HomePage_Banner
HomePage_Banner
HomePage_Banner

ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ದೂಮ್ ಧಮಾಕ ಆಫರ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರಾಹಕರ ಮನೆ ಮಾತಾಗಿರುವ ಪುತ್ತೂರಿನ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ದೂಮ್ ಧಮಾಕ ಆಫರ್ ಒದಗಿಸಲಾಗಿದೆ. ಖಚಿತ ಕ್ಯಾಶ್ ಬ್ಯಾಕ್ ಕೊಡುಗೆಗಳು ಸೇರಿದಂತೆ ಖರೀದಿಗೆ ಸಂಬಂಧಿಸಿ ಪಡೆದ ಕೂಪನ್‌ಗಳಿಂದ ಬಂಪರ್ ಬಹುಮಾನವಾಗಿ ಕಾರು, ದ್ವಿಚಕ್ರ ವಾಹನ ಮತ್ತು ಗೃಹಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ. ಒಟ್ಟು ದೀಪಾವಳಿ ದೂಮ್ ಧಮಾಕದ ಆಫರ್‌ಗಳ ಸುರಿಮಳೆಯನ್ನು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರು ಉದ್ಘಾಟಿಸಿ, ಚಾಲನೆ ನೀಡಿದರು.

ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿರುವ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಜೇವಿಯರ್ ಡಿಸೋಜ, ನ್ಯಾಯವಾದಿ ಕೆ.ಎಂ ಸಿದ್ದಿಕ್, ಪುತ್ತೂರು ಕ್ಲಬ್‌ನ ಅಧ್ಯಕ್ಷರೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾಡಿ ಡಾ. ದೀಪಕ್ ರೈ, ಶೇಟ್ ಇಲೆಕ್ಟ್ರಾನಿಕ್ಸ್ ಜಾಹಿರಾತಿನ ಬ್ರಾಂಡ್ ಆಂಬಾಸಿಡರ್ ಆಗಿರುವ ತುಳು ಚಲನ ಚಿತ್ರ ನಟಿ ನಿರೀಕ್ಷಾ ಶೆಟ್ಟಿಯ, ಉದ್ಯಮಿ ಮನ್ಸೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ರೂಪೇಶ್ ಶೆಟ್ಟಿ ಆಫರ್‌ಗಳ ಮಾಹಿತಿ ನೀಡಿದರು. ಪವಿತ್ರ ರೂಪೇಶ್ ಪ್ರಾರ್ಥಿಸಿ ಸ್ವಾಗತಿಸಿದರು. ಮೆಸ್ಕಾಂ ನಿವೃತ್ತ ಇಂಜಿನಿಯರ್ ಶಿವಾನಂದ ಶೇಟ್ ವಂದಿಸಿದರು. ದೀಪಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜಾಹಿರಾತು ಬಿಡುಗಡೆ
ಶೇಟ್ ಇಲೆಕ್ಟ್ರೋನಿಕ್ಸ್‌ನ ಈ ವರ್ಷ ಪೂರ್ತಿ ಬ್ರಾಂಡ್ ಅಂಬಾಸಿಡರ್ ಆಗಿ ಜಾಹಿರಾತು ಮಾರ್ಕೆಟ್‌ನಲ್ಲಿ ಚಿತ್ರ ನಟಿ ನಿರೀಕ್ಷಾ ಶೆಟ್ಟಿಯವರು ಕಾಣಿಸಿಕೊಳ್ಳಲಿದ್ದು, ಆಫರ್‌ಗಳ ಜಾಹಿರಾತನ್ನು ನ್ಯಾಯವಾದಿ ಕೆ.ಎಮ್.ಸಿದ್ದಿಕ್ ಮತ್ತು ಉದ್ಯಮಿ ಮನ್ಸೂರ್ ಅವರು ಬಿಡುಗಡೆಗೊಳಿಸಿದರು. ಶೇಟ್ ಇಲೆಕ್ಟ್ರಾನಿಕ್ಸ್‌ನ ಎಲ್ಲಾ ಜಾಹಿರಾತುಗಳಲ್ಲಿ ನಿರೀಕ್ಷಾ ಶೆಟ್ಟಿ ಮುಖ ಕಾಣಲಿದೆ ಎಂದು ದೀಪಕ್ ಶೆಟ್ಟಿ ವರು ತಿಳಿಸಿದರು.

ಗ್ರಾಹಕರು ಸದುಪಯೋಗ ಪಡೆದು ಕೊಳ್ಳಿ
ದೀಪಾವಳಿಗೆ ಪ್ರತಿ ವರ್ಷ ಖರೀದಿ ಮೇಲೆ ಹಲವು ಆಫರ್‌ಗಳನ್ನು ನೀಡುತ್ತೇವೆ. ಈ ವರ್ಷವೂ ಉತ್ತಮ ಆಫರ್ ಆಯೋಜಿಸಿದ್ದೇವೆ. ಕೂಪನ್, ಕಾಂಬಿ, ಇಎಮ್‌ಐ ವ್ಯವಸ್ಥೆ ಇದೆ. ಈ ಬಾರಿ ಬಂಪರ್ ಬಹುಮಾನವಾಗಿ ಆಲ್ಟೋ ಕಾರನ್ನು ಮತ್ತು ಕಳೆದ ಬಾರಿಯಂತೆ ಸ್ಕೂಟರ್‌ನ್ನು ಸಹ ಇಡಲಾಗಿದೆ. ಪ್ರತಿ ರೂ. ೨ಸಾವಿರ ಖರೀದಿ ಮೇಲೆ ೨ ಕೂಪನ್ ನೀಡಲಾಗುತ್ತದೆ. ಎಲ್ಲಾ ಖರೀದಿಗಳ ಮೇಲೆ ಕೊಡುಗೆಗಳಿವೆ. ಎಕ್ಸೇಂಜ್ ಆಫರ್ ಕೂಡಾ ಇದೆ. ಇಎಮ್‌ಐಯಲ್ಲಿ ನಾಲ್ಕು ಪೈನಾನ್ಸ್ ಸೌಲಭ್ಯವಿದೆ. ಡೆಲಿವರಿ ಜಾರ್ಜ್ ಇರುವುದಿಲ್ಲ. ಉಚಿತವಾಗಿಯೇ ಡೆಲಿವರಿ ನೀಡಲಿದ್ದೇವೆ. ಗ್ರಾಹಕರು ಈ ಭರ್ಜರಿ ಆಫರ್‌ಗಳ ಸದುಪಯೋಗ ಪಡೆಯುವಂತೆ ವಿನಂತಿಸುತ್ತೇವೆ – ರೂಪೇಶ್ ಶೇಟ್ ಮಾಲಕರು ಶೇಟ್ ಇಲೆಕ್ಟ್ರಾನಿಕ್ಸ್ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.