HomePage_Banner
HomePage_Banner
HomePage_Banner

ಪರ್ಲಡ್ಕ ಶಂಸುಲ್ ಉಲಮಾ ಮೆಮೋರಿಯಲ್ ವುಮೆನ್ಸ್ ಶರೀಅತ್ ಕಾಲೇಜಿನ ವಾರ್ಷಿಕ ಸಭೆ ಪದವಿ ಪ್ರದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಹ್ಯುದ್ದೀನ್ ಜಮಾಅತ್ ಕಮಿಟಿ ಪರ್ಲಡ್ಕ ಇದರ ಅಧೀನದಲ್ಲಿರುವ ಶಂಸುಲ್ ಉಲಮಾ ಮೆಮೋರಿಯಲ್ ವುಮೆನ್ಸ್ ಶರೀಅತ್ ಕಾಲೇಜಿನ ೫ನೇ ವಾರ್ಷಿಕ ಮತ್ತು ೨ನೇ ಪದವಿ ಪ್ರದಾನ ಸಮಾರಂಭ ನ.೮ರಂದು ಪರ್ಲಡ್ಕ ಕಾಲೇಜು ಹಾಲ್‌ನಲ್ಲಿ ನಡೆಯಿತು.

ಪರ್ಲಡ್ಕ ಖತೀಬರಾದ ಅಬ್ದುರ್ರಶೀದ್ ರಹ್ಮಾನಿ ಕರಾಯ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು. ಬಳಿಕ ಪರ್ಲಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಕಾಲೇಜು ಕಮಿಟಿ ಅಧ್ಯಕ್ಷ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು. ಪರ್ಲಡ್ಕ ಶರೀಅತ್ ಕಾಲೇಜಿನ ಅಧ್ಯಾಪಕ ಯೂಸುಫ್ ಫೈಝಿ ದೇಲಂಪಾಡಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪೂರ್ವ ವಿದ್ಯಾರ್ಥಿನಿಯರ ಒಕ್ಕೂಟದ ವಾರ್ಷಿಕ ಮಹಾಸಭೆ, ಬಳಿಕ ಸನದು ಪಡೆಯುವವರಿಗೆ ಸ್ಥಾನ ವಸ್ತ್ರ ವಿತರಣೆ ನಡೆಯಿತು.

೨ನೇ ಪದವಿ ಪ್ರದಾನ ಸಮಾರಂಭ: ಮಧ್ಯಾಹ್ನ ೨ನೇ ಪದವಿ ಪ್ರದಾನ ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಅಲ್‌ಹಾಜ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅವರು ಉದ್ಘಾಟಿಸಿದರು. ಅಸ್ಸಯ್ಯದ್ ಹಾದಿ ತಂಙಳ್ ಮಂಜೇಶ್ವರ ಅವರು ದುಆಃ ಮತ್ತು ಅಧ್ಯಕ್ಷತೆ ವಹಿಸಿದರು. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಚೇಳಾರಿ ಇದರ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಸನದುದಾನ ಮತ್ತು ಅನುಗ್ರಹ ಭಾಷಣ ಮಾಡಿದರು. ಪರ್ಲಡ್ಕ ಕಾಲೇಜಿನ ಆಡಳಿತ ಸಮಿತಿ ಕಾರ್ಯದರ್ಶಿ ಪಿ.ಯಸ್. ಹಂಝ ಹಾಜಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಲ್ಲೇಗ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಅಲ್ ಜಲಾಲಿ, ಚೇಳಾರಿ ಎಸ್‌ಕೆಐಎಮ್‌ವಿಬಿಯ ಮ್ಯಾನೇಜರ್ ಮೋಹಿನ್ ಕುಟ್ಟಿ ಮಾಸ್ಟರ್ ಅಭಿನಂದನಾ ಭಾಷಣ ಮಾಡಿದರು. ಹಲವು ಗಣ್ಯರು ಭಾಗವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.