HomePage_Banner
HomePage_Banner

ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರೂ.2.63 ಲಕ್ಷ ನಿವ್ವಳ ಲಾಭ | 10% ಡಿವಿಡೆಂಡ್ | ಈರ್ವರಿಗೆ ಸನ್ಮಾನ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ಇದರ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ನ.8 ರಂದು ನರಿಮೊಗರು ಸೇವಾ ಸಹಕಾರಿ ಬ್ಯಾಂಕಿನ ರೈತಭವನ ಸಭಾಂಗಣದಲ್ಲಿ ಅಧ್ಯಕ್ಷ ವಿಜಯಕುಮಾರ್ ಸೊರಕೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ್ ಸೊರಕೆಯವರು ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆದಂತಹ ಹೋರಾಟದ ಫಲವಾಗಿ ಇಂದು ಮೂರ್ತೆದಾರರ ಸೇವಾ ಸಹಕಾರಿ ಸಂಘ ಉಳಿದು ನಿಂತಿದೆ. ಪುತ್ತೂರು ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಐದು ಸೊಸೈಟಿಗಳು ಗುಣಮಟ್ಟದ ಸೇವೆಯನ್ನು ಸರಿಯಾದ ರೀತಿಯಲ್ಲಿ ಒದಗಿಸುತ್ತಿರುವುದು ಬೇರೆ ಎಲ್ಲೂ ಕಾಣ ಸಿಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕಿಗಿಂತ ನಮ್ಮಲ್ಲಿ ಠೇವಣಿಯ ಮೇಲೆ ಬಡ್ಡಿದರ ಜಾಸ್ತಿ ನೀಡೋದ್ರಿಂದ ಪ್ರತೀ ಬಿಲ್ಲವರು ಕಡ್ಡಾಯವಾಗಿ ನಮ್ಮ ಬ್ಯಾಂಕಿನಲ್ಲಿ ಸದಸ್ಯರಾಗುವ ಮೂಲಕ ಬ್ಯಾಂಕಿನ ಪ್ರಗತಿಗೆ ಸಾಕ್ಷಿದಾರರಾಗಬೇಕು. ಪಿಗ್ಮಿಯಲ್ಲಿ ಹಣ ತೊಡಗಿಸಿಕೊಳ್ಳುವ ನಮ್ಮ ಗ್ರಾಹಕರಿಗೆ ವ್ಯವಹಾರವು ಪಾರದರ್ಶಕತೆಯಿಂದರಲಿ ಎನ್ನುವ ನಿಟ್ಟಿನಲ್ಲಿ ತಾವು ತೊಡಗಿಸಿಕೊಂಡ ಪ್ರತೀ ಹಣದ ಲೆಕ್ಕವು ಮೆಸೇಜ್ ಮೂಲಕ ಗ್ರಾಹಕರ ಮೊಬೈಲ್‌ಗೆ ರವಾನಿಸುತ್ತಿರುವುದಾಗಿದೆ ಎಂದು ಹೇಳಿ ಸರ್ವರ ಸಹಕಾರ ಕೋರಿದರು.

ಸಂಘದ ಗೌರವ ಸಲಹೆಗಾರರಾದ ಸಂತೋಷ್ ಕುಮಾರ್ ಮರಕ್ಕಡರವರು ಮಾತನಾಡಿ, ಮೂರ್ತೆದಾರರ ಮಹಾಮಂಡಲದ ಅಡಿಯಲ್ಲಿ ೨೭ ಮೂರ್ತೆದಾರರ ಸೇವಾ ಸಹಕಾರಿ ಸಂಘಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ. ಸಂಘವು ಬೆಳೆಯಬೇಕಾದರೆ ಪ್ರತಿಯೋರ್ವರ ಸಹಕಾರ ಮತ್ತು ಇಚ್ಛಾಶಕ್ತಿಯಿದ್ದಾಗ ಸಂಘವು ಅಭಿವೃದ್ಧಿಯಾಗಬಲ್ಲುದಾಗಿದೆ. ನಮ್ಮ ಸಂಘದಲ್ಲಿ ಸದಸ್ಯರಿಗೆ ಕನಿಷ್ಟ ಬಡ್ಡಿದರದಲ್ಲಿ ಸಾಲ, ಠೇವಣಿಯ ಮೇಲೆ ಅಧಿಕ ಬಡ್ಡಿಯನ್ನು ನೀಡುತ್ತಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ನಮ್ಮ ಸಂಘದಲ್ಲಿ ವ್ಯವಹಾರ ಮಾಡಬೇಕೆನ್ನುವುದು ನಮ್ಮ ಉದ್ಧೇಶವಾಗಿದೆ. ನಮ್ಮ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ಮೂಲಕ ಮತ್ತು ಬ್ಯಾಂಕಿನ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಬ್ಯಾಂಕಿನ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.

ನಿವ್ವಳ ಲಾಭ ರೂ.೨.೬೩ ಲಕ್ಷ, ೧೦% ಡಿವಿಡೆಂಡ್:
ವರದಿ ಸಾಲಿನಲ್ಲಿ `ಎ’ ತರಗತಿಯ ೪೬ ಮಂದಿ ಸದಸ್ಯರು ಸೇರ್ಪಡೆಗೊಂಡು ವರ್ಷಾಂತ್ಯಕ್ಕೆ ಒಟ್ಟು ೩೭೪ ಮಂದಿ ಸದಸ್ಯರಿದ್ದು ರೂ,೪,೬೪,೪೧೪ ಪಾವತಿಯಾದ ಪಾಲುಧನ ಮತ್ತು ಸರಕಾರದ `ಬಿ’ ತರಗತಿಯ ರೂ,೪೫೦೦೦ ಪಾಲುಧನ ಇರುತ್ತದೆ. ಸದಸ್ಯರಿಂದ ಉಳಿತಾಯ ಖಾತೆ, ನಿರಖು ಠೇವಣಿ, ದೈನಿಕ ಠೇವಣಿ ಮತ್ತು ನಗದು ಪತ್ರಗಳ ಮೂಲಕ ವರದಿ ವರ್ಷದಲ್ಲಿ ರೂ,೪,೮೮,೯೫,೨೧೬ನ್ನು ಸಂಗ್ರಹಿಸಲಾಗಿದೆ. ವರದಿ ಸಾಲಿನಲ್ಲಿ ಒಟ್ಟು ರೂ.೯,೦೧,೬೬,೫೦೫ ವ್ಯವಹಾರ ನಡೆಸಿ ರೂ,೨,೬೩,೯೨೮ ನಿವ್ವಳ ಲಾಭ ಗಳಿಸಿದ್ದು, ಶೇ.೧೦ ಡಿವಿಡೆಂಡ್‌ನ್ನು ನೀಡಲಾಗುತ್ತದೆ ಎಂದು ಅಧ್ಯಕ್ಷ ವಿಜಯಕುಮಾರ್ ಸೊರಕೆಯವರು ಘೋಷಣೆ ಮಾಡಿದರು.

ಸಂಘದ ಕಾರ್ಯಕ್ಷೇತ್ರ:
ಸಂಘದ ಕಾರ್ಯಕ್ಷೇತ್ರವು ಪುತ್ತೂರು ತಾಲೂಕಿನ ನರಿಮೊಗರು, ಶಾಂತಿಗೋಡು, ಮುಂಡೂರು, ಕೆಮ್ಮಿಂಜೆ, ಸರ್ವೆ ಹಾಗೂ ಕಡಬ ತಾಲೂಕಿನ ಸವಣೂರು, ಪುಂಚಲ್ಪಾಡಿ, ಕುದ್ಮಾರು, ಕಾಮಣ, ಬೆಳಂದೂರು, ಕಾಣಿಯೂರು, ಚಾರ್ವಾಕ ಮತ್ತು ದೋಲ್ಪಾಡಿ ಗ್ರಾಮಗಳನ್ನು ಒಳಗೊಂಡಿದೆ.

ಈರ್ವರಿಗೆ ಸನ್ಮಾನ/ಬೋನಸ್ ವಿತರಣೆ:
ಮೂರ್ತೆ ಕಸುಬುದಾರಿಕೆಯಲ್ಲಿ ೩೫ ವರ್ಷ ಸೇವೆ ನೀಡಿ ನಿವೃತ್ತಿ ಹೊಂದಿರುವ ಹಿರಿಯರಾದ ಚೆನ್ನಪ್ಪ ಪೂಜಾರಿ ಹಾಗೂ ೨೮ ವರುಷ ಅನುಭವ ಹೊಂದಿರುವ ದೇಜಪ್ಪ ಪೂಜಾರಿಯವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ಅಲ್ಲದೆ ಸಂಘದ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಕ್ತ ಮೂರ್ತೆದಾರರಿಗೆ ಬೋನಸ್‌ನ್ನು ವಿತರಿಸಲಾಯಿತು. ಮುಂಡೂರು ಸೊಸೈಟಿಯ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆಯವರು ಸನ್ಮಾನಿತರನ್ನು ಗೌರವಿಸಿ, ಮೂರ್ತೆದಾರರಿಗೆ ಬೋನಸ್ ವಿತರಿಸಿದರು.
ಸಂಘದ ಉಪಾಧ್ಯಕ್ಷ ಕೆ.ಪದ್ಮನಾಭ ಪೂಜಾರಿ ಬೆದ್ರಾಳ, ನಿರ್ದೇಶಕರಾದ ಅಣ್ಣಿ ಪೂಜಾರಿ ಎಚ್, ಪಿ.ಕೆ ಕೃಷ್ಣಪ್ಪ ಪೂಜಾರಿ ಕೊಡಂಗೆ, ಹೊನ್ನಪ್ಪ ಪೂಜಾರಿ ಕುರೆಮಜಲು, ಸತೀಶ್‌ಕುಮಾರ್ ಕೆಡೆಂಜಿ, ಸಂತೋಷ್ ಕುಮಾರ್ ಮರಕ್ಕೂರು, ಪದ್ಮಾವತಿ ಮುಂಡೋಡಿ, ಸುಜಾತ ಮರಕ್ಕೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಲ್ಲೇರಿಜಮಾ ಖರ್ಚಿನ ತಃಖ್ತೆ, ಲಾಭ ನಷ್ಟದ ತಃಖ್ತೆ, ಆಸ್ತಿ ಮತ್ತು ಜವಾಬ್ದಾರಿ ತಃಖ್ತೆಯನ್ನು ಓದಿದರು. ಸವಣೂರು ಶಾಖೆಯ ವ್ಯವಸ್ಥಾಪಕ ಶ್ರೀಶನ್ ಎ.ರವರು ಅಂದಾಜು ಬಜೆಟ್ (ಆಯ-ವ್ಯಯ) ತಃಖ್ತೆಯನ್ನು ಓದಿದರು. ನಿರ್ದೇಶಕ ಉದಯಕುಮಾರ್ ಕೋಲಾಡಿ ಸ್ವಾಗತಿಸಿ, ರವರು ವಂದಿಸಿದರು. ಸಿಬ್ಬಂದಿಗಳಾದ ರಮ್ಯ ಕೆ, ರೂಪಿಕಾ, ಚಂದ್ರಶೇಖರ ಕುರೆಮಜಲು, ಕಿರಣ್ ಕೋಡಿಬೈಲುರವರು ಸಹಕರಿಸಿದರು.

ಶೀಘ್ರವೇ ಕಾಣಿಯೂರು, ಕೆಮ್ಮಿಂಜೆ ಶಾಖೆ…
ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಸವಣೂರಿನ ಅಶ್ವಿನಿ ಕಾಂಪ್ಲೆಕ್ಸ್‌ನಲ್ಲಿ ಈಗಾಗಲೇ ಪೂರ್ಣಪ್ರಮಾಣದ ಶಾಖೆಯು ಲೋಕಾರ್ಪಣೆಗೊಂಡಿರುತ್ತದೆ. ಅಂದಿನಿಂದ ೨೦೨೦ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ಒಟ್ಟು ರೂ.೪೫,೦೦,೦೦೦ ವ್ಯವಹಾರ ನಡೆಸಿದ್ದು ಗ್ರಾಹಕರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಠಸ್ಸೆ ಪೇಪರ್ ವಿಸ್ತರಣಾ ಕೇಂದ್ರ, ಸಂದೇಶ ರವಾನೆ, ನೆಫ್ಟ್/ಆರ್‌ಟಿಜಿಎಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಭದ್ರತೆಗಾಗಿ ಸಿ.ಸಿ ಟಿವಿ, ಸೈರನ್ ಅಳವಡಿಸಲಾಗಿದೆ. ಮುಂದಿನ ಯೋಜನೆಯಂತೆ ಕಾಣಿಯೂರು ಮತ್ತು ಕೆಮ್ಮಿಂಜೆ ವ್ಯಾಪ್ತಿಯಲ್ಲಿ ಶಾಖೆಗಳನ್ನು ತೆರೆಯುವುದಾಗಿ ಆಡಳಿತ ಮಂಡಳಿ ಸಭೆಯಲ್ಲಿ ಸಮಾಲೋಚಿಸಿ ತೀರ್ಮಾನಿಸಲಾಗಿದೆ. -ವಿಜಯಕುಮಾರ್ ಸೊರಕೆ, ಅಧ್ಯಕ್ಷರು, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘ

ವಿಶೇಷತೆಗಳು...
-ವ್ಯಾಪಾರ ಸಾಲ, ವೇತನಾಧಾರಿತ ಸಾಲ
-ಮೂರ್ತೆದಾರಿಕೆ ಸಾಲ, ಪಿಗ್ಮಿ ಆಧಾರಿತ ಸಾಲ
-ಸ್ವ-ಸಹಾಯ ಗುಂಪುಗಳಿಗೆ ಸಾಲ, ಅಡವು ಸಾಲ
-ಜಾಮೀನು ಸಾಲ ಸಹಿತ ಈ-ಸ್ಟ್ಯಾಂಪಿಂಗ್(ಠಸ್ಸೆ ಪೇಪರ್)
-ಚಿನ್ನಾಭರಣ ಈಡಿನ ಸಾಲ ಕನಿಷ್ಠ ಬಡ್ಡಿದರದಲ್ಲಿ ಗರಿಷ್ಠ ಸಾಲ
-ಕಡಿಮೆ ಬಡ್ಡಿದರದಲ್ಲಿ ವಾಹನ ಖರೀದಿ ಸಾಲ
-ಮಾಸಿಕ ಕಂತುಗಳ ಉಳಿತಾಯ ಯೋಜನೆ(ಆರ್.ಡಿ)
-ಭಾರತದಾದ್ಯಂತ ಆರ್‌ಟಿಜಿಎಸ್/ನೆಫ್ಟ್ ಸೌಲಭ್ಯ
-ಠೇವಣಿಗಳಿಗೆ ಆಕರ್ಷಕ ಬಡ್ಡಿದರ
-ಹಿರಿಯ ನಾಗರಿಕರಿಗೆ/ಸಂಘ-ಸಂಸ್ಥೆಗಳಿಗೆ/ಸೈನಿಕರಿಗೆ/
ನಿವೃತ್ತ ಸೈನಿಕರಿಗೆ ಶೇ.೦.೫೦ ಹೆಚ್ಚುವರಿ ಬಡ್ಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.