HomePage_Banner
HomePage_Banner
HomePage_Banner

ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ಇನ್ನಿಲ್ಲ

Puttur_Advt_NewsUnder_1
Puttur_Advt_NewsUnder_1

ಬಂಟ್ವಾಳ: ಕಳೆದ ಇಪ್ಪತ್ತೈದು ವರ್ಷಗಳಿಗಿಂತಲೂ ಅಧಿಕ ಕಾಲ ಪತ್ರಕರ್ತರಾಗಿ ಬಂಟ್ವಾಳದಿಂದ ಕರ್ತವ್ಯ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕಲ್ಲಡ್ಕ ಸಮೀಪ ಅಮ್ಟೂರು ಪೂವಳ ನಿವಾಸಿ ಸೂರ್ಯನಾರಾಯಣ ರಾವ್ ಪೂವಳ (51) ಅಲ್ಪಕಾಲದ ಅಸೌಖ್ಯದ ಬಳಿಕ ನ.6ರಂದು ಬೆಳಗಿನ ಜಾವ ತನ್ನ ಮನೆಯಲ್ಲಿ ನಿಧನ ಹೊಂದಿದರು.ತಾಯಿ, ಪತ್ನಿ ಸಹಿತ ಅಪಾರ ಬಂಧು, ಮಿತ್ರರನ್ನು ಅವರು ಅಗಲಿದ್ದಾರೆ.

ಕಳೆದೆರಡು ತಿಂಗಳಿಂದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನ.5ರಂದು ಡಿಸ್ಚಾರ್ಜ್ ಆಗಿದ್ದರು. ಮುಂಗಾರು ಪತ್ರಿಕೆ ಸಹಿತ ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು ಬಳಿಕ ಸುದೀರ್ಘ ಕಾಲ ಬಂಟ್ವಾಳದಿಂದ ಕನ್ನಡ ಜನಾಂತರಂಗ, ಕರಾವಳಿ ಅಲೆ ಪತ್ರಿಕೆಗಳ ವರದಿಗಾರರಾಗಿ ಕೆಲಸ ಮಾಡಿದ್ದರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದ ಅವರ ನಿಧನಕ್ಕೆ ಸಂಘ ಸಂತಾಪ ಸೂಚಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.