HomePage_Banner
HomePage_Banner
HomePage_Banner

ಅಲ್ ಜಾಝ್ ಪ್ರೆಶ್ ಚಿಕನ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತೂರು: ಡೈಲಿ ಪ್ರೆಶ್ ಚಿಕನ್ ಹಾಗೂ ಅಡುಗೆಗೆ ಬಳಸಲು ಸಿದ್ದವಾದ ಆಹಾರ ಮತ್ತು ತಿಂಡಿಗಳ ಮಳಿಗೆ ಅಲ್-ಜಾಝ್ ಪ್ರೆಶ್ ಚಿಕನ್ ನ.5ರಂದು ದರ್ಬೆ ಮುಖ್ಯ ರಸ್ತೆಯ ಮೊಯ್ದಿನ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಸರ್ಫುದ್ದೀನ್ ತಂಞಲ್ ಸಾಲ್ಮರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರಿಗೆ ಆರೋಗ್ಯಕ್ಕೆ ಆವಶ್ಯಕವಾದ ಶುದ್ದ ಆಹಾರಗಳನ್ನು ನೀಡುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಪ್ರಾರಂಭಗೊಂಡಿರುವ ಅಲ್ ಜಾಝ್ ಪೆಶ್ ಚಿಕನ್ ಮಳಿಗೆಯು ಉತ್ತಮ ಸೇವೆ ನೀಡುವ ಮೂಲಕ ಈ ನಾಡಿನ ಜನತೆಗೆ ಸದುಪಯೋಗುವಂತ ಸಂಸ್ಥೆಯಾಗಿ ಬೆಳೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಚಿಕನ್‌ನಲ್ಲಿ ವಿವಿಧ ರೀತಿಯ ಉತ್ಪನ್ನಗಳ ನೀಡುವ ಈ ಸಂಸ್ಥೆಯ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುವಂತ ಸಂಸ್ಥೆಯಾಗಿ ಬೆಳೆಯಲಿ. ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸುವ ಮುಖಾಂತರ ಹಲವು ಶಾಖೆಗಳು ತೆರೆಯುವಂತಾಗಲಿ ಎಂದು ಹಾರೈಸಿದರು.

ರೋಟರಿ ಕ್ಲಬ್‌ನ ಜಿಲ್ಲಾ ಪ್ರೊಜೆಕ್ಟರ್ ಆಸ್ಕರ್ ಆನಂದ್ ಮಾತನಾಡಿ, ನೂತನ ಸಂಸ್ಥೆಯ ಎಲ್ಲಾ ವರ್ಗದ ಗ್ರಾಹಕರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಬೆಳೆಯುವ ಮುಖಾಂತ ಸಮಾಜದ ಸೌಹಾರ್ಧತೆ ಸಹಕಾರಿಯಾಗಲಿ ಎಂದರು.

ನಗರ ಸಭಾ ಮಾಜಿ ಸದಸ್ಯ ಮಹಮ್ಮದ್ ಆಲಿ ಮಾತನಾಡಿ, ಜಿಲ್ಲಾ ಕೇಂದ್ರವಾಗಲಿ ಅರ್ಹತೆ ಹೊಂದಿರುವ ಪುತ್ತೂರಿಗೆ ಇಂತಹ ಮಳಿಗೆಗಳ ಆವಶ್ಯಕತೆವಾಗಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದಲ್ಲಿ ವಿಶಿಷ್ಟ ರೀತಿಯಲ್ಲಿ ಚಿಕನ್‌ನ ವಿವಿಧ ಉತ್ಪನ್ನಗಳಾಗಿ ನೀಡುವಂತ ಸಂಸ್ಥೆಯಾಗಿದೆ. ಕೋಳಿ ಉದ್ಯಮವು ಇತರ ಉದ್ಯಮಗಳಂತಲ್ಲ. ಕೋಳಿ ಒಂದೇ ರೀತಿಯಿಂದ ನಿರ್ವಹಿಸಿಕೊಂಡು ಹೋಗುವಂತೆ ವ್ಯಾಪಾರವಾಗಿದೆ ಎಂದರು. 

ಪದ್ಮಶ್ರೀ ಸೋಲಾರ್ ಮ್ಹಾಲಕ ಸೀತಾರಾಮ ರೈ ಕೆದಂಬಾಡಿ ಮಾತನಾಡಿ, ವ್ಯಾಪಾರದಲ್ಲಿ ಲಾಭದ ಉದ್ದೇಶವೇ ಮುಖ್ಯವಲ್ಲ. ಇದರಲ್ಲಿ ಏಳು ಬೀಳುಗಳೇ ಸಾಮಾನ್ಯವಾಗಿದ್ದು ಅವುಗಳನ್ನು ನಿಭಾಯಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಯಶಸ್ಸನ್ನು ಕಾಣಬಹುದು ಎಂದರು.

ರಶೀದ್ ವಿಟ್ಲ ಮಾತನಾಡಿ, ಜಾಝ್ ಎಂಬ ಅಲ್ ಜಾಝ್ ಪ್ರೆಶ್ ಚಿಕನ್ ಇತರ ಕೋಳಿ ಅಂಗಡಿಗಳಂತಲ್ಲ. ಇಲ್ಲಿ ನೈಸರ್ಗಿಕ ಹಾಗೂ ಆರೋಗ್ಯಕರ ಪ್ರೆಶ್ ಚಿಕನ್ ದೊರೆಯಲಿದೆ. ಜೊತೆಗೆ ಅಡುಗೆಗೆ ಬಳಸಲು ಸಿದ್ದವಾದ ಚಿಕನ್‌ನ ವಿವಿಧ ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿದೆ. ಈ ಸಂಸ್ಥೆಯ ಪುತ್ತೂರಿನ ಮುತ್ತುವಾಗಿ ಉತ್ತಮ ಬ್ರಾಂಡ್ ಆಗಿ ಹತ್ತೂರಿಗೂ ಪಸರಿಸಲಿ ಎಂದರು.

ದರ್ಬೆ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಹನೀಫಿ, ದರ್ಬೆ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಕಲ್ಲೇಗ ಮಸೀದಿಯ ಖತೀಬ್ ಸಿದ್ದೀಕ್ ಜಲಾಲಿ, ಬನ್ನೂರು ಮಸೀದಿಯ ಖತೀಬ್ ಮಲ್ಲಿ ಸಖಾಫಿ, ಸಾಕೀರ್ ಅಳಕೆಮಜಲು, ಶಾಕಿರ್ ಹಾಜಿ ಎಡ್ವಕೇಟ್ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು. ಯಾಕೂಬ್ ಹಾಜಿ ದರ್ಬೆಯವರು ಪ್ರಥಮ ಖರೀದಿ ಮಾಡಿದರು.

ಏನೆಲ್ಲಾ ಉತ್ಪನ್ನತಗಳಿವೆ….!
ಚರ್ಮ ಸಹಿತ ಮತ್ತು ಚರ್ಮ ರಹಿತ ವೋಲ್ ಚಿಕನ್, ಡ್ರಮ್ ಸ್ಟಿಕ್, ಚಿಕನ್ ವೋಲ್ ಲೆಗ್, ಚಿಕನ್ ಬೋನ್ ಲೆಸ್ ಲೆಗ್, ಚಿಕನ್ ಬ್ರೆಸ್ಟ್, ಚಿಕನ್ ಖೀಮಾ, ಚಿಕನ್ ಲಾಲಿಪಪ್, ವಿಂಗ್ಸ್, ಚಿಕನ್ ಕರಿ ಕಟ್, ಚಿಕನ್ ಗಿಝಾರ್ಡ್, ಲಿವರ್ ಮೊದಲಾದ ಕೋಳಿಯ ವಿವಿಧ ಅವಯವಗಳು ಪ್ರತ್ಯೇಕ ಪ್ರತ್ಯೇಕವಾಗಿ ಗ್ರಾಹಕರಿಗೆ ಆವಶ್ಯಕವಿರುವ ಪ್ರಮಾಣದಲ್ಲಿ ದೊರೆಯಲಿದೆ. ಇದರ ಜೊತೆಗೆ ಕೋಳಿಯ ರೆಡಿ ಟು ಫ್ರೈ ಸಾಮಾಗ್ರಿಗಳಾದ ಸಮೋಸ, ನಗ್ಗೆಟ್ಸ್, ಕಟ್ಲೆಟ್, ಸೀಕ್ ಕಬಾಬ್, ಬರ್ಗರ್ ಪಟ್ಟಿ ಮೊದಲಾದವುಗಳು, ಮಟನ್ ಪಟ್ಟಿ, ಕೋಲ್ಡ್ ಕೋಟೋ, ವೆಜ್, ಮೊಮೋಸ್, ಸೀಫುಡ್, ಇತರ ಐಟಮ್ಸ್, ಪರೋಟಾ, ಟೋರ್ಟಿಲ್ಲಾ ವ್ರಾಪ್ ಗಳು ತಿಂಡಿ ಪ್ರಿಯರಿಗೆ ಇಲ್ಲಿ ಸುಲಭದಲ್ಲಿ ದೊರಕಲಿವೆ. ಪುತ್ತೂರಿನ ೫ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಉಚಿತ ಡೋರ್ ಡೆಲಿವೆರಿ ವ್ಯವಸ್ಥೆ ಕೂಡಾ ಇದೆ ಎಂದು ಮಾಲಕ ಇಮ್ರಾನ್ ವಿಟ್ಲ ತಿಳಿಸಿದ್ದಾರೆ.

ನಗರ ಸಭಾ ಸದಸ್ಯ ಮನೋಹರ್ ಕಲ್ಲಾರೆ, ಟೋಪ್ಕೊ ಜುವೆಲ್ಲರಿ ಮಾಲಕ ಮಹಮ್ಮದ್, ರಾಜದಾನಿ ಜುವೆಲ್ಲರಿ ಪಾಲುದಾರರಾದ ಹಂಝಾ, ನ್ಯಾಯವಾದಿ ಶಾಕಿರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ, ಎಸ್ ಎಸ್ ಸ್ಕೇಲ್ ಬಜಾರ್‌ನ ಶಮೀರ್, ರಾಘವೇಂದ್ರ ಪ್ರೇಮ್ ವರ್ಕ್ಸ್‌ನ ಅಣ್ಣು ಪೂಜಾರಿ, , ಸ್ಟಾರ್ ಮೆಡಿಕಲ್‌ನ ಜಿಯಾದ್, ಸಿಟಿ ಬಜ಼ಾರ್ ಕೆ.ಹಸನ್, ಕಟ್ಟಡದ ಮಾಲಕರಾದ ಲತೀಫ಼್ ದರ್ಬೆ, ಪಾರಿಸ್ ದರ್ಬೆ, ಸಲ್ಮಾನ್ ದರ್ಬೆ, ಬಶೀರ್ ದರ್ಬೆ, ರಾಹಿಲ್ ದರ್ಬೆ, ಶಕೀಲ್ ದರ್ಬೆ, ಕ್ರಷ್ಣ ಲಾಂಡ್ರಿ ಹೊನ್ನಪ್ಪ ಕಾವು, ಉಬೈದ್ ವಿಟ್ಲ, ಇಬ್ರಾಹಿಮ್ ಪಾಣೆಮಂಗಳೂರು, ಇಸಾಕ್ ಮಾಡಾವು, ಆರಿಸ್ ಕೊಡುಂಗಾಯಿ, ಉಬೈದ್ ವಿಟ್ಲ ಬಜಾರ್, ವಿಟ್ಲ ಮೊಹಮ್ಮದ್ ಅಲಿ ಸೇರಿದಂತೆ ಹಲವು ಮಂದಿ ಪ್ರಮುಖರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು. ಸಂಸ್ಥೆಯ ಪಾಲುದಾರರಾದ ಮಾಲಕರಾದ ಇಂಬ್ರಾನ್ ವಿಟ್ಲ ಮತ್ತು ಮಸೂದ್ ವಿಟ್ಲರವರು ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ರಫೀಕ್ ದರ್ಬೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.