HomePage_Banner
HomePage_Banner
HomePage_Banner

ನ.9; ನಿಡ್ಪಳ್ಳಿಯಲ್ಲಿ ಅನುಗ್ರಹ ಸಭಾಭವನ ಲೋಕಾರ್ಪಣೆ, ಒಡಿಯೂರು ಶ್ರೀಗಳಿಂದ ಆಶೀರ್ವಚನ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಆವರಣದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಅನುಗ್ರಹ ಸಭಾಭವನ ನ.9 ರಂದು ಲೋಕಾರ್ಪಣೆ ಗೊಳ್ಳಲಿದೆ.
ಬೆಳಿಗ್ಗೆ  ಗಂಟೆ 11 ರಿಂದ ಸಭಾಭವನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಇಲ್ಲಿಯ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ್  ಆರಿಗ ನಿಡ್ಪಳ್ಳಿ ಗುತ್ತು ಅಧ್ಯಕ್ಷತೆ ವಹಿಸಲಿರುವರು.ಉದ್ಯಮಿ ಅಶೋಕ್ ಕುಮಾರ್ ರೈ  ಕೋಡಿಂಬಾಡಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ,ಪಾಣಾಜೆ  ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ, ಪ್ರಗತಿಪರ ಕೃಷಿಕ ವಿಷ್ಣು ಭಟ್ ಬುಳೆನಡ್ಕ, ಪ್ರಗತಿಪರ ಕೃಷಿಕ ಸಂಜೀವ ಶೆಟ್ಟಿ ಕೊಮ್ಮಂಡ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,      ಪುತ್ತೂರು ಯಮುನಾ ಬೋರ್ ವೆಲ್ಸ್ ನ ದಿವ್ಯಾ ಕೃಷ್ಣ ಶೆಟ್ಟಿ ಪುತ್ತೂರು , ಕೋಟಿ ಚೆನ್ನಯ ಗರಡಿ ಕರ್ನಪ್ಪಾಡಿ ಇದರ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ  ಕಾರ್ಯಕ್ರಮದ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಉದ್ಘಾಟನಾ ಸಮಾರಂಭದ ಮೊದಲು    ಬೆಳಿಗ್ಗೆ ಗಣಪತಿ ಹೋಮ ನಡೆಯಲಿದೆ ಎಂದು ಕೊರಗಪ್ಪ ರೈ ನರೈಮಾರು ಹಾಗೂ ಮನೆಯವರು ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.