HomePage_Banner
HomePage_Banner
HomePage_Banner

ತುಳು ನಾಟಕ ಕಲಾವಿದರ ಒಕ್ಕೂಟ ಪುತ್ತೂರು ವಲಯದಿಂದ ಬಡ ಕಲಾವಿದರುಗಳಿಗೆ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ತುಳು ನಾಟಕ ಕಲಾವಿದರ ಒಕ್ಕೂಟ ಪುತ್ತೂರು ವಲಯದ ಆಶ್ರಯದಲ್ಲಿ 20 ಮಂದಿ ಬಡ ಕಲಾವಿದರುಗಳಿಗೆ ಗೃಹೋಪಯೋಗಿ ವಸ್ತುಗಳ ಕಿಟ್ ಹಾಗೂ ಔಷಧೀಯ ವೆಚ್ಚಕ್ಕಾಗಿ ಇಬ್ಬರು ಕಲಾವಿದರುಗಳಿಗೆ ಆರೋಗ್ಯನಿಧಿಯನ್ನುನ.08ರಂದು ವಿತರಿಸಲಾಯಿತು.

ಉಪ್ಪಿನಂಗಡಿಯ ನೇತ್ರಾವತಿ ಸಮುದಾಯ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ರಾಂತ ಸೇನಾಧಿಕಾರಿ ಚಂದಪ್ಪ ಮೂಲ್ಯ ,ನಾಟಕ ರಂಗದಲ್ಲಿ ರಂಗು ರಂಗು ವೇಷಧರಿಸಿ ಅನ್ಯರನ್ನು ರಂಜಿಸುವ ಕಲಾವಿದರ ನೈಜ ಬದುಕು ಸಂಕಷ್ಟದಲ್ಲಿ ಕೂಡಿರುವುದು ಖೇದಕರ ವಿದ್ಯಾಮಾನ. ಈ ಹಿನ್ನೆಲೆಯಲ್ಲಿ ಬಡ ಕಲಾವಿದರ ಬದುಕಿನಲ್ಲಿ ಬೆಳಕು ಮೂಡಿಸುವ ನಿಟ್ಟಿನಲ್ಲಿ ಕಲಾವಿದರೆಲ್ಲಾ ಸಂಘಟನೆಗೊಂಡು ಪರಸ್ಪರ ಸಹಾಯಹಸ್ತ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಒಕ್ಕೂಟದ ಪುತ್ತೂರು ವಲಯ ಸಂಚಾಲಕರಾದ ಕಿಶೋರ್ ಕುಮಾರ್ ಜೋಗಿ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಉದ್ಯಮಿ ಗಣೇಶ್ ಭಟ್ , ಸಾಮಾಜಿಕ ಮುಂದಾಳು ಜಯಂತ ಪೊರೋಳಿ, ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಗಣೇಶ್ ಪೂಜಾರಿ ಪುರುಷರಕಟ್ಟೆ, ಕುಶಾಲಪ್ಪ ನೆಲ್ಯಾಡಿ, ಜ್ಯೋತಿ ಕುಲಾಲ್, ರಾಜೇಶ್ ಶಾಂತಿನಗರ, ಸತೀಶ್ ಶೆಟ್ಟಿ ಹೆನ್ನಡ್ಕ, ಗುಣಕರ ಅಗ್ನಾಡಿ, ದಿವಾಕರ ಶೆಟ್ಟಿ, ವೈಶಾಲಿ ಮಹೇಶ್ , ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.