HomePage_Banner
HomePage_Banner
HomePage_Banner

ಪುತ್ತೂರು ಪತ್ರಕರ್ತರ ಸಂಘದ ಅಧೀನದಲ್ಲಿರುವ ಪತ್ರಿಕಾ ಭವನದಲ್ಲಿ ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೂ ಭಾಗವಹಿಸಲು ಅವಕಾಶ ನೀಡುವಂತೆ ಮನವಿ ನೀಡಿದ್ದ ಹಿನ್ನೆಲೆ | ಜರ್ನಲಿಸ್ಟ್ ಯೂನಿಯನ್, ಕರ್ನಾಟಕ ಪತ್ರಕರ್ತರ ಸಂಘದ ಮನವಿಗೆ ಸ್ಪಂದನೆ

Puttur_Advt_NewsUnder_1
Puttur_Advt_NewsUnder_1
  • ಡಿ.ಸಿ. ಸೂಚನೆಯಂತೆ ನಾಳೆ ಸಭೆ ಕರೆದ ವಾರ್ತಾಧಿಕಾರಿ

ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧೀನದಲ್ಲಿ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ಭವನದಲ್ಲಿ ತಾಲೂಕಿನ ಎಲ್ಲಾ ಪತ್ರಕರ್ತರ ಸಂಘಗಳಿಗೆ ಮತ್ತು ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ನೀಡಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಹಾಗೂ ಕರ್ನಾಟಕ ಪತ್ರಕರ್ತ ಸಂಘದ ಪುತ್ತೂರು ಘಟಕದ ವತಿಯಿಂದ ನೀಡಿದ್ದ ಮನವಿಗೆ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರು ಸ್ಪಂದಿಸಿದ್ದಾರೆ.

ಜಿಲ್ಲಾಧಿಕಾರಿಯವರ ಸೂಚನೆಯಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಿ.ರವರು ನವೆಂಬರ್ ೧೦ರಂದು ಮಧ್ಯಾಹ್ನ ೧೨ ಗಂಟೆಗೆ ಪುತ್ತೂರು ಪತ್ರಿಕಾ ಭವನದಲ್ಲಿ ಸಭೆ ನಿಗದಿ ಪಡಿಸಿದ್ದಾರೆ. ಸಭೆಯ ಕುರಿತು ಅವರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರು ಮತ್ತು ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಇದರ ಅಧ್ಯಕ್ಷರಿಗೆ ನೊಟೀಸ್ ನೀಡಿದ್ದಾರೆ. ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ ಸೂಚನೆ ನೀಡುವಂತೆ ಅವರು ಕೋರಿದ್ದಾರೆ. ಮನವಿಗೆ ಸ್ಪಂದನೆ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಜತೆ ಸಂಯೋಜನೆಗೊಂಡಿರುವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ ವತಿಯಿಂದ ಪ್ರತ್ಯೇಕ ಮನವಿ ನೀಡಲಾಗಿತ್ತು.

ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ವೆಬ್ ಮಾಧ್ಯಮದ ಹಲವಾರು ಮಂದಿ ನಮ್ಮ ಸಂಘದಲ್ಲಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರು ಕೂಡ ಸಮಾಜದ ಮುಖ್ಯ ವಾಹಿನಿಯಲ್ಲಿರಬೇಕೆಂಬುದು ನಮ್ಮ ಸಂಘಟನೆಯ ಅಭಿಲಾಷೆಯಾಗಿದೆ. ಪತ್ರಕರ್ತರಿಗೆ ಸರಕಾರದಿಂದ ದೊರಕುವ ಸವಲತ್ತುಗಳನ್ನು ಒದಗಿಸಿಕೊಡುವುದು ಹಾಗೂ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುವುದು ನಮ್ಮ ಸಂಘಟನೆಯ ಆದ್ಯತೆಯಾಗಿದೆ. ಆದುದರಿಂದ ನಮ್ಮ ಪತ್ರಕರ್ತರ ಸಂಘಟನೆಗಳ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಬೆಳೆಸಲು ತಮ್ಮ ಅಮೂಲ್ಯವಾದ ಸಹಕಾರ ಬೇಕಿದೆ. ಇದಕ್ಕೆ ಬಹುಮುಖ್ಯವಾಗಿ ಪುತ್ತೂರಿನಲ್ಲಿ ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘದವರಿಗೂ ಅವಕಾಶ ಕಲ್ಪಿಸಲು ತಾವು ಕ್ರಮ ಕೈಗೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ ಪತ್ರಿಕಾ ಭವನದಲ್ಲಿ ನಡೆಯವ ಪತ್ರಿಕಾಗೋಷ್ಠಿ ಮುಂತಾದ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಪತ್ರಕರ್ತರ ಸಂಘಟನೆಗೆ ಆಹ್ವಾನ ನೀಡುವಂತೆ, ನಮ್ಮ ಪತ್ರಕರ್ತರ ಸಂಘಟನೆಯ ಸಭೆ, ವ್ಯವಹಾರ ಮತ್ತು ಅದರ ಸದಸ್ಯರಿಗೆ ತಮ್ಮತಮ್ಮ ಮಾಧ್ಯಮಕ್ಕೆ ಸಂಬಂಧಿಸಿದ ವರದಿಗಾರಿಕೆಗೆ ಹಾಗೂ ಕಾರ್ಯ ಚಟುವಟಿಕೆಗಳನ್ನು ನಡೆಸಲು ಸದ್ರಿ ಪತ್ರಿಕಾ ಭವನದಲ್ಲಿ ಸ್ಥಳಾವಕಾಶ ದೊರಕಿಸಿ ಕೊಡುವಂತೆ ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಜತೆ ಜತೆಯಾಗಿ ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸಲು ಹಾಗೂ ಇತರ ಮಾಧ್ಯಮದ ಸಂಘಟನೆಗಳೊಂದಿಗೆ ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸಲು ಅಗತ್ಯವಿರುವ ಕ್ರಮ ಕೈಗೊಂಡು ಎಲ್ಲಾ ಪತ್ರಕರ್ತರು ಒಗ್ಗೂಡಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತಿzವೆ. ಜತೆಗೆ, ಪುತ್ತೂರು ಪತ್ರಿಕಾ ಭವನದಲ್ಲಿನ ಆದಾಯ, ಖರ್ಚು ವೆಚ್ಚಗಳನ್ನು ಸಮಾನವಾಗಿ ಭರಿಸಲು, ಜವಾಬ್ಧಾರಿ ತೆಗೆದುಕೊಳ್ಳಲು ನಾವು ಸಿದ್ದರಿದ್ದು ಮಾಧ್ಯಮದವರ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಗೆ ದುಡಿಯಲು ಬದ್ಧರಿzವೆ. ಗ್ರಾಮ ಪಂಚಾಯತ್ ಚುನಾವಣೆ ಶೀಘ್ರದಲ್ಲಿ ಬರಲಿರುವುದರಿಂದ ಜನತೆಗೆ ಮತ್ತು ಚುನಾವಣಾ ಪಕ್ಷಗಳ ಹಾಗೂ ಸ್ಪರ್ಧಿಸ ಬಯಸುವ ಸದಸ್ಯರುಗಳ ಮಾಧ್ಯಮವಾಗಿ ಸೇವೆ ಸಲ್ಲಿಸಲು ನಮ್ಮ ಸಂಘದ ಸದಸ್ಯರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಮತ್ತು ವಾರ್ತಾ ಇಲಾಖೆಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಭೆ ಕರೆಯಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.