HomePage_Banner
HomePage_Banner
HomePage_Banner

ಧರ್ಮಸ್ಥಳ ಗ್ರಾ.ಯೋ. ಸರ್ವೆ ಬಿ ಒಕ್ಕೂಟದಿಂದ  ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಯಚ್ ಬಿ ಯವರಿಗೆ ಸನ್ಮಾನ  

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸರ್ವೆ ಬಿ ಒಕ್ಕೂಟದ ವತಿಯಿಂದ ಎಸ್ ಜಿ ಎಂ ಪ್ರೌಢ ಶಾಲಾ ನಿವೃತ್ತ ಮುಖ್ಯ ಗುರು ಶ್ರೀನಿವಾಸ್ ಎಚ್ ಬಿ ಯವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಅಧ್ಯಕ್ಷ ಅಶೋಕ್ ಎಸ್ ಡಿ, ಕಮಲೇಶ್ ಎಸ್ ವಿ, ಶಶಿಧರ್ ಎಸ್ ಡಿ, ಸುರೇಶ್ ಆಚಾರ್ಯ ಸನ್ಮಾನಿಸಿದರು. ಒಕ್ಕೂಟದ ಸದಸ್ಯ ಉಮೇಶ್ ಎಸ್ ಡಿ ಸನ್ಮಾನಿತರ ಕಿರು ಪರಿಚಯ ವಾಚಿಸಿದರು.  ಸನ್ಮಾನ ಸ್ವೀಕರಿಸಿದ ಶ್ರೀನಿವಾಸ್ ಎಚ್ ಬಿ ಯವರು ಒಕ್ಕೂಟದ ಸದಸ್ಯರು ವಿದ್ಯಾ ಸಂಸ್ಥೆಗೆ ನೀಡಿದ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್.ವಿ  ಮಾತನಾಡಿ ಶ್ರೀನಿವಾಸ್ ಎಚ್ ಬಿ ಯವರು ವಿದ್ಯಾರ್ಥಿಗಳ ಏಳಿಗೆಗಾಗಿ ಅವಿರತ ಶ್ರಮಿಸಿದವರು, ತಮ್ಮ ಎಲ್ಲಾ ಸಮಯವನ್ನು ವಿದ್ಯಾಸಂಸ್ಥೆಯ ಅಭಿವೃದ್ಧಿಗಾಗಿ ಮೀಸಲಿಟ್ಟವರು, ಅವರ ನೆನಪು ಸದಾ ಇರಬೇಕೆಂದರು.
ಸರ್ವೆ ಬಿ ಒಕ್ಕೂಟದ ಮಾಜಿ ಅಧ್ಯಕ್ಷ ಶಶಿಧರ್ ಎಸ್ ಡಿ ಯವರು ನಿವೃತ್ತ ಮುಖ್ಯ ಶಿಕ್ಷಕರ ಕಾರ್ಯ ವೈಖರಿಯನ್ನು ಶ್ಲಾಘಿಸಿ ಶುಭ ಹಾರೈಸಿದರು. 
ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಮಾತನಾಡಿದರು. ಸುರೇಶ್ ಆಚಾರ್ಯರವರು ಶುಭ ಹಾರೈಸಿದರು. ವಲಯ ಮೇಲ್ವಿಚಾರಕಿ ರೋಹಿಣಿ  ಶುಭ ಹಾರೈಸಿದರು. ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಸೇವಾ ಪ್ರತಿನಿಧಿ ಲತಾ ಸ್ವಾಗತಿಸಿದರು.
ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ.ಯವರ ಬಿಡುವಿಲ್ಲದ ಪರಿಶ್ರಮ ನಮಗೆ ಆದರ್ಶವೆನಿಸಿದೆ. ಇಂದು ಅವರನ್ನು ಗೌರವಿಸಿರುವುದು ನಮಗೆ ಅತೀವ ಸಂತೃಪ್ತಿಯನ್ನು ತಂದಿದೆ ಅಶೋಕ್ ಎಸ್ ಡಿ, ಬಿ ಒಕ್ಕೂಟದ ಅಧ್ಯಕ್ಷರು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.