HomePage_Banner
HomePage_Banner
HomePage_Banner

ಭಕ್ತಕೋಡಿ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲ ಎಳೆದ ಯುವಕ…!

Puttur_Advt_NewsUnder_1
Puttur_Advt_NewsUnder_1
  • ಹೊರ ರಾಜ್ಯದ ವಲಸೆ ಕಾರ್ಮಿಕನ ಕೃತ್ಯ-ಆರೋಪಿಯನ್ನು ಠಾಣೆಗೆ ಕರೆದೊಯ್ದ ಸಂಪ್ಯ ಪೊಲೀಸರು

ಪುತ್ತೂರು: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಎಳೆದ ಯುವಕನೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನ.9ರಂದು ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ನಡೆದಿದೆ.

ಮಹಿಳೆ ಕಲ್ಲಗುಡ್ಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗಲು ಭಕ್ತಕೋಡಿಯಿಂದ ಹೊರಟಿದ್ದು ಭಕ್ತಕೋಡಿ ಜಂಕ್ಷನ್‌ನಲ್ಲಿರವ ದ್ವಾರದ ತುಸು ದೂರ ತಲುಪುತ್ತಿದ್ದಂಂತೆ ಹಿಂದಿನಿಂದ ಬಂದ ಅಪರಿಚಿತ ಯುವಕ ಮಹಿಳೆಯ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಎಳೆದಿದ್ದಾನೆ, ಈ ವೇಳೆ ಮಹಿಳೆ ಬೊಬ್ಬೆ ಹೊಡೆದಿದ್ದು ಆ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರ ತಮ್ಮ ಬೈಕ್ ನಿಲ್ಲಿಸಿದ್ದು ಈ ವೇಳೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರ ಸಹಕಾರದೊಂದಿಗೆ ಹಿಡಿದಿಟ್ಟುಕೊಂಡಿದ್ದಾರೆ.

ಸಾರ್ವಜನಿಕರು ಸೇರಿ ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತ ಭಕ್ತಕೋಡಿ ಸಮೀಪದ ವ್ಯಕ್ತಿಯೊಬ್ಬರ ತೋಟದಲ್ಲಿ ಕೆಲಸಕ್ಕಿದ್ದು ಆತನ ಊರು ಜಾರ್ಖಂಡ್ ಎಂಬುವುದಾಗಿ ತಿಳಿದು ಬಂದಿದೆ. ಮೊದಲಿಗೆ ಸ್ಪಷ್ಟವಾಗಿ ಮಾತನಾಡಿದ್ದ ಆರೋಪಿ ಬಳಿಕ ಏನೇನೋ ಮಾತನಾಡಲು ಪ್ರಾರಂಭಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯ ಜನರು ಜಮಾವಣೆಗೊಂಡಿದ್ದರು. ಅಪರಿಚಿತ ಆರೋಪಿಯನ್ನು ಭಕ್ತಕೋಡಿ ಬಸ್‌ಸ್ಟ್ಯಾಂಡ್‌ನಲ್ಲಿ ಹಿಡಿದಿಟ್ಟಿದ್ದ ಸಾರ್ವಜನಿಕರು ಸಂಪ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಕೆಲವೇ ಹೊತ್ತಿನಲ್ಲಿ ಸಂಪ್ಯ ಎಸ್ಸೈ ಉದಯರವಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಬಂದು ಆರೋಪಿಯನ್ನು ವಿಚಾರಣೆ ನಡೆಸಿದ್ದು ಈ ವೇಳೆ ಆರೋಪಿ ಅಸ್ಪಷ್ಟವಾಗಿ ಮಾತನಾಡಿದ್ದು ಮಾನಸಿಕ ಖಿನ್ನತೆಗೊಳಗಾದಂತೆ ಕಂಡು ಬಂದರು. ಇನ್ನೇನು ಪೊಲೀಸರು ತನ್ನನ್ನು ಠಾಣೆಗೆ ಕರೆದೊಯ್ಯುತ್ತಾರೆ ಎನ್ನುವುದನ್ನು ಅರಿತ ಆರೋಪಿ ಭಕ್ತಕೋಡಿ ಬಸ್‌ಸ್ಟ್ಯಾಂಡ್‌ನಿಂದ ಹಿಂಬದಿಯ ಗುಡ್ಡಕ್ಕೆ ಜಿಗಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಿನಿಮೀಯ ಶೈಲಿಯಲ್ಲಿ ಆರೋಪಿಯ ಬೆನ್ನಟ್ಟಿದ ಪೊಲೀಸರು ತಕ್ಷಣವೇ ಬಂಧಿಸುವಲ್ಲಿ ಯಶಸ್ವಿಯಾದರು.

ಮಾನಸಿಕ ಖಿನ್ನತೆಗೊಳಗಾಗಿದ್ದ ಆರೋಪಿ:
ಆರೋಪಿಯನ್ನು ಪೊಲೀಸರು ಸಂಪ್ಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು ಈ ವೇಳೆ ಆರೋಪಿ ಮಾನಸಿಕ ಖಿನ್ನತೆಗೊಳಗಾಗಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.

ಕಾರ್‌ನ ಗಾಜು ಒಡೆದಿದ್ದ ಆರೋಪಿ…!
ಆರೋಪಿ ಭಕ್ತಕೋಡಿ ಸಮೀಪದ ತೋಟವೊಂದರಲ್ಲಿ ಕೆಲಸಕ್ಕಿದ್ದು ಅದೇ ಮನೆಯ ಯಜಮಾನನ ಕಾರಿನ ಗಾಜನ್ನು ನ.8ರಂದು ರಾತ್ರಿ ಒಡೆದು ಹಾಕಿದ್ದ ಎಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಗೊಳಗಾಗಿ ಇಂತಹ ಕೃತ್ಯವೆಸಗಿರುವುದಾಗಿ ತಿಳಿದು ಬಂದಿದೆ.

ಹೊರ ರಾಜ್ಯದವರಿಂದ ಸಮಸ್ಯೆ-ಸಾರ್ವಜನಿಕರ ಆತಂಕ
ಹೊರ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರು ವಿವಿಧ ಕಡೆಗಳಲ್ಲಿ ಕೆಲಸದಲ್ಲಿದ್ದಾರೆ. ಅವರು ಎಲ್ಲಿಯವರು, ಯಾವ ರಾಜ್ಯದವರು, ಅವರ ಹಿನ್ನೆಲೆಯೇನು ಎಂಬುವುದು ಯಾವುದೂ ಗೊತ್ತಾಗುವುದಿಲ್ಲ, ಹೊರ ರಾಜ್ಯದ ವಲಸೆ ಕಾರ್ಮಿಕರಿಂದ ಕೆಲವು ಕಡೆಗಳಲ್ಲಿ ಕಾನೂನು ಬಾಹಿರ ಕೃತ್ಯಗಳು ನಡೆದಿದೆ, ಹಾಗಾಗಿ ವಲಸೆ ಕಾರ್ಮಿಕರ ಬಗ್ಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತ್ ಇಲ್ಲವೇ ಪೊಲೀಸ್ ಠಾಣೆಗಳಲ್ಲಿ ಹೆಸರು ನೋಂದಾಯಿಸಿ ಕೆಲಸಕ್ಕೆ ಸೇರುವ ವ್ಯವಸ್ಥೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.