HomePage_Banner
HomePage_Banner
HomePage_Banner

ನಿಯಮ ಉಲ್ಲಂಘಿಸುವ ರೈಡರ್‌ಗಳಿಗೆ ಪೊಲೀಸರಿಂದ ದಂಡದ ರುಚಿ | ಕಳೆದೆರಡು ತಿಂಗಳಲ್ಲಿ 11 ಲಕ್ಷ ರೂ. ಗಳಿಗೂ ಮಿಕ್ಕಿ ಸಂಗ್ರಹ!

Puttur_Advt_NewsUnder_1
Puttur_Advt_NewsUnder_1

– ಇಬ್ರಾಹಿಂ ಖಲೀಲ್ ಪುತ್ತೂರು

  • ಮಾಸ್ಕ್ ಹಾಕದವರಿಂದ 46,300 ರೂ. ದಂಡ ಸಂಗ್ರಹ


ಪುತ್ತೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಇತ್ತೀಚೆಗೆ ಮೋಟಾರು ವಾಹನ ನಿಯಮದಡಿಯಲ್ಲಿ ವಿವಿಧ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಗಳನ್ನು ಹೊರಡಿಸಿದ್ದು, ಇದೀಗ ದೈನಂದಿನದಲ್ಲಿ ಕಾನೂನು ಉಲ್ಲಂಘಿಸುತ್ತಿರುವ ವಾಹನ ಸವಾರರಿಗೆ ಪೊಲೀಸರು ದಡಂಡದ ಪೆಟ್ಟು ಕೊಡುತ್ತಿದ್ದಾರೆ. ಯೋಜಿತವಾಗಿ ಬೆಳೆಯುತ್ತಿರುವ ನಗರದೊಳಗೆ ವಾಹನಗಳು ಅಪರಿಮಿತ ಸಂಖ್ಯೆಯಲ್ಲಿ ಓಡಾಡುತ್ತಿರುವುದರಿಂದ ಸವಾರರ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ ಮೋಟಾರು ಕಾಯ್ದೆ ಉಲ್ಲಂಘನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಮತ್ತಷ್ಟು ಚುರುಕಾಗಿದೆ. ಅನ್‌ಲಾಕ್ ಬಳಿಕ ವ್ಯವಹಾರ- ವಹಿವಾಟುಗಳು ತೆರೆದುಕೊಂಡಿರುವುದರಿಂದ ಶೇ. 62ರಷ್ಟು ಪ್ರಕರಣಗಳು ಕಳೆದೆರಡು ತಿಂಗಳಲ್ಲಿ ದಾಖಲಾಗಿವೆ. ಹೆಲ್ಮೆಟ್, ಅತಿವೇಗ ಚಾಲನೆ, ಸೀಟ್ ಬೆಲ್ಟ್, ನೋ ಪಾರ್ಕಿಂಗ್, ಮೊಬೈಲ್ ಬಳಕೆ, ಕರ್ಕಶ ಹಾರ್ನ್, ಪೊಲೀಸರ ಸೂಚನೆ ಉಲ್ಲಂಘನೆ ಸಂಬಂಧಿಸಿ ಅತೀ ಹೆಚ್ಚು ಕೇಸುಗಳು ನೋಂದಣಿಯಾಗುತ್ತಿವೆ ಎಂದು ತಿಳಿದುಬಂದಿದೆ.

ಅಪಘಾತ ರಹಿತ ನಗರದ ಗುರಿ: ವೈಜ್ಞಾನಿಕ ಅಧ್ಯಯನದ ಪ್ರಕಾರ ನಾಲ್ಕು ಪ್ರಮುಖ ಕಾರಣಗಳಿಂದ ಅಪಘಾತಗಳಾಗುತ್ತವೆ. ಶೇ.85ರಷ್ಟು ಅಪಘಾತಗಳು ಮನುಷ್ಯರ ಲೋಪದಿಂದ ಸಂಭವಿಸುತ್ತವೆ, ಉಳಿದ ಶೇ. 15ರಷ್ಟು ಅಪಘಾತಗಳಿಗೆ ರಸ್ತೆ, ವಾಹನಗಳ ಅವ್ಯವಸ್ಥೆ ಮತ್ತು ವಾತಾವರಣದ ವೈಪರೀತ್ಯ ಕಾರಣ ಎಂಬುದಾಗಿ ತಜ್ಞರು ವಿಶ್ಲೇಷಿಸುತ್ತಾರೆ. ಆದರೆ ದಿನನಿತ್ಯವೂ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರ ಶ್ರಮವು ವಿಶೇಷವಾದುದ್ದು, ಅತೀ ವೇಗದಿಂದ ವಾಹನ ಸಂಚಾರ ಕಡೆಗಳಲ್ಲಿ ಬ್ಯಾರಿಕೇಡ್, ರಸ್ತೆ ತಿರುವುಗಳಿರುವ ಕಡೆಗಳಲ್ಲಿ ಸೂಚನೆ, ರೆಡ್ ಮಾರ್ಕ್‌ನ ರಸ್ತೆ ವಿಭಾಜಕಗಳನ್ನು ಕೂಡ ಅಳವಡಿಸಿಕೊಂಡಿದ್ದು, ನಗರದ್ಯಾಂತ ಅಪಘಾತ ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಲು ಇಲಾಖೆಯಿಂದ ವಿಶೇಷ ಕ್ರಮಗಳನ್ನು ರೂಪಿಸಲಾಗಿದೆ. ದಿನನಿತ್ಯ ಅತಿ ಹೆಚ್ಚಾಗಿ ಅಪಘಾತಗಳು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವುದು ಗೊತ್ತಿರುವ ಸಂಗತಿ. ಆದರೆ ನಗರ ಪ್ರದೇಶ ಅದೂ, ಮುಖ್ಯ ರಸ್ತೆಗಳಲ್ಲಿ ಅತಿವೇಗದಿಂದ ಚಾಲನೆ ಮಾಡಲು ಸಾಧ್ಯವೇ? ನಗರ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತ, ಸಾವು ನೋವು ಅಂಕಿ-ಸಂಖ್ಯೆ ಗಮನಿಸಿದರೆ ಬೆರಳಿಣಿಕೆ ಮಾತ್ರ. ಹೀಗಿದ್ದರೂ ಬೈಕ್ ಸವಾರರನ್ನು ಕಳ್ಳರಂತೆ ಹಿಡಿದು ದಂಡ ವಿಧಿಸುತ್ತಿದ್ದಾರೆ. ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಾವು ಬದ್ಧರಿದ್ದರೂ, ಅದೇ ರೀತಿ ಸುಗಮ ಸಂಚಾರ, ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದ ಪೊಲೀಸ್ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.


ಸಿಸಿ ಕ್ಯಾಮರಾದ ಹದ್ದಿನ ಕಣ್ಣು: ಕೆಲವೊಮ್ಮೆ ಪೊಲೀಸರು ರಸ್ತೆಯ ಬಳಿ ಇಲ್ಲವೆಂದು ರಾಜಾರೋಷಾವಾಗಿ ವಾಹನ ಸವಾರರು ಓಡಾಡುತ್ತಿದ್ದರೆ, ಪೊಲೀಸರ ಕಣ್ಗಾವಲು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿ ದಂಡಕ್ಕೆ ಅಹ್ವಾನ ನೀಡುವಂತಾಗುತ್ತದೆ. ಸಂಚಾರ ಪೊಲೀಸ್ ಸಿಬ್ಬಂದಿ ಹಾಜರಿಯ ನಡುವೆಯೂ ಅತೀ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗುತ್ತಿರುವ ವೃತ್ತ ಮತ್ತು ಜಂಕ್ಷನ್‌ಗಳನ್ನು ಗುರುತಿಸಿರುವ ನಗರ ಸಂಚಾರ ಪೊಲೀಸರು, ಅಂತಹ ಸ್ಥಳಗಳಲ್ಲಿ ಸಿಸಿ ಕ್ಯಾಮರಾದ ದೃಶ್ಯವನ್ನು ಗಮನಿಸಿಕೊಂಡು ಸವಾರರಿಗೆ ಬಿಸಿ ಮುಟ್ಟಿಸುವ ಕಾರ್ಯ ಕೂಡ ನಡೆಯುತ್ತಿದೆ. ಸಂಚಾರ ಪೊಲೀಸರ ಡಿಜಿಟಲ್ ಕ್ಯಾಮರಾ, ಪಬ್ಲಿಕ್ ಐ ಅಪ್, ರೆಡ್ ಲೈಟ್ ವಯಲೇಷನ್ ಡಿಟೆಕ್ಷನ್ ಕ್ಯಾಮರಾ, ಐ ಚೇಂಜ್ ಮೈ ಸಿಟಿ, ಎಫ್‌ಟಿವಿಆರ್ ಮೊಬೈಲ್ ಅಪ್, ಫೇಸ್‌ಬುಕ್, ಟ್ವೀಟರ್ ಹಾಗೂ ಸಾರ್ವಜನಿಕರ ದೂರುಗಳ ಮೂಲಕವೂ ದೂರುಗಳು ಬೆಳಕಿಗೆ ಬರುತ್ತವೆ.

ಹೆಲ್ಮೆಟ್, ಸೀಟ್ ಬೆಲ್ಟ್ ಹಾಕದಿದ್ರೆ ನೋ ಎಕ್ಸ್‌ಕ್ಯೂಸ್!: ಸರಕಾರ ತರಾತುರಿಯಲ್ಲಿ ಜಾರಿಗೊಳಿಸಿರುವ ದ್ವಿಚಕ್ರ ಸವಾರರ ಸುರಕ್ಷತೆಗಾಗಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದಾಗ ಆರಂಭದಲ್ಲಿ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಯಿತು, ಆದರೆ ಗುಣಮಟ್ಟವಿರುವ ಹೆಲ್ಮೆಟ್ ಧರಿಸುವುದರಿಂದ ಪ್ರಾಣ ಹಾನಿ ತಪ್ಪಿಸಬಹುದು ಎಂಬುದು ಸೇರಿದಂತೆ ಅಂಕಿ-ಅಂಶಗಳೊಂದಿಗೆ ಹಲವು ವಿಷಯಗಳನ್ನು ಪೊಲೀಸ್ ಇಲಾಖೆ ಮನವರಿಕೆ ಮಾಡಿತು. ನಿಯಮಕ್ಕೆ ಒತ್ತುಕೊಟ್ಟು ಸವಾರರು ಹೆಲ್ಮೆಟ್ ಧರಿಸುವುದನ್ನು ರೂಢಿ ಮಾಡಿಕೊಂಡಿದ್ದರು.

ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ 106 ಕೇಸುಗಳಾದರೆ, ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಬರೋಬ್ಬರಿ 352 ಕೇಸುಗಳು ದಾಖಲಾಗಿ ದ್ವಿಚಕ್ರ ಸವಾರರಿಂದ ದಂಡ ವಸೂಲಾಗಿದೆ. ಇನ್ನು ಸೀಟ್ ಬೆಲ್ಟ್ ಹಾಕದೇ ಪ್ರಯಾಣಿಸುವವರಿಗೂ ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು, ನಗರ ಸಂಚಾರ ಠಾಣೆಯಲ್ಲಿ ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ 450 ಕ್ಕೂ ಮಿಕ್ಕಿ ಕೇಸ್‌ಗಳು ದಾಖಲಾಗಿವೆ.

ದಾಖಲೆಗಳಿಗೆ ಮುಗಿಬಿದ್ದ ಜನ: ವಾಹನಕ್ಕೆ ಸಂಬಂಧಪಟ್ಟ ದಾಖಲೆ, ವಿಮೆ, ಮಾಲಿನ್ಯ ತಪಾಸಣೆ ಪತ್ರ, ಆರ್‌ಸಿ ಪುಸ್ತಕ, ಡಿಎಲ್ ಇತ್ಯಾದಿ ದಾಖಲೆ ಪಡೆದುಕೊಳ್ಳಲು ವಾಹನ ಸವಾರರು ಮುಗಿ ಬಿದ್ದಿದ್ದಾರೆ. ವಿಮೆ ಏಜೆಂಟರ ಕಚೇರಿ ಮತ್ತು ಆರ್‌ಟಿಒ ಕಚೇರಿಗಳಲ್ಲಿ ಜನಸಂದಣಿ ಕಂಡು ಬರುತ್ತಿದ್ದು, ಹಲವು ವರ್ಷಗಳಿಂದ ವಾಹನ ವಿಮೆ ಮಾಡಿಸದೇ ನಿರ್ಲಕ್ಷ್ಯ ವಹಿಸಿದ್ದವರು ಈಗ ಎಚ್ಚರಗೊಂಡಿದ್ದಾರೆ.

ಮಾಸ್ಕ್ ಹಾಕದವರ ಸಂಖ್ಯೆ ಹೆಚ್ಚಳ!: ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಸಾರ್ವಜನಿಕರು ಪಾಲಿಸದಿದ್ದರೆ ಪೊಲೀಸರು ಅವರಿಗೆ ದಂಡ ಹಾಕಿ, ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ, ನಗರದಲ್ಲಿ ಮಾಸ್ಕ್ ಹಾಕದೆ ಇರುವವರಲ್ಲಿ 448ಕೇಸ್‌ಗಳು ದಾಖಲಾಗಿದ್ದು ಬರೋಬ್ಬರಿ 46,300 ರೂ.ಗಳು ದಂಡ ಸಂಗ್ರಹವಾಗಿದೆ.

ನಿಯಮ ಪಾಲಿಸಿ, ದಂಡದಿಂದ ಪಾರಾಗಿ
ದಂಡ ಬೇಡ ಎಂದಾದರೆ ಸರಕಾರದ ನಿಯಮ ಪಾಲಿಸಿ, ಸಂಚಾರಿ ನಿಯಮ ಉಲ್ಲಂಸುವವರಿಗೆ ಹೆಚ್ಚುವರಿ ದಂಡ ವಿಧಿಸಿದ್ದು ಸಮಂಜಸವಾಗಿದೆ. ಕೇವಲ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಹೆಚ್ಚುವರಿ ದಂಡ ಕಟ್ಟುವುದನ್ನು ತಪ್ಪಿಸಬಹುದು. ದಂಡ ಪ್ರಯೋಗದ ಬಳಿಕ ಸವಾರರು ಎಚ್ಚೆತ್ತು ಕೊಂಡಿದ್ದು, ಸಂಚಾರ ನಿಯಮಗಳನ್ನು ಪಾಲಿಸಿಕೊಳ್ಳುತ್ತಿದ್ದಾರೆ.

– ರಾಮ ನಾಯ್ಕ್, ಎಸ್.ಐ. ಸಂಚಾರ ಪೊಲೀಸ್ ಠಾಣೆ ಪುತ್ತೂರು

ಇಷ್ಟು ದಾಖಲೆಗಳಿದ್ದರೆ ನೀವು ಸೇಫ್!
– ಚಾಲನಾ ಪರವಾನಗಿ ನೋಂದಣಿ ಪ್ರಮಾಣ ಪತ್ರ
– ಮಾಲಿನ್ಯ ತಪಾಸಣಾ ಪ್ರಮಾಣಪತ್ರ
– ಚಾಲ್ತಿಯಲ್ಲಿರುವ ವಾಹನ ವಿಮಾ ಪಾಲಿಸಿ
– 5 ಡಿಜಿ ಲಾಕರ್ ಮೂಲಕ ತೋರಿಸುವ ದಾಖಲೆಗಳೂ ಕೂಡ ಅಧಿಕೃತ

ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ  ಪ್ರಶ್ನೆಗಳ ಸುರಿಮಳೆ

  • ರಸ್ತೆ ಗುಂಡಿಗಳಿಗೆ ಯಾರು ಹೊಣೆ? ಹೊಣೆಗಾರರಿಗೆ ಎಷ್ಟು ದಂಡ ಹಾಕಿದ್ದೀರಿ?
  •  ಗುಂಡಿಗಳಿಂದಾಗಿ ಮೃತಪಟ್ಟ ಘಟನೆಗಳಿಗೆ ಇದುವರೆಗೂ ಯಾವ ಅಧಿಕಾರಿ, ಶಾಸಕ, ಮಂತ್ರಿಗಳನ್ನು ಹೊಣೆ ಮಾಡಿ ದಂಡ ವಸೂಲಿ ಮಾಡಿದ್ದೀರಿ? ಶಿಕ್ಷೆ ಕೊಟ್ಟಿದ್ದೀರಿ?
  •  ಸಾರ್ವಜನಿಕರ ಪ್ರಾಣದ ಬಗ್ಗೆ ಕಾಳಜಿ ಹೊಂದಿಲ್ಲದ ನೀವು ಸಾರ್ವಜನಿಕರ ಜೇಬಿನ ಮೇಲೆ ಕಣ್ಣು ಹಾಕುವುದು ಎಷ್ಟು ಸರಿ?
  •  ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿರುವ ಸಂದರ್ಭದಲ್ಲಿ ಎಷ್ಟು ಮಂದಿ ಟ್ರಾಫಿಕ್ ಅಧಿಕಾರಿಗಳಿಗೆ ದಂಡ ಹಾಕಿದ್ದೀರಿ?

ಕಳದೆರಡು ತಿಂಗಳಲ್ಲಿ ನೋ ಪಾರ್ಕಿಂಗ್ 42 ಕೇಸುಗಳು, ಪೊಲೀಸರ ಸೂಚನೆ ಉಲ್ಲಂಘನೆ ಸಂಬಂಧ 146 ಕೇಸುಗಳು, ಒವರ್ ಸ್ಟೀಡ್ 55 ಕೇಸುಗಳು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಪುತ್ತೂರು ನಗರ ಸಂಚಾರ ಪೊಲೀಸ್ ಠಾಣೆ:
– ಸೆಪ್ಟಂಬರ್ ತಿಂಗಳಲ್ಲಿ ಒಟ್ಟು 1022 ಕೇಸು- 5,45,600 ರೂ. ದಂಡ
– ಅಕ್ಟೋಬರ್ ತಿಂಗಳಲ್ಲಿ ಒಟ್ಟು 1522 ಕೇಸು- 6,06,700 ರೂ. ದಂಡ
– ಈ ವರುಷದಲ್ಲಿ ಒಟ್ಟು 7,965 ಕೇಸು- 35,35, 600 ರೂ. ದಂಡ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.