HomePage_Banner
HomePage_Banner
HomePage_Banner

ಅರಿಯಡ್ಕ ಗ್ರಾಮಕ್ಕೆ ಜಿಪಂ ಕಾರ್ಯನಿರ್ವಹಣಾಧಿಕಾರಿ ಭೇಟಿ

Puttur_Advt_NewsUnder_1
Puttur_Advt_NewsUnder_1
  • ದಿವ್ಯನಾಥ ಶೆಟ್ಟಿ ಸ್ಲರಿ ಘಟಕ, ಗ್ರಾಪಂ ತ್ಯಾಜ್ಯ ಘಟಕಕ್ಕೆ ಭೇಟಿ


ಪುತ್ತೂರು: ದಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಯವರು ನ.11ರಂದು ಅರಿಯಡ್ಕ ಗ್ರಾಮದ ವಿವಿಧ ಕಡೆಗಳಿಗೆ ಭೇಟಿ ನೀಡಿದರು.

ಮೊದಲಿಗೆ ಅರಿಯಡ್ಕ ಗ್ರಾಪಂ ಮಾಜಿ ಸದಸ್ಯ ದಿವ್ಯನಾಥ ಶೆಟ್ಟಿ ಯವರ ಸ್ಲರಿ ಘಟಕ ಹಾಗೂ ಹಾಳೆತಟ್ಟೆ ಫ್ಯಾಕ್ಟರಿಗೆ ಬೇಟಿ ನೀಡಿದರು. ಸ್ಲರಿ ಘಟಕದಲ್ಲಿ ಸಾವಯವ ಗೊಬ್ಬರವನ್ನು ಮಾಡುವ ವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಹಾಳೆತಟ್ಟೆ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು. ಕಳೆದ ಹಲವು ವರ್ಷಗಳಿಂದ ದಿವ್ಯನಾಥ ಶೆಟ್ಟಿಯವರು ಸ್ಲರಿ ಘಟಕವನ್ನು ಪ್ರಾರಂಭಿಸಿ ಸ್ಥಳೀಯವಾಗಿ ಸಾವಯವ ಗೊಬ್ಬರವನ್ನು ಪೂರೈಕೆ ಮಾಡುತ್ತಿದ್ದಾರೆ. ಜಾನುವಾರು ಸಾಕಾಣಿಕೆ ಜೊತೆಗೆ ಉಪಕಸುಬಾಗಿ ಸ್ಲರಿಯನ್ನು ಮಾಡುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಡಾ. ಸೆಲ್ವಮಣಿಯವರು ಸ್ಲರಿ ಘಟಕದ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಳಿಕ ಅರಿಯಡ್ಕ ಗ್ರಾಪಂ ವತಿಯಿಂದ ಅಮ್ಚಿನಡ್ಕದಲ್ಲಿ ನಿರ್ಮಾಣವಾಗುತ್ತಿರುವ ಘನ ತ್ಯಾಜ್ಯ ಘಟಕವನ್ನು ವೀಕ್ಷಣೆ ಮಾಡಿದರು. ಗ್ರಾಮದಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯವನ್ನು ಅಮ್ಚಿನಡ್ಕದಲ್ಲಿರುವ ತ್ಯಾಜ್ಯ ಘಟಕದಲ್ಲಿ ದಾಸ್ತಾನು ಮಾಡಲಾಗುತ್ತಿದ್ದು , ಇದರ ಕಾಮಗಾರಿ ಪ್ರಗತಿಯಲ್ಲಿದ್ದು ಸೆಲ್ವಮಣಿಯವರು ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನೆಟ್ಟಣಿಗೆ ಮುಡ್ನೂರು ಕ್ಷೇತ್ರದ ಜಿಪಂ ಸದಸ್ಯೆ ಅನಿತಾಹೇಮನಾಥ ಶೆಟ್ಟಿ, ಪುತ್ತೂರು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ತಾಪಂ ನಿದೇರ್ಶಕಿ ಶೈಲಜಾ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಶ್ರೀರಾಂ ಪಕ್ಕಳ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಭಿವೃದ್ದಿ ಅಧಿಕಾರಿ ಸಂದೇಶ್ ಕೆ ಎನ್, ಕಾರ್ಯದರ್ಶಿ ಕಮಲರಾಜ್, ಅರಿಯಡ್ಕ ಗ್ರಾಪಂ ಪಿಡಿಒ ಪದ್ಮಕುಮಾರಿ, ಅರಿಯಡ್ಕ ಗ್ರಾಪಂ ಮಾಜಿ ಸದಸ್ಯ ದಿವ್ಯನಾಥ ಶೆಟ್ಟಿ ಸೇರಿದಂತೆ ಕೆಲವು ಮಂದಿ ಉಪಸ್ಥಿತರಿದ್ದರು. ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಸ್ಲರಿ ಘಟಕ ಮತ್ತು ಘನತ್ಯಾಜ್ಯ ಘಟಕದ ಬಗ್ಗೆ ಡಾ. ಸೆಲ್ವಮಣಿಯವರಿಗೆ ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.