HomePage_Banner
HomePage_Banner
HomePage_Banner

ನ.8(ನಾಳೆ) ಪರ್ಲಡ್ಕ ಶಂಸುಲ್ ಉಲಮಾ ಮೆಮೋರಿಯಲ್ ವುಮೆನ್ಸ್ ಶರೀಅತ್ ಕಾಲೇಜಿನ 5ನೇ ವಾರ್ಷಿಕ, 2ನೇ ಪದವಿ ಪ್ರದಾನ ಸಮಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಹ್‌ಯುದ್ದೀನ್ ಜಮಾಅತ್ತ್ ಕಮಿಟಿ ಪರ್ಲಡ್ಕ ಇದರ ಅಧೀನದಲ್ಲಿರುವ ಶಂಸುಲ್ ಉಲಮಾ ಮೆಮೋರಿಯಲ್ ವುಮೆನ್ಸ್ ಶರೀಅತ್ತ್ ಕಾಲೇಜಿನ 5ನೇ ವಾರ್ಷಿಕ ಮತ್ತು 2ನೇ ಪದವಿ ಪ್ರದಾನ ಸಮಾರಂಭ ನ.8ರಂದು ಪರ್ಲಡ್ಕ ಕಾಲೇಜು ಹಾಲ್‌ನಲ್ಲಿ ಬೆಳಿಗ್ಗೆ ಗಂಟೆ 10ರಿಂದ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಮೌಲಿದ್, ಅಲುಂಮಿನಿ ಮೀಟ್, ತಹ್‌ಲೀಲ್ ಸಮರ್ಪಣೆ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಪರ್ಲಡ್ಕ ಖತೀಬರಾದ ಅಬ್ದುರ್ರಶೀದ್ ರಹ್ಮಾನಿ ಕರಾಯ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದ್ದು, ಬಳಿಕ ಪರ್ಲಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ ನೆರವೇರಿಸಲಿದ್ದಾರೆ. ಕಾಲೇಜು ಕಮಿಟಿ ಅಧ್ಯಕ್ಷ ಅಬೂಬಕರ್ ಅಧ್ಯಕ್ಷತೆ ವಹಿಸಲಿದ್ದು, ಪರ್ಲಡ್ಕ ಶರೀಅತ್ ಕಾಲೇಜಿನ ಅಧ್ಯಾಪಕ ಯೂಸುಫ್ ಫೈಝಿ ದೇಲಂಪಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪೂರ್ವ ವಿದ್ಯಾರ್ಥಿನಿಯರ ಒಕ್ಕೂಟದ ವಾರ್ಷಿಕ ಮಹಾಸಭೆ, ಬಳಿಲಕ ಸನದು ಪಡೆಯುವವರಿಗೆ ಸ್ಥಾನ ವಸ್ತ್ರ ವಿತರಣೆ ನಡೆಯಲಿದೆ.

2ನೇ ಪದವಿ ಪ್ರದಾನ ಸಮಾರಂಭ
ಮಧ್ಯಾಹ್ನ ನಡೆಯುವ 2ನೇ ಪದವಿ ಪ್ರದಾನ ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರ ಇದರ ಸದಸ್ಯ ಶೈಖುನಾ ಅಲ್‌ಹಾಜ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅವರು ಉದ್ಘಾಟಿಸಲಿದ್ದಾರೆ. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಚೇಳಾರಿ ಇದರ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಸನದುದಾನ ಮತ್ತು ಅನುಗ್ರಹ ಭಾಷಣ ಮಾಡಲಿದ್ದಾರೆ. ಕಾಲೇಜಿನ ಆಡಳಿತ ಸಮಿತಿಯ ಕಾರ್ಯದರ್ಶಿ ಪಿ.ಎಸ್ ಹಂಝ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕಲ್ಲೇಗ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಅಲ್ ಜಲಾಲಿ, ಚೇಳಾರಿ ಎಸ್‌ಕೆಐಎಮ್‌ವಿಬಿಯ ಮ್ಯಾನೇಜರ್ ಮೋಹಿನ್ ಕುಟ್ಟಿ ಮಾಸ್ಟರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.