HomePage_Banner
HomePage_Banner
HomePage_Banner

ಏರುತ್ತಿರುವ ಅಡಿಕೆ ಬೆಲೆ-ಸುರಕ್ಷತೆ ಕಾಪಾಡಿಕೊಳ್ಳುವಂತೆ ಅಡಿಕೆ ಬೆಳೆಗಾರರು, ವರ್ತಕರಿಗೂ ವಿಟ್ಲ ಠಾಣೆಯಿಂದ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಡಿಕೆಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳು ಅಧಿಕವಾಗು ಸಂದರ್ಭಗಳಿದ್ದು ಅಡಿಕೆ ಬೆಳೆಗಾರರಿಗೆ ಮತ್ತು ವರ್ತಕರಿಗೆ ಸುರಕ್ಷತೆ ಕಾಪಾಡಿಕೊಳ್ಳುವಂತೆ ವಿಟ್ಲ ಪೊಲೀಸ್ ಠಾಣೆಯಿಂದ ಕೆಲವು ಮುನ್ಸೂಚನೆಗಳನ್ನು ನೀಡಿದೆ.

ಅಡಿಕೆ ಬೆಲೆ ತುಂಬಾ ದುಬಾರಿಯಾಗಿದ್ದು ಪ್ರಸ್ತುತ ದಿನಗಳಲ್ಲಿ ಅಮೂಲ್ಯ ವಸ್ತುವಾಗಿದ್ದು, ಗಮನವಹಿಸಿ ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅಡಿಕೆ ಬೆಳೆಗಾರರು ಅಡಿಕೆ ಒಣಗಿಸಲು ಮನೆ ಅಂಗಳದಲ್ಲಿ ಹಾಕಿದ ಸಮಯ ಅದರ ರಕ್ಷಣೆ ಮಾಡಲು ಸಿಸಿ ಕ್ಯಾಮಾರಾ ಅಥವಾ ಒಬ್ಬ ವ್ಯಕ್ತಿಯನ್ನು ಅಡಿಕೆ ಬೆಳೆಯನ್ನು ಕಾಯಲು ನೇಮಿಸುವುದು. ಅಡಿಕೆ ಬೆಳೆ ಕಾಯುವ ಸಮಯ ಅನುಮಾನಾಸ್ಪದ ವಾಹನ ಅಥವಾ ವ್ಯಕ್ತಿ ಕಂಡು ಬಂದಲ್ಲಿ ತಕ್ಷಣ ಠಾಣೆಗೆ ಕರೆಮಾಡಿ ತಿಳಿಸುವುದು. ಅಡಿಕೆ ವ್ಯಾಪಾರಸ್ಥರು ಅಡಿಕೆಯನ್ನು ಮಾರಾಟ ಮಾಡಲು ಬಂದ ವ್ಯಕ್ತಿ ಅಡಿಕೆ ಬೆಳೆಗಾರನೊ ಅಲ್ಲವೋ ಎಂಬುದನ್ನು ಖಚಿತ ಪಡಿಸಿಕೊಂಡು ಪಡೆಯುವುದು. ಇಲ್ಲದಿದ್ದಲ್ಲಿ ಕಾನೂನು ಕ್ರಮಕ್ಕೆ ಒಳಗಾಗಬಹುದು. ಅಡಿಕೆ ಒಣಗಿಸಲು ಹಾಕಿದ ಸ್ಥಳಗಳಲ್ಲಿ ರಾತ್ರಿ ಪೂರ್ಣ ಬೆಳಕಿನ ವ್ಯವಸ್ಥೆ ಮಾಡುವುದು. ಅಡಿಕೆ ಮಾರಲು ಬಂದ ವ್ಯಕ್ತಿಯು ಅಡಿಕೆ ಮಾಲಿಕನೊ/ವ್ಯಾಪಾರಸ್ಥನೊ ಎಂಬುದನ್ನು ಖಾತ್ರಿ ಪಡಿಸಿಕೊಂಡು ಅಡಿಕೆಯನ್ನು ಮಾರಾಟಗಾರನಿಂದ ಪಡೆಯುವುದು. ಅಡಿಕೆ ವ್ಯಾಪಾರಸ್ಥರು ತಮ್ಮ ಅಡಿಕೆ ಅಂಗಡಿಯ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮಾರಾ ಅಳವಡಿಸುವುದು.

ಅಡಿಕೆ ಮಾರಲು ಬಂದ ವ್ಯಕ್ತಿಯು ಸ್ಥಳಿಯ ವಿಟ್ಲ ವ್ಯಾಪ್ತಿಯವನು ಅಲ್ಲವೆಂಬುದು ಕಂಡು ಬಂದಲ್ಲಿ ಅವನಿಂದ ಅಡಿಕೆ ಪಡೆಯುವ ಮುಂಚೆ ಅವನ ಪೂರ್ಣ ಮಾಹಿತಿ ಪಡೆದು ನಂತರದಲ್ಲಿ ಅವನಿಂದ ಅಡಿಕೆ ಪಡೆಯುವುದು. ಅಡಿಕೆಗೆ ಒಳ್ಳೆಯ ಬೆಲೆ ಇರುವುದರಿಂದ ಸೂಕ್ತ ರಕ್ಷಣೆ ಮಾಡುವುದರ ಮೂಲಕ ಕಾಪಾಡಿಕೊಳ್ಳುವುದು. ಹಾಗೂ ಅಡಿಕೆ ಕಳ್ಳರ ಬಗ್ಗೆ ಎಚ್ಚರ ವಹಿಸುವುದು. ಅಡಿಕೆ ವ್ಯಾಪಾರಸ್ಥರು ಯಾರೋ ಅಪರಿಚಿತ ವ್ಯಕ್ತಿ ಕಡಿಮೆ ಬೆಲೆಗೆ ಅಡಿಕೆ ಮಾರಾಟ ಮಾಡುವುದು ತಿಳಿದು ಅವನಿಂದ ಅಡಿಕೆಯನ್ನು ತೆಗೆದುಕೊಂಡಲಿ, ಮುಂದೆ ಅದು ಕಳ್ಳತನ ಮಾಡಿದ ಅಡಿಕೆಯಾದಲ್ಲಿ ಕಾನೂನು ಕ್ರಮಕ್ಕೆ ಒಳಗಾಗಬೆಕಾಗುತ್ತದೆ. ಈ ಎಲ್ಲಾ ಸೂಚನೆಗಳನ್ನು ಅಡಿಕೆ ಬೆಳೆಗಾರರು ಹಾಗೂ ವರ್ತಕರು ಪಾಲಿಸುವಂತೆ ಠಾಣಾ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.