HomePage_Banner
HomePage_Banner
HomePage_Banner

ಬಜ್ಪೆ ವಿಮಾನ ನಿಲ್ದಾಣ ಖಾಸಗೀಕರಣ ಖಂಡಿಸಿ ನ.9ರಂದು ಕೆಂಜಾರಿನಲ್ಲಿ ಪ್ರತಿಭಟನೆ: ಮಾಜಿ ಸಚಿವ ರಮಾನಾಥ ರೈ

Puttur_Advt_NewsUnder_1
Puttur_Advt_NewsUnder_1

ಮಂಗಳೂರು: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಮಂಗಳೂರಿನ ಪ್ರತಿಷ್ಠಿತ ಬಜ್ಪೆ ವಿಮಾನ ನಿಲ್ದಾಣವನ್ನು ಖಾಸಗಿಯಾಗಿ ಅದಾನಿ ಗ್ರೂಪಿಗೆ ವಹಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ತೀವ್ರ ಹೋರಾಟವನ್ನು ನಡೆಸಲು ಉದ್ದೇಶಿಸಿದ್ದು, ನ.9ರಂದು ಕೆಂಜಾರುನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಭಾಭವನ ಮಲ್ಲಿಕಟ್ಟೆಯಲ್ಲಿ ನ.5ರಂದು ಜರುಗಿದ ಡಿಸಿಸಿ ವಿಶೇಷ ಸಭೆಯಲ್ಲಿ ಹೇಳಿದರು.

ಪಂಡಿತ್ ಜವಾಹರ್ ಲಾಲ್ ನೆಹರು, ಶ್ರೀನಿವಾಸ್ ಮಲ್ಯರ ದೂರದೃಷ್ಟಿತ್ವದಲ್ಲಿ ನಿರ್ಮಾಣಗೊಂಡ ಬಜ್ಪೆ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪಿಗೆ ಮಾರಾಟ ಮಾಡಿರುವುದು ಜಿಲ್ಲೆಗೆ ಬಗೆದ ದ್ರೋಹವಾಗಿದೆ. ಪರಿಶಿಷ್ಟ ವರ್ಗದವರು ಅಂದು ಕೊಡುಗೆಯಾಗಿ ನೀಡಿರುವ ಸ್ಥಳದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣವನ್ನು ಇಂದು ಅದಾನಿಗೆ ಮಾರಾಟ ಮಾಡಿದ್ದು, ವಿಜಯ ಬ್ಯಾಂಕನ್ನು  ಗುಜರಾತ್ ಮೂಲದ ನಷ್ಟದಲ್ಲಿದ್ದ ಬರೊಡಾ ಬ್ಯಾಂಕ್ ಜೊತೆ ವಿಲೀನಗೊಳಿಸಿ ಸುಂದರ ರಾಮ್ ಶೆಟ್ಟಿಯವರ ಹೆಸರನ್ನು ಅಳಿಸಿ ಹಾಕಿರುವ ಮೋದಿ ಸರಕಾರದ ಜನವಿರೋಧಿ ನೀತಿಯನ್ನು ಜಿಲ್ಲೆಯ ಜನರು ಕ್ಷಮಿಸಲಾರರು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದು, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಜಿಲ್ಲಾ ಯುವ ಕಾಂಗ್ರೆಸ್  ಅಧ್ಯಕ್ಷ ಮಿಥುನ್ ರೈ, ಮ.ನ.ಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ತಾ.ಪಂ. ಅಧ್ಯಕ್ಷ ಮಲಾರ್ ಮೋನು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಪೊರೇಟರ್ ಗಳು, ಜಿಲ್ಲಾ ಪಂಚಾಯತ್ ಸದಸ್ಯರುಗಳು, ಸ್ಥಳೀಯ ಬ್ಲಾಕ್ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.