HomePage_Banner
HomePage_Banner
HomePage_Banner

ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧಾಕರ ರಾವ್ ಆರ್ಯಾಪು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ವಿಶ್ರಾಂತ ಪತ್ರಕರ್ತ ಆರ್ಯಾಪು ನೀರ್ಕಜೆಯ ಸುಧಾಕರ ರಾವ್ ಆಯ್ಕೆಯಾಗಿದ್ದಾರೆ.

ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ದೇವಯ್ಯ ಗೌಡ ದೇವಸ್ಯ, ದಾಮೋದರ ರೈ ತೊಟ್ಲ, ಎಂ.ಕಿಶೋರ್ ಕುಮಾರ್ ಮರಿಕೆ, ಎಂ. ವಿಠಲ ರೈ ಮೇರ್ಲ, ಸುಧಾಕರ ರಾವ್ ಎ ನೀರ್ಕಜೆ, ಭಾರತಿ ಎನ್, ವನಿತಾ ಹಾಗೂ ವಿನಯ ನಾಯ್ಕ ಹಾಗೂ ಅರ್ಚಕ ಮನೋಜ್ ಭಟ್ ಪಜಿಮಣ್ಣು ನೇಮಕವಾಗಿದ್ದರು. ನ.5ರಂದು ದೇವಳದಲ್ಲಿ ದ.ಕ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಮುರಳಿಕೃಷ್ಣ ಹಸಂತಡ್ಕರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ನಡೆಸಲಾಯಿತು.


ಪವಿತ್ರಪಾಣಿ ರಾಘವೇಂದ್ರ ಪುತ್ತೂರಾಯ ಕುಕ್ಕಾಡಿ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯ ವಿಶ್ವನಾಥ ಗೌಡ ಮರಿಕೆ, ಅಶೋಕ್ ಕುಮಾರ್ ಸಂಪ್ಯ, ಪ್ರಮುಖರಾದ ಧನಂಜಯ ಶೆಟ್ಟಿ ಮೇರ್ಲ, ಪವಿತ್ರ ರೈ ಉದ್ಯಂಗಳ, ಗಣೇಶ್ ರೈ ಡಿ.ಕೆ., ನಾಗೇಶ್ ಸಂಪ್ಯ, ಭಾಸ್ಕರ ಶೆಟ್ಟಿ ಮೇರ್ಲ, ಗಿರೀಶ್ ಕಿನ್ನಿಮಜಲು, ಬಾಬು ನಾಯಕ್ ಕಬ್ಬಿನಹಿತ್ಲು, ಅಜಿತ್ ರೈ ತೊಟ್ಲ, ರಾಧಾಕೃಷ್ಣ ಕಲ್ಲೂರಾಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರಾದ ಅಂಬಿಕಾ, ರಮೇಶ್ ಬಲ್ಯಾಯ, ಜಯಂತಿ, ಅಶೋಕ ದೇವಸ್ಯ, ಅನಂತಯ್ಯ ಕಾರಂತ, ಮೋಹನ ಹೊಳ್ಳ ಸಂಪ್ಯ, ಎಚ್. ಮಾಧವ, ಕೃಷ್ಣ ಗೌ, ಪುಷ್ಪ ಬಂಡಾರಿ, ಶಕುಂತಳಾ, ರಾಮಚಂದ್ರ ಕುಲಾಲ್, ಶಕುಂತಳಾ ಹಾಗೂ ಸ್ವಾತಿ ಎಚ್ ಮೊದಲಾದವರು ಉಪಸ್ಥಿರಿದ್ದರು.



ಅಧ್ಯಕ್ಷ ಸುಧಾಕರ್‌ರವರ ಪರಿಚಯ:
ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿಯಾಗಿರುವ ನೂತನ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪುರವರು ವಿಶ್ರಾಂತ ಪತ್ರಕರ್ತರಾಗಿರುತ್ತಾರೆ. ಇವರು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ, ಹಂಟ್ಯಾರ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ದೇವಳದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯಶ್ವೇರ ಯುವಕ ಮಂಡಲದ ಅಧ್ಯಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಆರ್ಯಾಪು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಕೃತ ಇವರು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವೇರ ಯುವಕ ಮಂಡಲದ ಗೌರವಾಧ್ಯಕ್ಷರಾಗಿ, ಕೂಟ ಮಹಾಜಗತ್ತು ಪುತ್ತೂರು ಇದರ ಅಂಗ ಸಂಸ್ಥೆಯ ಸದಸ್ಯರಾಗಿ ಹಾಗೂ ತಾಲೂಕು ಅರ್ಚಕ ಹಾಗೂ ಪುರೋಹಿತ ಪರಿಷತ್‌ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.