಾಜೆ, ಗೋಪಾಲಕೃಷ್ಣ ಪಡಿಬಾಗಿಲು ಹಾಗೂ ಒಂದು ಸ್ಥಾನವನ್ನು ದೇವಸ್ಥಾನದ ಅರ್ಚಕರಿಗೆ ಮೀಸಲಾಗಿದ್ದು ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯರವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.