HomePage_Banner
HomePage_Banner
HomePage_Banner

ನೆಟ್ಟಣಿಗೆ ಮುಡ್ನೂರು ಗ್ರಾಪಂ ಜಮಾಬಂಧಿ ಸಭೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್‌ನ 2019-20ನೇ ಜಮಾಬಂದಿ ಸಭೆಯು ನ.೦೯ ರಂದು ಗ್ರಾಪಂ ಆಡಳಿತಾಧಿಕಾರಿ ರಾಜರಾಮ್ ಬಿ.ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಮಾಬಂಧಿ ಅಧಿಕಾರಿಯಾಗಿ ಜಿಪಂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ| ಸೆಲ್ವಮಣಿಯವರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಹಾಯಕ ನಿರ್ದೇಶಕ ಶೈಲಜಾ, ಗ್ರಾಪಂ ಮಾಜಿ ಅಧ್ಯಕ್ಷ ಶಂಕರಿ ಆರ್.ಭಂಡಾರಿ, ಮಾಜಿ ಉಪಾಧ್ಯಕ್ಷ ಶ್ರೀರಾಂ ಪಕ್ಕಳ, ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾಪಂ ಸದಸ್ಯೆ ಫೌಝಿಯಾ ಇಬ್ರಾಹಿಂ ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್ ಸ್ವಾಗತಿಸಿ, ಕಾರ್ಯದರ್ಶಿ ಕಮಲ್‌ರಾಜ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಶೀನಪ್ಪ ಸಹಕರಿಸಿದರು.

ವಿವಿಧ ಕಾಮಗಾರಿಗಳ ವೀಕ್ಷಣೆ
ಗ್ರಾಪಂ ಜಮಾಬಂಧಿ ಕಾಮಗಾರಿಗಳನ್ನು ಈ ಸಂದರ್ಭದಲ್ಲಿ ಡಾ| ಸೆಲ್ವಮಣಿಯವರು ವೀಕ್ಷಣೆ ಮಾಡಿದರು. ಕಲ್ಲೆಟ್ಟಿಮಾರ್ ಕಿಂಡಿಅಣೆಕಟ್ಟು, ಬೆದ್ರಾಡಿ ಗುತ್ತು ಅಂಗನವಾಡಿ, ಗುತ್ತು ಎಸ್.ಎಸಿ, ಎಸ್.ಟಿ ಸ್ಮಶಾನ ಕಾಮಗಾರಿ, ಈಶ್ವರಮಂಗಲ ಕೋರಿಗದ್ದೆ ಘನತ್ಯಾಜ್ಯ ವಿಲೇವಾರಿ ಘಟಕ ಈ ಕಾಮಗಾರಿಗಳನನು ವೀಕ್ಷಣೆ ನಡೆಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.