HomePage_Banner
HomePage_Banner
HomePage_Banner

ಮಂಗಳೂರು ಗೋಲಿಬಾರ್ ಸಂದರ್ಭ ಅತ್ಯುತ್ತಮ ವರದಿಗೆ ದಿಗ್ವಿಜಯ ವರದಿಗಾರ ಕೃಷ್ಣನಗರದ ಅಶೋಕ್‌ಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಸಂದರ್ಭ ಅತ್ಯುತ್ತಮ ವರದಿ ಮಾಡಿದ ದಿಗ್ವಿಜಯ ನ್ಯೂಸ್ ಕನ್ನಡ ಸುದ್ದಿ ವಾಹಿನಿಯ ಮಂಗಳೂರು ವರದಿಗಾರ ಕೃಷ್ಣ ನಗರ ಬಡಾವು ನಿವಾಸಿ ಅಶೋಕ್ ಪೂಜಾರಿಯವರಿಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್ ಗೌರವ ಲಭಿಸಿದೆ.

ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ಬಡಾವು ಮೋನಪ್ಪ ಪೂಜಾರಿ ಹಾಗೂ ಕಮಲ ದಂಪತಿ ಪುತ್ರನಾಗಿರುವ ಅಶೋಕ್ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿರುತ್ತಾರೆ. ಯುವ ವರದಿಗಾರ ಅಶೋಕ್ ಪೂಜಾರಿಯವರು ಟಿವಿ ವರದಿಗಾರಿಕೆಯಲ್ಲಿ ಉತ್ತಮ ಹಿಡಿತವನ್ನು ಹೊಂದಿದ್ದು ಈ ಮೊದಲು ಪುತ್ತೂರಿನಲ್ಲಿ ಸುದ್ದಿಬಿಡುಗಡೆ ದಿನಪತ್ರಿಕೆ, ಪ್ರಜಾ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ, ಬಳಿಕ ದಿಗ್ವಿಜಯ ವಾಹಿನಿಗೆ ಸೇರ್ಪಡೆಗೊಂಡಿದ್ದರು. ವರ್ಷದ ಹಿಂದಷ್ಟೆ ಉಡುಪಿಯಿಂದ ಮಂಗಳೂರಿಗೆ ವರ್ಗಾವಣೆಗೊಂಡ ಅಶೋಕ್ ಅವರು ತಮ್ಮ ಅತ್ಯುತ್ತಮ ವರದಿಗಾರಿಕೆಯಿಂದ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದರು.

ಮಂಗಳೂರು ಗೋಲಿಬಾರ್ ಘಟನೆಯ ಕ್ಲಿಷ್ಟಕರ ಸಮಯದಲ್ಲಿಯೂ ಧೈರ್ಯದಿಂದ ವರದಿಗಾರಿಕೆ ಮಾಡಿ ವೀಕ್ಷಕರ ಮನಗೆದ್ದಿದ್ದರು. ಅವರ ಸಾಧನೆಯನ್ನು ಗಮನಿಸಿದ ಇಂಡಿಯನ್ ಟೆಲಿವಿಷನ್ ನ್ಯೂಸ್ ಡಾಟ್ ಕಾಮ್ ಮಾಧ್ಯಮ ಸಂಸ್ಥೆ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.