HomePage_Banner
HomePage_Banner
HomePage_Banner

ಉಪ್ಪಿನಂಗಡಿ : ಕೀರ್ತಿಶೇಷರ ಸಂಸ್ಮರಣಾ ಕಾರ್‍ಯಕ್ರಮ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ : ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾಸಂಘ ಉಪ್ಪಿನಂಗಡಿ , ಅರ್ಕುಳ ಸುಬ್ರಾಯ ಅಚಾರ್ಯ ಪ್ರತಿಷ್ಠಾನ ಗೇರುಕಟ್ಟೆ ಹಾಗೂ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಸಹಯೋಗದೊಂದಿಗೆ ಕೀರ್ತಿಶೇಷರ ಸಂಸ್ಮರಣಾ ಕಾರ್‍ಯಕ್ರಮವು ನ.7ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.

ಇತ್ತೀಚೆಗೆ ವಿಧಿವಶರಾದ ಕಜೆ ಈಶ್ವರ ಭಟ್ , ಹರಿಶ್ಚಂದ್ರ ಆಚಾರ್ಯ, ರತ್ನಾಕರ ಇಂದ್ರ, ವಿನಯ ಆಚಾರ್ಯ ಕಡಬ, ಮೂಡಾಜೆ ಸೀತಾರಾಮಭಟ್ ರವರನ್ನು ಸ್ಮರಿಸಿದ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರೂ ವಿಶ್ರಾಂತ ಶಿಕ್ಷಕರೂ ಆಗಿರುವ ಗೋಪಾಲ ಶೆಟ್ಟಿ ಕಳೆಂಜ ಮಾತನಾಡಿ , ಕಲಾವಿದರ ಸೇವೆಯನ್ನು ಗುರುತಿಸಿ ಸ್ಮರಿಸುವುದು ನಾಗರಿಕ ಸಮಾಜದ ಸಾತ್ವಿಕ ನಡೆಯಾಗಿದೆ. ಅದು ಮುಂದಿನ ಪೀಳಿಗೆಗೆ ಕಲಾವಿದ್ವತ್ ಬಗ್ಗೆ ಗೌರವ ಮೂಡಿಸಲೂ ಸಹಕಾರಿಯಾಗಿದೆ ಎಂದು ತಿಳಿಸಿದರು.

 

ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷರಾದ ನಂದಾವರ ಉಮೇಶ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಈಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯರಾದ ಸುಜಾತ ಕೃಷ್ಣ ಅಚಾರ್ಯ ರೋಟರಿ ಅಧ್ಯಕ್ಷರಾದ ರವೀಂದ್ರ ದರ್ಜೆ, ಅರ್ಕುಳ ಸುಬ್ರಾಯ ಅಚಾರ್ಯ ಪ್ರತಿಷ್ಠಾನ ಗೇರುಕಟೆ ಇದರ ಮುಂದಾಳು ದಿವಾಕರ ಆಚಾರ್ಯ ಮತ್ತು ಸತೀಶ್ ಆಚಾರ್ಯ ಮಾಣಿ ಪುತ್ತೂರು ಶ್ರೀ ಅಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್‍ಯ, ಕುಂಬ್ಳೆ ಶ್ರೀಧರ್ ರಾವ್, ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ| ಗಾಳಿಮನೆ ವಿನಾಯಕ ಭಟ್, ರಾಮಚಂದ್ರ ಮಣಿಯಾಣಿ, ಯು ಜಿ ರಾಧ, ಜಯಂತ ಪೊರೋಳಿ, ಡಾ. ಗೋವಿಂದಪ್ರಸಾದ್ ಕಜೆ, ಜಗದೀಶ್ ಶೆಟ್ಟಿ, ಕೃಷ್ಣಕೋಟೆ,ವಿಜಯ ಕುಮಾರ್ ಕಲ್ಲಳೀಕೆ, ಹರೀಶ್ ಆಚಾರ್ಯ ಬಾರ್ಯ ,ಗುಡ್ಡಪ್ಪಬಲ್ಯ ಮೊದಲಾದ ಪ್ರಮುಖರು ಭಾಗವಹಿಸಿದ್ದರು.

ಪ್ರಖ್ಯಾತ ಕಲಾವಿದರ ಉಪಸ್ಥಿತಿಯಲ್ಲಿ ಇಂದ್ರಜಿತ್ ಹಾಗೂ ಶ್ರೀರಾಮ ಪರಂದಾಮ ಎಂಬ ಎರಡು ತಾಳ ಮದ್ದಳೆ ಪ್ರಸಂಗಗಳು ಜರಗಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.