HomePage_Banner
HomePage_Banner
HomePage_Banner

ಅಂಚೆ ಇಲಾಖೆಯಿಂದ ಪಿಂಚಣಿದಾರರ ಮನೆಬಾಗಿಲಿಗೆ ಡಿಜಿಟಲೀಕೃತ ಜೀವನ ಪ್ರಮಾಣ ಪತ್ರ ವಿತರಣೆ ಆರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಿಂಚಣಿದಾರರಿಗೆ ‘ಡಿಜಿಟಲೀಕೃತ ಜೀವನ ಪ್ರಮಾಣ’ ದ ಅಗತ್ಯತೆಯನ್ನು ಮನಗಂಡು ಇಲಾಖೆಯು ತನ್ನ ಇಲಾಖಾ ಅಂಚೆ ಪೇದೆಗಳ ಅಥವಾ ಗ್ರಾಮೀಣ ಅಂಚೆ ಬಟವಾಡೆದಾರರ ಮೂಲಕ ಪಿಂಚಣಿದಾರರು ತಮ್ಮ ಮನೆಯ ಬಾಗಿಲಲ್ಲೇ ಜೀವನ ಪ್ರಮಾಣವನ್ನು ಪಿಂಚಣಿ ವಿತರಣಾ ಕೇಂದ್ರಕ್ಕೆ ನೀಡುವ ಅಥವಾ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ ಎಂದು ಪುತ್ತೂರು ದ.ಕ. ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಹಿಮಾಂಶು ಚೌಧರಿ ಐ.ಪಿ.ಒ.ಎಸ್. ತಿಳಿಸಿದ್ದಾರೆ.
ನಿಯಮಾನುಸಾರ ಯಾವುದೇ ಸರಕಾರಿ ನಿವೃತ್ತ ಪಿಂಚಣಿದಾರರು ಪ್ರತೀ ವರ್ಷ ನವೆಂಬರ್ ಮಾಸದಲ್ಲಿ ತಾವು ಪಿಂಚಣಿ ಪಡೆಯುತ್ತಿರುವಲ್ಲಿಗೆ ಭೇಟಿಯಿತ್ತು, ಜೀವನ್ ಪ್ರಮಾಣ ಪತ್ರವನ್ನು ಹಸ್ತಾಂತರಿಸುವ ಅಗತ್ಯತೆಯಿದೆ. ಆದರೆ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಹಸ್ತಾಂತರಿಸುವ ಕರ್ತವ್ಯ ಶ್ರಮವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆಯು ಒಂದು ಹೆಜ್ಜೆ ಮುಂದೆ ಇಟ್ಟಿದೆ.

ಇಲಾಖಾ ಅಂಚೆವಿತರಕ ಅಥವಾ ಗ್ರಾಮೀಣ ಅಂಚೆ ಬಟವಾಡೆದಾರನು ಕರ್ತವ್ಯ ಸಂದರ್ಭದಲ್ಲಿ ಇಂಡಿಯ ಪೊಸ್ಟ್ ಪೇಮೆಂಟ್ಸ್ ಬಾಂಕ್‌ನ ಮೈಕ್ರೋ ಎ.ಟಿ.ಎಮ್.ನ್ನು ಹೊಂದಿರುತ್ತಾರೆ. ಪಿಂಚಣಿದಾರರು ವಿತರಕರನ್ನು ಸಂಪರ್ಕಿಸಿದಾಗ ಮನೆ ಬಾಗಿಲಿಗೆ ಬಂದು ಪಿಂಚಣಿದಾರರ ಆಧಾರ್ ಆಧಾರಿತ ಬೆರಳಚ್ಚನ್ನು ಆ ಎ.ಟಿ,ಎಂ. ಡಿವೈಸ್ ನಲ್ಲಿ ಪಡೆದ ತಕ್ಷಣ ಜೀವನ ಪ್ರಮಾಣವು ತಲುಪಬೇಕಾದ ಪಿಂಚಣಿ ವಿತರಣಾ ಕೇಂದ್ರವನ್ನು ತಲುಪುತ್ತದೆ. ಪಿಂಚಣಿದಾರರಿಗೆ ಅಂಚೆ ಇಲಾಖೆಯು ನೀಡುವ ಜೀವನ್ ಪ್ರಮಾಣ್ ಸೇವೆಯು ಬೆರಳಚ್ಚು ಆಧಾರಿತವಾಗಿದೆ (ಬಯೋಮೆಟ್ರಿಕ್). ಕೇಂದ್ರ ಹಾಗೂ ರಾಜ್ಯ ಸರಕಾರೀ ಸೇವಾ ನಿವೃತ್ತ ಪಿಂಚಣಿದಾರರು, ಅಥವಾ ಇತರೇ ಸರಕಾರೀ ಸಂಸ್ಥೆಯ ನಿವೃತ್ತ ಪಿಂಚಣಿದಾರರು ಇಂಡಿಯ ಪೊಸ್ಟ್ ಪೇಮೆಂಟ್ಸ್ ಬಾಂಕ್‌ನ ಮೈಕ್ರೋ ಎ.ಟಿ.ಎಮ್ ನ ಮುಖಾಂತರ ನಡೆಸಲ್ಪಡುವ ಈ ಸೇವೆಯ ಲಾಭವನ್ನು ಪಡೆಯಬಹುದಾಗಿದೆ ಎಂದು ತಿಳಿಸಿರುತ್ತಾರೆ.

ವಿಶೇಷತೆ:
ಪಿಂಚಣಿದಾರರು ಜೀವನ ಪ್ರಮಾಣವನ್ನು ನೀಡುವ ಸಲುವಾಗಿ ಯಾವುದೇ ಪಿಂಚಣಿ ಕಛೇರಿಯನ್ನಾಗಲೀ ಅಥವಾ ಪಿಂಚಣಿ ಪಾವತಿಸುವ ಮಧ್ಯವರ್ತಿಗಳನ್ನಾಗಲೀ ಭೌತಿಕವಾಗಿ ಭೇಟಿ ಮಾಡುವ ಆವಶ್ಯಕತೆಯಿರುವುದಿಲ್ಲ. ಹಾಗೆಯೇ ಈ ಸೇವೆಯು ನಮ್ಮ ಅಂಚೆ ಕಛೇರಿ ಕೌಂಟರ್ ಗಳಲ್ಲೂ ಲಭ್ಯವಿರುವುದರಿಂದ, ಇತರೇ ಸೇವೆಗಳಿಗೆ ಅಂಚೆ ಕಛೇರಿಗೆ ಭೇಟಿಯಿತ್ತ ಸಂದರ್ಭದಲ್ಲೂ ಈ ಸೇವೆಯನ್ನೂ ಪಡೆಯಬಹುದಾಗಿದೆ. ಈ ಸೇವೆ ಪಡೆಯಲು ಪಿಂಚಣಿದಾರರು ಪಾವತಿಸಬೇಕಾದ ಶುಲ್ಕ ಕೇವಲ ರೂ.70 ಮಾತ್ರ. ಜಗತ್ತಿನಾದ್ಯಂತ ಕೋವಿಡ್ 19 ಮಹಾಮಾರಿ ರೋಗವು ಆವರಿಸಿದ್ದು, ಇಲಾಖಾ ಜೀವನ್ಪ್ರಮಾಣ ಸೇವೆಯು ನಿಜವಾಗಿಯೂ ಆಕಾಂಕ್ಷಿತವೂ ಪ್ರಶಸ್ತವೂ ಅರ್ಥಪೂರ್ಣವೂ ಆಗಿದೆ. ಮೇಲಾಗಿ ಪಿಂಚಣಿದಾರರೆಲ್ಲರೂ ಹಿರಿವಯಸ್ಸಿನವರಾಗಿರುವುದರಿಂದ ಈ ರೀತಿ ಮನೆಯ ಬಾಗಿಲಲ್ಲೇ ನೀಡುವ ಸೇವೆಯು ಅವರಿಗೆ ವರದಾನವಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.