HomePage_Banner
HomePage_Banner
HomePage_Banner

ದ.ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದಿಂದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ `ಕುಂಚ ಕಲರವ’

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇದರ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಕುಂಚ ಕಲರವ 2020 ಆಯೋಜಿಸಿದೆ.

ಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಿವೆ.
ಎಲ್‌ಕೆಜಿ, ಯುಕೆಜಿ, 1ನೇ ತರಗತಿಯಲ್ಲಿರುವವರಿಗೆ ವಿದ್ಯಾರ್ಥಿಗಳ ಆಯ್ಕೆನುಸಾರ ಕ್ರೆಯಾನ್ಸ್ ಮೂಲಕ ಚಿತ್ರ ಬಿಡಿಸಬಹುದು.
2,3 ,4ನೇ ತರಗತಿ ವಿದ್ಯಾರ್ಥಿಗಳಿಗೆ `ನಮ್ಮ ಪರಿಸರ’ ಎಂಬ ವಿಷಯಾಧರಿತವಾಗಿ ಕ್ರೆಯಾನ್ಸ್ ಮೂಲಕ ಚಿತ್ರ ಮಾಡಬಹುದು.
5,6,7ನೇ  ತರಗತಿಯವರಿಗೆ `ಹಳ್ಳಿಯ ಜೀವನ’ ಎಂಬ ಸ್ಪರ್ಧಾ ವಿಷಯದಲ್ಲಿ ಕ್ರೆಯಾನ್ಸ್, ಜಲವರ್ಣನಿಂದ ಚಿತ್ರ ಬಿಡಿಸುವುದು.
8,9,10ನೇ ತರಗತಿಯ ವಿದ್ಯಾರ್ಥಿಗಳಿಗೆ `ಆರೋಗ್ಯ ಭಾರತ ನನ್ನ ಕನಸು’ (ಕೋವಿಡ್-19) ವಿಷಯಧಾರಿತದಲ್ಲಿ ಜಲವರ್ಣದಿಂದ ಚಿತ್ರ ರಚಿಸುವುದು.

ವಿದ್ಯಾರ್ಥಿಗಳು ಚಿತ್ರವನ್ನು ಎ4 ಅಳತೆಯ ಡ್ರಾಯಿಂಗ್ ಹಾಳೆಯಲ್ಲಿ ಇರತಕ್ಕದ್ದು, ಸಣ್ಣ ಅಳತೆಯ ಚಿತ್ರಗಳನ್ನು ಪರಿಗಣಿಸುವುದಿಲ್ಲ. ಚಿತ್ರದ ಹಾಳೆಯ ಹಿಂಬದಿಯಲ್ಲಿ ವಿದ್ಯಾರ್ಥಿಯ ಹೆಸರು, ಶಾಲೆಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು, ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದ ದಿನ ಸಾಮಾಜಿಕ ಅಂತರ ಕಾಯ್ದುಕೊಂಡು ಸನ್ಮಾನಿಸಲಾಗುವುದು ಮತ್ತು ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮೋಹನ್ ಗೌಡ,  ಕೋಶಾಧಿಕಾರಿ ರಾಜೇಶ್ವರಿ, ಉಪಾಧ್ಯಕ್ಷ ಚಾರ್ಚ್ ರವರ ಪ್ರಕಟನೆಯಲ್ಲಿ ತಿಳಿಸಿದೆ.

ಸ್ಪರ್ಧಾರ್ಥಿಗಳು ಚಿತ್ರಗಳನ್ನು ನ.11ರ ಒಳಗೆ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಿಕೊಡತಕ್ಕದ್ದು, ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಎಂದು ಸಂಘದ ಕಾರ್ಯದರ್ಶಿ ಅಂಬಿಕಾ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಚಿತ್ರವನ್ನು ಅಂಬಿಕಾ ಶಿಕ್ಷಕರು, ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ಟ ಮಂಗಳೂರು-575006 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9845993780, 9449257274  ಸಂಪರ್ಕಿಸಬಹುದು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.