HomePage_Banner
HomePage_Banner
HomePage_Banner

ತಾಲೂಕಿನ ಮಕ್ಕಳಿಗಾಗಿ ದೇಶ ಭಕ್ತಿಗೀತೆ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1
  • ರೋಟರಿ ಕ್ಲಬ್ ಪುತ್ತೂರು ಯುವ ಇದರ ನೇತೃತ್ವ, ಜನ್ಮ ಫೌಂಡೇಶನ್ ಟ್ರಸ್ಟ್‌ನ ಸಹಯೋಗ


ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಇದರ ನೇತೃತ್ವದಲ್ಲಿ ಜನ್ಮ ಫೌಂಡೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಪುತ್ತೂರು ತಾಲೂಕಿನ ಮಕ್ಕಳಿಗಾಗಿ `ದೇಶ ಭಕ್ತಿಗೀತೆ ಸ್ಪರ್ಧೆ’ ಆಯೋಜಿಸಿದೆ.

ಸ್ಪರ್ಧೆಯಲ್ಲಿ 5 ರಿಂದ 12 ವರ್ಷದ ಒಳಗಿನ ಮಕ್ಕಳು ಭಾಗವಹಿಸಬಹುದು. ಸ್ಪರ್ಧಾರ್ಥಿಗಳು ಹಾಡಿನ ಜೊತೆ ಹೆಸರು, ಶಾಲೆ ಹಾಗೂ ದೂರವಾಣಿ ಸಂಖ್ಯೆಯನ್ನು ನೋಂದಾಯಿಸಬೇಕು. ನೀವೂ ಹಾಡಿರುವ ಪದ್ಯವನ್ನು ವಿಡಿಯೋ ಸಮೇತ ನ.11ರ ಒಳಗಾಗಿ ವಾಟ್ಸಾಪ್ ಮುಖಾಂತರ ಕಳುಹಿಸತಕ್ಕದ್ದು, ಸ್ಪರ್ಧೆಯಲ್ಲಿ ವಿಜೇತರಿಗೆ ನಗದು, ಟ್ರೋಫಿ ಮತ್ತು ಪ್ರಮಾಣಪತ್ರ ಸಿಗಲಿದೆ. ಬಹುಮಾನಕ್ಕೆ ಆಯ್ಕೆಯಾದ 5 ವಿದ್ಯಾರ್ಥಿಗಳನ್ನು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕ್ಲಬ್‌ನ ಅಧ್ಯಕ್ಷ ರೊ. ಡಾ. ಹರ್ಷ ಕುಮಾರ್ ರೈ, ಕಾರ್ಯದರ್ಶಿ ರೊ.ಪಿ.ಎಚ್.ಎಫ್ ಉಮೇಶ್ ನಾಯಕ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಸ್ಪರ್ಧೆಯ ಪದ್ಯದ ವಿಡಿಯೋ ಹಾಗೂ ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ರೊ. ರಾಜೇಶ್ವರಿ (8088218068) ರವರನ್ನು ಸಂಪರ್ಕಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.