HomePage_Banner
HomePage_Banner
HomePage_Banner

ಕುಟ್ರುಪಾಡಿ: ಕೇಪು ಮಸೀದಿಯಿಂದ ಕರ್ಕಶವಾಗಿ ಧ್ವನಿವರ್ಧಕ ಬಳಕೆ-ಸ್ಥಳೀಯರ ಆರೋಪ ಕರ್ಕಶವಾಗಿ ಧ್ವನಿವರ್ಧಕ ಬಳಕೆ ಮಾಡಿಲ್ಲ, ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರ-ಮುಸ್ಲಿಂ ಜಮಾಹತ್ ಸ್ಪಷ್ಟನೆ ಇತ್ತಂಡದಿಂದಲೂ ಪೋಲಿಸರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಕುಟ್ರುಪಾಡಿ: ಕೇಪು ಮಸೀದಿಯಿಂದ ಕರ್ಕಶವಾಗಿ ಧ್ವನಿವರ್ಧಕ ಬಳಕೆ-ಸ್ಥಳೀಯರ ಆರೋಪ
ಕರ್ಕಶವಾಗಿ ಧ್ವನಿವರ್ಧಕ ಬಳಕೆ ಮಾಡಿಲ್ಲ, ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರ-ಮುಸ್ಲಿಂ ಜಮಾಅತ್ ಸ್ಪಷ್ಟನೆ
ಇತ್ತಂಡದಿಂದಲೂ ಪೋಲಿಸರಿಗೆ ಮನವಿ

ಹಿಂದೂ ಜಾಗರಣೆ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್ ಶೆಟ್ಟಿ ಯವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳಿಂದ ಕಡಬ ಠಾಣೆಗೆ ದೂರು..

ಕಡಬ: ಕುಟ್ರುಪಾಡಿ ಗ್ರಾಮದ ಕೇಪು ಅಮೈ ಎಂಬಲ್ಲಿರುವ ಮಸೀದಿಯಿಂದ ಕರ್ಕಶವಾಗಿ ಧ್ವನಿವರ್ಧಕ ಬಳಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣೆ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್ ಶೆಟ್ಟಿ ಯವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳಿಂದ ನ.6ರಂದು ಕಡಬ ಠಾಣೆಗೆ ದೂರು ನೀಡಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ನ.7ರಂದು ಕಡಬ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷಹಾಜಿ ಸೈಯದ್ ಮೀರಾ ಸಾಹೇಬ್ ನೇತೃತ್ವದಲ್ಲಿ ಕಡಬ ತಹಸೀಲ್ದಾರ್ ಹಾಗೂ ಕಡಬ ಪೋಲಿಸರಿಗೆ ಮನವಿ ನೀಡಿದ್ದು ಬಳಿಕ ಪತ್ರಿಕಾಗೋಷ್ಟಿಯಲ್ಲಿ ಧ್ವನಿವರ್ಧಕ ಬಳಕೆಯ ಬಗ್ಗೆ ಸ್ಪಷ್ಟನೆ ನೀಡಿದ ಘಟನೆ ನಡೆದಿದೆ.
ಮಸೀದಿಯಿಂದ ಕರ್ಕಶವಾಗಿ ಧ್ವನಿವರ್ಧಕ ಬಳಕೆ ಆರೋಪ
ನ.6ರಂದು ಹಿಂದೂ ಜಾಗರಣೆ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್ ಶೆಟ್ಟಿ ಯವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳಿಂದ ಕುಟ್ರುಪಾಡಿ ಗ್ರಾಮದ ಕೇಪು ಮಸೀದಿಯಲ್ಲಿ ಕರ್ಕಶವಾಗಿ ಧ್ವನಿವರ್ಧಕ ಬಳಸಲಾಗುತ್ತಿದ್ದು ಇದರಿಂದ ಇಲ್ಲಿಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕೂಡಲೇ ಧ್ವನಿವರ್ಧಕವನ್ನು ತೆರವುಗೊಳಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದರು, ಮನವಿಯ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯೆ ಪುಲಸ್ತ್ತ ರೈ, ಶಿವರಾಮ ಶೆಟ್ಟಿ ಕೇಪು, ಜಯಚಂದ್ರ ರೈ ಕುಂಟೋಡಿ, ಗಂಗಾಧರ ಗೌಡ ಹಳ್ಳಿ,ಪದ್ಮನಾಭ ರೈ, ಮಾಧವ ರೈ, ಶಿವಪ್ರಸಾದ್ ರೈ ಮೈಲೇರಿ, ಹರೀಶ್ ರೈ, ದೀಕ್ಷಿತ್ ಗೌಡ, ಶ್ರೀಧರ ಶೆಟ್ಟಿ, ವಿದ್ಯಾಧರ, ಮನಮೋಹನ್ ರೈ, ಪ್ರಮೋದ್ ರೈ, ಸತೀಶ್, ಹರೀಶ್, ಉಮೇಶ್, ಗಣೇಶ್ ಕೆ.ಎಂ. ಮೊದಲಾದವರು ಉಪಸ್ಥಿತರಿದ್ದರು. ಮನವಿಯನ್ನು ಕಡಬ ಠಾಣಾ ಸಬ್ ಇನ್ಸ್ ಪೆಕ್ಟರ್ ರುಕ್ಮ ನಾಯ್ಕ್ ಅವರಿಗೆ ನೀಡಲಾಗಿತ್ತು.

ಕಡಬ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಜಿ ಸೈಯದ್ ಮೀರಾ ಸಾಹೇಬ್ ಅವರ ನೇತೃತ್ವದಲ್ಲಿ ಕಡಬ ತಹಸೀಲ್ದಾರ್, ಕಡಬ ಪೋಲಿಸರಿಗೆ ಮನವಿ

ಕರ್ಕಶವಾಗಿ ಧ್ವನಿವರ್ಧಕ ಬಳಕೆ ಮಾಡಿಲ್ಲ, ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರ-ಮುಸ್ಲಿಂ ಜಮಾಅತ್ ಸ್ಪಷ್ಟನೆ

ಈ ವಿಚಾರಕ್ಕೆ ಸಂಬಂಧಿಸಿ ನ.7ರಂದು ಕಡಬ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಜಿ ಸೈಯದ್ ಮೀರಾ ಸಾಹೇಬ್ ಅವರ ನೇತೃತ್ವದಲ್ಲಿ ಕಡಬ ತಹಸೀಲ್ದಾರ್, ಕಡಬ ಪೋಲಿಸರಿಗೆ ಮನವಿ ನೀಡಿ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಹಿಂದೂ ಜಾಗರಣ ವೇದಿಕೆಯ ರವಿರಾಜ್ ಶೆಟ್ಟಿ ಹಾಗೂ ಇತರರು ಕಡಬ ಠಾಣೆಗೆ ದೂರು ನೀಡಿ, ಕೇಪು ಮಸೀದಿಯಲ್ಲಿ ಕರ್ಕಶವಾಗಿ ದ್ವನಿವರ್ಧಕ ಬಳಸಲಾಗುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ, ಇದು ಸರಿಯಲ್ಲ, ಕುಟ್ರುಪ್ಪಾಡಿ ಗ್ರಾಮದ ಕೇಪು ಅಲ್ರಝ್ವಿಯಾ ಮಸೀದಿಯು ಕರ್ನಾಟಕ ಸರಕಾರದ ವಕ್ ಬೋರ್ಡ್ ನೊಂದಾಯಿತ ಸಂಸ್ಥೆಯಾಗಿದ್ದು ಎಲ್ಲಾ ಸಂಸ್ಥೆಗಳಲ್ಲಿಯೂ ಕೂಡಾ ಬಾಂಗ್(ಅಝಾನ್) ನೀಡುವ ಸಂಪ್ರದಾಯವಿರುತ್ತದೆ. ಹೀಗಿರುವಲ್ಲಿ ಕಳೆದ 10 ವರ್ಷಗಳಿಂದ ಈ ಮಸೀದಿಯಲ್ಲಿ ನಮಾಜ್ ಸಮಯ ಅಝಾನ್ ಕೊಡುವ ಪದ್ಧತಿ ಈ ಹಿಂದಿನಿಂದಲೂ ಇದ್ದು ಕಾಲೋನಿಯ ನಿವಾಸಿಗಳಿಗೆ ಸಮಯದ ಹಾಗೂ ನಮಾಜಿಗೆ ಬರುವ ಉದ್ದೇಶ ಮಾತ್ರ ಇರುತ್ತದೆ. ಈ ಭಾಗದ ಸುತ್ತಮುತ್ತಲಿನ ಎಲ್ಲಾ ಧಮರ್ಿಯರು ಸಹಬಾಳ್ವೆಯಿಂದ ಬದುಕುತ್ತಿದ್ದು ಯಾವುದೇ ಜಾತಿ-ಮತ-ಭೇದವಿಲ್ಲದೆ ಕುಗ್ರಾಮವಾದ ಈ ಹಳ್ಳಿಯಲ್ಲಿ ಕೃಷಿ -ತೋಟಗಾರಿಕೆ ಅವಲಂಬಿಸಿಕೊಂಡು ಪ್ರತಿಯೊಬ್ಬರ ತೋಟದ ಕೆಲಸಕ್ಕೆ ಜಾತಿ-ಮತ ನೋಡದೆ ಒಗ್ಗೂಡಿ ಕೃಷಿ ಕೆಲಸ ನಿರ್ವಹಿಸುತ್ತ ಇದ್ದಾರೆ, ಈ ರೀತಿ ಅನ್ಯೋನ್ಯತೆಯಲ್ಲಿ ಇರುವಾಗ ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರ ಮಾಡಿರುವುದು ಖಂಡನಿಯ. ಕಡಬ ತಾಲೂಕಿನಲ್ಲಿ ಹಲವಾರು ಮಸೀದಿ, ದೇವಸ್ಥಾನ, ಚರ್ಚ್ ಗಳು ಇದ್ದು ಎಲ್ಲ ಧ್ವನಿವರ್ಧಕ ಬಳಸುತ್ತಿದ್ದಾರೆ ಈ ಬಗ್ಗೆ ನಾವು ಎಂದಿಗೂ ಚಕಾರ ಎತ್ತಿಲ್ಲ, ಈಗೀರುವಾಗ ಕೇಪು ಮಸೀದಿಯ ಬಗ್ಗೆ ವಿನಾ ಕಾರಣ ಗೊಂದಲ ಏರ್ಪಡಿಸುವುದು ಸರಿಯಲ್ಲ ಎಂದು ಹೇಳಿದ ಸೈಯದ್ ಮೀರಾ ಸಾಹೇಬ್ ಅವರು ಈಗಾಗಲೇ ರಾಜ್ಯದ ಪೋಲೀಸ್ ಮಹಾ ನಿರ್ದೇಶಕ ರಿಂದ ಮಸೀದಿಗಳ ಧ್ವನಿವರ್ಧಕ ತೆರವಿಗೆ ಡಿಜಿಪಿ ಆದೇಶಿಸಿಲ್ಲ ಎಂಬ ಸ್ವಷ್ಟನೆ ಬಂದಿರುತ್ತದೆ. ಈಗಾಗಲೇ ಸುಪ್ರೀಂಕೋರ್ಟ್ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ವಿವರವಾದ ಮಾರ್ಗಸೂಚಿ ಹೊರಡಿಸಿದೆ. ರಾತ್ರಿ 10 ರಿಂದ ಬೆಳಗ್ಗೆಯ ತನಕ ಧ್ವನಿವರ್ಧಕ ಬಳಕೆ ಮಾಡಲು ನಿರ್ಬಂಧ ವಿಧಿಸಿದೆ. ಜೊತೆಗೆ ಧ್ವನಿವರ್ಧಕದಲ್ಲಿನ ಶಬ್ಧದ ಪ್ರಮಾಣ 75 ಡೆಸಿಬಬೆಲ್ ಗಿಂತ ಹೆಚ್ಚಿರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ನಾವು ಇದರಂತೆ ನಡೆಯುತ್ತಿದ್ದೆವೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಆಲ್ ಇಂಡಿಯ ಮುಸ್ಲಿಂ ಡೆವಲಪ್ಮೆಂಟ್ ಫಾರಂನ ಕಡಬ ತಾಲೂಕು ಅಧ್ಯಕ್ಷ ಹಾಜಿ ಹನೀಫ್ ಕೆ.ಎಂ., ಕಡಬ ತಾಲೂಕು ಮುಸ್ಲಿಂ ಜಮಾಹತ್ ಸಂಯೋಜಕ ಫಝಲ್ ಕೋಡಿಂಬಾಳ,ಅಲ್ರಝ್ವಿಯಾ ಮಸೀದಿ ಕೇಪು ಇದರ ಗೌರವಾಧ್ಯಕ್ಷ ಹಮೀದ್ ಉಪಾಧ್ಯಕ್ಷ ಸೈಯದ್ ಹುಸೇನ್, ಕೋಶಾಧಿಕಾರಿ ಇಕ್ಬಾಲ್, ಸದಸ್ಯರಾದ ಲತೀಪ್ ಮೊದಲಾದವರು ಉಪಸ್ಥಿತರಿದ್ದರು.

 

ಮನವಿ ನೀಡುವ ಸಂದರ್ಭದಲ್ಲಿ ಮರ್ದಾಳ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಹಮೀದ್ ತಂಞಳ್, ಮಹಮ್ಮದಿಯ ಜುಮ್ಮಾ ಮಸೀದಿ ಕಳಾರ ಇದರ ಕಾರ್ಯದರ್ಶಿ ಇಸ್ಮಾಯಿಲ್ ಕೆ.ಎಚ್, ಉಪಾಧ್ಯಕ್ಷ ಇಸ್ಮಾಯಿಲ್ ಬಿ.ಡಿ.ಎಸ್. ಕೇಪು ಅಲ್ರಝ್ವಿಯಾ ಮಸೀದಿಯ ಕಾರ್ಯದರ್ಶಿ ಅಬೀಬ್ ರಹ್ಮಾನ್, ಇಮಾಮರಾದ ರಿಜ್ವಾನ್ ರಝ್ವೀ, ಪ್ರಮುಖರಾದ ಶಾಹಿದ್,ಇರ್ಷಾದ್ , ಶಕೀಲ್, ಫಝಲ್, ಮಹಮ್ಮದ್ ಶಾಕೀರ್, ಮಹಮ್ಮದ್ ಸುಬಾನ್, ಬಾಬುಲ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.