HomePage_Banner
HomePage_Banner
HomePage_Banner

ಅನುಭವ, ಪ್ರಾಮಾಣಿಕತೆ ಜತೆಗೆ ಭಗವಂತನ ಅನುಗ್ರಹ ಇದ್ದರೆ ಉದ್ಯಮದಲ್ಲಿ ಯಶಸ್ವಿ: ಸುಬ್ರಹ್ಮಣ್ಯ ಶ್ರೀ

Puttur_Advt_NewsUnder_1
Puttur_Advt_NewsUnder_1
  • ನೆಲ್ಯಾಡಿಯಲ್ಲಿ ದುರ್ಗಾಶ್ರೀ ಟವರ್‍ಸ್ ಶುಭಾರಂಭ

ಕಡಬ: ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ಅನುಭವ ಜತೆಗೆ ಭಗವಂತನ ಅನುಗ್ರಹ ಇದ್ದರೆ ಉದ್ಯಮದಲ್ಲಿ ಯಶಸ್ಸು ಖಂಡಿತಾ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಅವರು ನೆಲ್ಯಾಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ದುರ್ಗಾಶ್ರೀ ಟವರ್‌ನ್ನು ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್‍ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಇತ್ತೀಚ್ಚಿನ ದಿನಗಳಲ್ಲಿ ಉದ್ಯಮ ಕ್ಷೇತ್ರ ಚುರುಕುಗೊಳ್ಳುತ್ತಿದೆ, ವ್ಯವಹಾರದಲ್ಲಿ ಲಾಭ, ನಷ್ಟ ಎಂಬುದು ಇದ್ದು ಇದನ್ನು ಸಮರ್ಥವಾಗಿ ನಿಭಾಯಿಸಲು ಉದ್ಯಮಿಗಳು ಪ್ರಯತ್ನ ಪಡುತ್ತಲೆ ಇದ್ದಾರೆ, ಈಗಾಗಲೇ ಹಲವಾರು ಉದ್ಯಮಗಳು ಪ್ರಾರಂಭವಾಗಿರುವುದು ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿದೆ ಎಂದು ಸ್ವಾಮೀಜಿ ತಮ್ಮ ಆಶಿರ್ವಚನದಲ್ಲಿ ಹೇಳಿದರು. ಅಭಿವೃದ್ಧಿ ಹೊಂದುತ್ತಿರುವ ನೆಲ್ಯಾಡಿ ಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಈ ಕಟ್ಟಡದಿಂದ ಜನತೆಗೆ ಉತ್ತಮ ಪ್ರಯೋಜನ ದೊರೆಯುವಂತಾಗಲಿ ಎಂದು ಅವರು ಶುಭ ಹಾರೈಸಿದರು.

ದುರ್ಗಾಶ್ರೀ ಟವರ್ ಮಾಲಕ ಸತೀಶ್.ಕೆ ಮಾತನಾಡಿ, ರವಿಪ್ರಸಾದ್ ಆಚಾರ್, ಶ್ರೀಮತಿ ಕಲಾವತಿ ಆಚಾರ್ ಅವರ ಸಹಕಾರದೊಂದಿಗೆ ನಾವು ನೆಲ್ಯಾಡಿ ಪೇಟೆಯ ಹೃದಯ ಭಾಗದಲ್ಲಿ ಈ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗಿದೆ, ಜನರಿಗೆ ಪ್ರಯೋಜನಕಾರಿಯಾಗಿ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ಕಟ್ಟಡವು ಉಪಯೋಗವಾಗಲಿದೆ ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು. ವೇದಿಕೆಯಲ್ಲಿ ರವಿಪ್ರಸಾದ್ ಆಚಾರ್ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಶ್ರೀಮತಿ ಶಾರಾದ ಸತೀಶ್.ಕೆ ಅವರು ಧನ್ಯವಾದ ಸಮರ್ಪಿಸಿದರು. ನಿವೃತ್ತ ಶಿಕ್ಷಕ ರವೀಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಶ್ರೀನಿವಾಸ ಮುಡಂಬಡಿತ್ತಾಯ, ವಿಜಯಲಕ್ಷ್ಮೀ ದಂಪತಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ನೆಲ್ಯಾಡಿ, ಪುತ್ತೂರು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಕೃಷ್ಣಮೂರ್ತಿ ಕಲ್ಲೇರಿ, ಮಹೇಂದ್ರವರ್ಮ, ಚಂದ್ರಶೇಖರ ತಾಳ್ತಾಜೆ, ದೈವಜ್ಞ ಶ್ರೀಧರ ಗೋರೆ, ತ್ರಿವಿಕ್ರಮ, ಎಲೈಟ್ ವರ್ಗೀಸ್, ತೋಮಸ್ ಕೆ.ಪಿ, ರಾಜೇಂದ್ರ, ಜಗದೀಶ್ ರಾವ್ ಮಣಿಕ್ಕಳ, ಒ.ಜಿ. ನೈನಾನ್, ಇಂಜಿನಿಯರ್ ಚಾಕೋ, ಶಿವಣ್ಣ ಹೆಗ್ಡೆ, ಕುಶಾಲಪ್ಪ ಗೌಡ ಪೂವಾಜೆ, ಪ್ರೇಮ, ಸುರೇಶ್ ಪಡಿಪಾಂಡ, ಸುಬ್ರಹ್ಮಣ್ಯ ಆಚಾರ್, ಸುಂದರ ಗೌಡ, ಜಯರಾಮ ಶರ್ಮಾ, ಸುಬ್ರಹ್ಮಣ್ಯ ಬೈಪಾಡಿತ್ತಾಯ, ಗಣೇಶ್ ಭಟ್ ಸಿಬ್ಬಂದಿಗಳಾದ ಹರೀಶ್, ಹೇಮಲತಾ, ಪವಿತ್ರಾ, ರಮ್ಯಾ, ಜಯಲಕ್ಷ್ಮೀ, ಆನಂದ, ಹೊನ್ನಪ್ಪ, ಪ್ರಕಾಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.