HomePage_Banner
HomePage_Banner
HomePage_Banner

ಅನಧಿಕೃತ ಶೇಂದಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ವಿವಿಧ ಇಲಾಖೆಗಳಿಗೆ ದೂರು

Puttur_Advt_NewsUnder_1
Puttur_Advt_NewsUnder_1
  • ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆಯಲ್ಲಿ ನಿರ್ಣಯ

ಪುತ್ತೂರು: ಅಂಗಡಿ ಹಾಗೂ ಇತರ ಕಡೆಗಳಲ್ಲಿ ಅನಧಿಕೃತವಾಗಿ ಶೇಂದಿ ಮಾರಾಟ ಮಾಡುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಂದಾಯ ಇಲಾಖೆ, ಪೊಲೀಸ್ ಹಾಗೂ ಅಬಕಾರಿ ಇಲಾಖೆಗೆ ದೂರು ನೀಡುವುದಾಗಿ ಪಡೀಲು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 

ಸಭೆಯು ನ.7ರಂದು ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವುರವರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಅಂಗಡಿ ಹಾಗೂ ಇತರ ಕಡೆಗಳಲ್ಲಿ ಅನಧಿಕೃತವಾಗಿ ಬಾಟಲಿಯಲ್ಲಿ ತುಂಬಿಸಿ ಶೇಂದಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಶುಲ್ಕ ಪಾವತಿಸಿ, ಪರವಾಣಿಗೆ ಪಡೆದು ಶೇಂದಿ ಮಾರಾಟಗಾರರಿಗೆ ತೊಂದರೆಯಾಗುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಕ್ಕೆ ದೂರುಗಳು ಬಂದಿರುವುದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅನಧಿಕೃತವಾಗಿ ಮಾರಾಟ ಮಾಡುವುದನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್, ಅಬಕಾರಿ ಹಾಗೂ ಕಂದಾಯ ಇಲಾಖೆಗೆ ದೂರು ನೀಡುವುದಾಗಿ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದ್ದು ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ. ಕಲಬೆರೆಕೆ ಮಾಡಿ ಶೇಂದಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಇದರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಬಿ.ಸಿ ರೋಡ್ ಮೂರ್ತೆದಾರರ ಮಹಾ ಮಂಡಲದ ನಿರ್ದೇಶಕ ಆರ್.ಸಿ ನಾರಾಯಣ ಮಾತನಾಡಿ, ಪರವಾನಿಗೆ ಪಡೆದು ಶೇಂದಿ ಮಾರಾಟ ಮಾಡುತ್ತಿರುವವರ ಮೇಲೆ ಹಸ್ತಕ್ಷೇಪ ಮಾಡದಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ದ.ಕ ಜಿಲ್ಲೆಯಲ್ಲಿ ಮೂರ್ತೆದಾರರ ಸಹಕಾರಿ ಸಂಘಗಳ ನಿವೇಶನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಮಾತನಾಡಿ, ಪರವಾನಿಗೆ ಪಡೆದ ಶೇಂದಿ ಮಾರಾಟ ಮಾಡುತ್ತಿರುವವರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

ಸಂಘದ ನಿರ್ದೇಶಕಿ,ಜಿ.ಪಂ ಸದಸ್ಯೆ ಶಯನಾ ಜಯಾನಂದ ಮಾತನಾಡಿ, ಸಹಕಾರಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಬಿ.ಕೆ ಆನಂದ ಸುವರ್ಣ ಬಪ್ಪಳಿಗೆ, ನಿರ್ದೇಶಕರಾದ ಬಾಳಪ್ಪ ಪೂಜಾರಿ ಕೇಪುಳು, ಪದ್ಮಪ್ಪ ಪೂಜಾರಿ ಮತಾವು, ವೀರಪ್ಪ ಪೂಜಾರಿ ಡೆಕ್ಕಾಜೆ, ಶಯನಾ ಜಯಾನಂದ ಕೋಡಿಂಬಾಡಿ, ಜಯಲಕ್ಷ್ಮಿ ಸುರೇಶ್, ಜಿನ್ನಪ್ಪ ಪೂಜಾರಿ ಮುರ, ಗೋಪಾಲಕೃಷ್ಣ ಸುವರ್ಣ ಗೆನಸಿನಕುಮೇರು ಹಾಗೂ ಉಮೇಶ್ ಪೂಜಾರಿ ರಾಗಿದಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೂ.೨೧.೯೧ ಲಕ್ಷ ಲಾಭ
ಸಹಕಾರಿ ಸಂಘವು ೨೦೧೯-೨೦ನೇ ಸಾಲಿನಲ್ಲಿ ರೂ.೨೧,೯೧,೮೪೧ ಲಾಭ ಗಳಿಸಿರುತ್ತದೆ. ಸಹಕಾರಿ ಸಂಘದಲ್ಲಿ ವರ್ಷಾಂತ್ಯಕ್ಕೆ ರೂ.೫೦,೭೫೯೨ ಪಾಲು ಬಂಡವಾಳವಿರುತ್ತದೆ. ರೂ. ೪,೭೦,೭೧,೫೬೯.೮೪ ವಿವಿಧ ರೂಪದ ಠೇವಣಿಗಳಿರುತ್ತದೆ. ಒಟ್ಟು ರೂ. ೬೪,೮೪,೫೭೮.೭೦ ನಿಧಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರಿನಲ್ಲಿ ರೂ.೫,೦೦೦ ಮತ್ತು ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬಿ.ಸಿ ರೋಡ್ ನಲ್ಲಿ ರೂ.೫೦೦೦ ಪಾಲು ಬಂಡವಾಳವಿರುತ್ತದೆ. ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ರೂ.೧,೧೩,೨೮,೨೪೮ ಠೇವಣಿ ಹೂಡಲಾಗಿದೆ. ವರ್ಷಾಂತ್ಯಕ್ಕೆ ರೂ.೫,೪೪,೯೫,೯೦೦ ವಿವಿಧ ಸಾಲ ವಿತರಿಸಲಾಗಿದ್ದು ಒಟ್ಟು ೪,೮೮,೭೨,೨೧೫ ಸಾಲ ಹೊರಬಾಕಿಯಿರುತ್ತದೆ ಎಂದು ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ವರದಿಯಲ್ಲಿ ತಿಳಿಸಿದರು.

ಪಿಗ್ಮಿ ಸಂಗ್ರಾಹಕರಿಗೆ ಧನ ಸಹಾಯ:
ಕೊರೋನಾ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಸಂಘದ ಪಿಗ್ಮಿ ಸಂಗ್ರಾಹಕರಾದ ಸತೀಶ್, ದಿನೇಶ್ ಹಾಗೂ ರವರಿಗೆ ಮಹಾಸಭೆಯಲ್ಲಿ ಧನ ಸಹಾಯ ನೀಡಲಾಯಿತು.

ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಎ. ವಾರ್ಷಿಕ ವರದಿ ವಾಚಿಸಿದರು. ಸಿಬಂದಿ ಸವಿತಾ ಲೆಕ್ಕಪತ್ರ ಮಂಡಿಸಿದರು. ಆದರ್ಶ ಪಿಗ್ಮಿ ಸಂಗ್ರಾಹಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.