HomePage_Banner
HomePage_Banner
HomePage_Banner

ಎ.ಎಸ್ ಫಾತಿಮಾ ಎಂಟರ್ ಪ್ರೈಸಸ್ ನೆಕ್ಕರೆ ಆಲಂಕಾರಿನಲ್ಲಿ ಲಕ್ಕಿ ಕೂಪನ್ ಮತ್ತು ಫೀನೊ ಮೈಕ್ರೋ ಎ.ಟಿ.ಎಮ್ ಬ್ಯಾಕಿಂಗ್ ವ್ಯವಸ್ಥೆ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಎ.ಎಸ್.ಫಾತಿಮಾ ಎಂಟರ್ ಪ್ರೈಸಸ್ ನೆಕ್ಕರೆ ಆಲಂಕಾರು ಬಿ.ಪಿ.ಸಿ.ಎಲ್ ಪೇಟ್ರೋಲ್ ಪಂಪ್ ನಲ್ಲಿ ಲಕ್ಕಿಕೂಪನ್ ಮತ್ತು ಫೀನೊ ಮೈಕ್ರೋ ಎ.ಟಿ.ಎಮ್ ಬ್ಯಾಕಿಂಗ್ ವ್ಯವಸ್ಥೆ ಅ.5 ರಂದು ಪ್ರಾರಂಭಗೊಂಡಿತು. 

ಇದರ ಉದ್ಘಾಟನೆಯನ್ನು ಸಂಸ್ಥೆಯ ಮಾಲಕರಾದ ಪಿ.ಆದಂ ಹಾಜಿಯವರು ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಐದು ನೂರ ಕ್ಕಿಂತಲೂ ಹೆಚ್ಚು ಪೇಟ್ರೂಲ್ ಮತ್ತು ಒಂದು ಸಾವಿರಕ್ಕಿಂತಲೂ ಹೆಚ್ಚು ಡೀಸಲ್ ಖರೀದಿ ಮಾಡಿದವರಿಗೆ ಒಂದು ಲಕ್ಕಿ ಕೂಪನ್ ನನ್ನು ಸಂಸ್ಥೆಯ ವತಿಯಿಂದ ಗ್ರಾಹಕರಿಗೆ ನೀಡಲಾಗುವುದು ಅದನ್ನು ಪ್ರತಿ ತಿಂಗಳ 5ರಂದು ಡ್ರಾ ಮಾಡಲಾಗುವುದು ಹಾಗು ವಿಜೇತರಿಗೆ ಒಂದು ಗ್ರಾಮ್ ನ ಚಿನ್ನದ ನಾಣ್ಯ ನೀಡುವುದಾಗಿ ತಿಳಿಸಿ ಗ್ರಾಹಕರ ಹಿತದೃಷ್ಟಿಯಿಂದ ಫೀನೊ ಎ.ಟಿ.ಎಮ್ ಬ್ಯಾಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು ಇದರಿಂದ ಬ್ಯಾಕಿಂಗ್ ವ್ಯವಸ್ಥೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಗ್ರಾಹಕರಿಗೆ ಸಿಗಲಿದ್ದುಇದರಿಂದ ಗ್ರಾಹಕರಿಗೆ ಅನೂಕುಲವಾಗಲಿದೆ .ನೂರು ಲೀಟರ್ ಡೀಸಿಲ್ ಖರೀದಿಗೆ ಪ್ರತಿ ಲೀಟರ್ ಗೆ ನಮ್ಮ ಸಂಸ್ಥೆಯಲ್ಲಿ ಇಪ್ಪತ್ತು ಪೈಸೆ ರಿಯಾಯತಿ ದೊರೆಯಲಿದ್ದು.ಬಿ.ಪಿ.ಸಿ.ಎಲ್ ವತಿಯಿಂದ ಫ್ಲೀಟ್ ಕಾಡ್೯ ರಿಜಿಸ್ಟಾರ್ ಗ್ರಾಹಕರಿಗೆ ಪ್ರತಿ ಲೀಟರ್ ಗೆ 50 ಪೈಸೆ ರಿಯಾಯಿತಿ ಹಾಗು ವಿಮಾ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಬಿ.ಪಿ.ಸಿ.ಎಲ್ ದ.ಕ ಜಿಲ್ಲೆಯ ಸೇಲ್ಸ್ ಮ್ಯಾನೇಜರ್ ಅಶ್ವಿನ್ ಎ ಮೋಹನ್ ಮತ್ತು ಫ್ಲೀಟ್ ಸೇಲ್ಸ್ ಅಸಿಸ್ಟೆಂಟ್ ಮ್ಯಾನೇಜರ್ ವಿ.ವಿ ಗಿರಿಶಂಕರ್ ಸಂದೋರ್ಭಚಿತವಾಗಿ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು.ಉದ್ಯಮಿಗಳಾದ ವಿನೋದ್ ಕೂಮರ್ ರೈ.ಎಂ, ರಾಧಕೃಷ್ಣ ರೈ ಪರಾರಿಗುತ್ತು, ಲತೀಫ್ ಮೆಹಬೂಬ್ ಹಾಗು ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಅಗಮಿಸಿದ ಗ್ರಾಹಕರಿಗೆ ಲಕ್ಕಿ ಕೂಪನ್ ನನ್ನು ವಿತರಿಸಲಾಯಿತು. ಸಂಸ್ಥೆಯ ಮ್ಯಾನೇಜರ್ ಯಾಸೀರ್ ಪಿಲಿಕುಡೇಲ್,ಅಸಿಸ್ಟೆಂಟ್ ಮ್ಯಾನೇಜರ್ ಅನ್ಸರ್ ಸ್ವಾಗತಿಸಿ ,ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.