HomePage_Banner
HomePage_Banner
HomePage_Banner

ಕಡಬದಲ್ಲಿ ಇಲೆಕ್ಟ್ರೀಕಲ್ ಟು ವೀಲರ್ ಶೋರೂಮ್ ಗೋಗ್ರೀನ್ ಮೋಟಾರ್‍ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಟೋಮ್ ಬಜಾರ್ ಸಮೀದ ಶ್ರೀಲಕ್ಷ್ಮೀ ಟವರ್ಸ್‌ನಲ್ಲಿ ಇಲೆಕ್ಟ್ರೀಕಲ್ ದ್ವಿಚಕ್ರ ವಾಹನಗಳ ಮಳಿಗೆ ಗೋಗ್ರೀನ್ ಮೋಟರ್ಸ್ ನ.5ರಂದು ಶುಭಾರಂಭಗೊಂಡಿತು.

ಜೆಸಿಐ ವಲಯಾಧಿಕಾರಿ ರವಿ ಕಕ್ಕೆಪದವು ಅವರು ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ತೈಲ ಬೆಲೆ ಏರಿಳಿತಗಳ ನಡುವೆ ಪ್ರಸ್ತುತ ಸಮಯಕ್ಕೆ ಬ್ಯಾಟರಿ ಚಾಲಿತ ವಾಹನಗಳು ಅಗತ್ಯವಾಗಿದೆ. ಪರಿಸರ ಸ್ನೇಹಿ ಇಲೆಕ್ಟ್ರೀಕಲ್ ವಾಹನಗಳ ಬಳಕೆ ಹೆಚ್ಚಾಗಲಿ ಸಂಸ್ಥೆಯು ಇನ್ನಷ್ಟು ಅಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಕೆ.ವಾಸುದೇವ ಗೌಡ ಕೊಳ್ಳೆಸಾಗು ದೀಪ ಪ್ರಜ್ವಲನೆ ಮಾಡಿದರು. ಬಳಿಕ ಮಾತನಾಡಿ ಈ ಸಂಸ್ಥೆಯ ಅಭಿವೃದ್ದಿಗೆ ಜನರ ಸಹಕಾರ ಅಗತ್ಯ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಪಿ.ವೈ ಕುಸುಮ ಅವರು ಮಾತನಾಡಿ, ಗ್ರಾಮೀಣ ಭಾಗದ ಜನರು ಬ್ಯಾಟರಿ ಚಾಲಿತ ವಾಹನಗಳ ಬಳಕೆಗೆ ಒತ್ತು ನೀಡಬೇಕು. ಅಲ್ಲದೆ ಬ್ಯಾಟರಿ ಚಾಲಿತ ಓಡಾಡುವ ಇತರ ವಾಹನಗಳನ್ನು ಮುಂದೆಕ್ಕೆ ಅಭಿವೃದ್ಧಿ ಪಡಿಸಬೇಕು ಎಂದರು. ಮಂಗಳೂರು ಸ್ಮಾರ್ಟ್ ಸಿಟಿ ಮೋಟಾರ್ಸ್ ಮ್ಯಾನೆಜ್ ಮೆಂಟ್ ಪಾರ್ಟ್‌ನರ್ ಶ್ರೀಮತಿ ಪ್ರತಿಭಾ ಅವರು ಮಾತನಾಡಿ ಪರಿಸರ ಪೂರಕವಾಗಿರುವ ಬ್ಯಾಟರಿ ಚಾಲಿತ ವಾಹನಗಳ ಮಾರಾಟವನ್ನು ಕಳೆದ ಎರಡು ವರ್ಷದಿಂದ ಮುನ್ನಡೆಸುತ್ತಾ ಬಂದಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ದೊರಕಿದ್ದು ಈ ಹಿನ್ನೆಲೆಯಲ್ಲಿ ಹೊಸ ತಾಲೂಕು ಕೇಂದ್ರ ಕಡಬಕ್ಕೂ ವಿಸ್ತರಣೆಯಾಗಿದೆ ಎಂದರು. ವೇದಿಕೆಯಲ್ಲಿ ಯುವವಾಹಿನಿ ಘಟಕದ ಅಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಕಡಬ ಸಿಟಿ ಮೋಟರ್ ಡೀಲರ್ಸ್ ನ ನರೇಂದ್ರ ಕುಮಾರ್ ಮತ್ತು ರಾಜೇಂದ್ರ, ಟಿಕ್ನಿಷನ್ ಶ್ರೀನಿವಾಸ್ ಉಪಸ್ಥಿತರಿದ್ದರು. ಯುವ ಮುಂದಾಳು ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮ ನಿರೂಪಿಸಿ, ಜನಾರ್ಧನ ಬಿ.ಎಲ್ ಧನ್ಯವಾದ ಸಮರ್ಪಿಸಿದರು. ಕಡಬ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ, ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಬು ಮುಗೇರ, ನಿವೃತ್ತ ಅರಣ್ಯ ಅಧಿಕಾರಿ ಎಲ್ಯಣ್ಣ ಪೂಜಾರಿ, ಪ್ರಮುಖರಾದ ನವೀನ್ ಪೂಜಾರಿ ಮುಂಡಾಜೆ, ದಿನೇಶ್ ಕುಮಾರ್ ಮುಂಡಾಜೆ, ಕೇಶವ ಮಂಜುಶ್ರೀ ಪ್ರಿಂಟರ್‍ಸ್ ಉಜಿರೆ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.