HomePage_Banner
HomePage_Banner
HomePage_Banner

ನಿಡ್ಪಳ್ಳಿಯಲ್ಲಿ ಅನುಗ್ರಹ ಸಭಾಭವನ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಆವರಣದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಅನುಗ್ರಹ ಸಭಾಭವನ ನ.9 ರಂದು ಲೋಕಾರ್ಪಣೆ ಗೊಂಡಿತು.
ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಇಲ್ಲಿಯ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ್  ಆರಿಗ ನಿಡ್ಪಳ್ಳಿ ಗುತ್ತು ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿ ಅಶೋಕ್ ಕುಮಾರ್ ರೈ  ಕೋಡಿಂಬಾಡಿ, ಪ್ರಗತಿಪರ ಕೃಷಿಕ ವಿಷ್ಣು ಭಟ್ ಬುಳೆನಡ್ಕ, ಪ್ರಗತಿಪರ ಕೃಷಿಕ ಸಂಜೀವ ಶೆಟ್ಟಿ ಕೊಮ್ಮಂಡ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,  ಪುತ್ತೂರು ಯಮುನಾ ಬೋರ್ ವೆಲ್ಸ್ ನ ದಿವ್ಯಾ ಕೃಷ್ಣ ಶೆಟ್ಟಿ ಪುತ್ತೂರು , ಕೋಟಿ ಚೆನ್ನಯ ಗರಡಿ ಕರ್ನಪ್ಪಾಡಿ ಇದರ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಭಾಭವನದ ಕೊಡುಗೆ ನೀಡಿದ ಬಾಲಕೃಷ್ಣ ರೈ ದಂಪತಿ, ಆನಂದ ರೈ ದಂಪತಿ, ಕೊರಗಪ್ಪ ರೈ ನರೈಮಾರು,ರವಿರಾಜ್ ರೈ ಕೆದಂಬಾಡಿಗುತ್ತು ದಂಪತಿ, ವಿಶ್ವನಾಥ ರೈ ಇರ್ದೆ ಇವರನ್ನು ಸನ್ಮಾನಿಸಲಾಯಿತು.
ಕು.ವೈಷ್ಣವಿ ಸ್ವಾಗತಿಸಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಪ್ರಾಸ್ತಾವಿಸಿ ಸ್ವಾಗತಿಸಿದರು. ಕೆ.ಎನ್.ಪಾಟಾಳಿ ವಂದಿಸಿ ಪ್ರಿಯದರ್ಶಿನಿ ಅಂಗ್ಲಮಾಧ್ಯಮ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಸಭಾ  ಕಾರ್ಯಕ್ರಮದ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಉದ್ಘಾಟನಾ ಸಮಾರಂಭದ ಮೊದಲು ಬೆಳಿಗ್ಗೆ ಗಣಪತಿ ಹೋಮ ನಡೆಯಿತು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.