HomePage_Banner
HomePage_Banner
HomePage_Banner

ಚೂರಿಯಿಂದ ಇರಿದು ಅಡಿಕೆ ವ್ಯಾಪಾರಿಯನ್ನು ದರೋಡೆ ಪ್ರಕರಣ | ಮೂವರು ದರೋಡೆಕೋರರ ಬಂಧನ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಚೂರಿಯಿಂದ ಇರಿದು ಅಡಿಕೆ ವ್ಯಾಪಾರಿಯನ್ನು ದರೋಡೆ ನಡೆಸಿದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದು, ಪರಾರಿಯಾಗಿರುವ ಈ ತಂಡದ ಇನ್ನಿಬ್ಬರು ದರೋಡೆಕೋರರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

 
ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕೋಟೆಕನಿ ಮಿತ್ತಪದವಿನ ಮೊಹಮ್ಮದ್ ಅಶ್ರಫ್ ಎಂಬವರ ಪುತ್ರ ಅಪ್ರೀದ್ (22), ಸೋಮವಾರಪೇಟೆ ತಾಲೂಕಿನ ದೊಡ್ಡಹನಕೊಡು ಗ್ರಾಮದ ಕಾಗಡಿಕಟ್ಟೆ ನಿವಾಸಿ ಅಬ್ದುಲ್ ಎಂಬವರ ಪುತ್ರ ಜುರೈಝ್ (20) ಮತ್ತು ಮೂಲತಃ ಬಂಟ್ವಾಳ ತಾಲೂಕಿನ ಬಡಗಬೆಲ್ಲೂರು ಗ್ರಾಮದ ಶಾಲೆ ಬಳಿ ನಿವಾಸಿ, ಹಾಲಿ ಕಡೆಶಿವಾಲಯ ದೊಡ್ಡಾಜೆಯಲ್ಲಿ ವಾಸವಿರುವ ಅಬ್ದುಲ್ ಸತ್ತಾರ್ ಎಂಬವರ ಪುತ್ರ ಮೊಹಮ್ಮದ್ ತಂಝೀಲ್ (22) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಚೂರಿ, ಮೂರು ಮೊಬೈಲ್ ಹಾಗೂ ಸುಲಿಗೆ ಮಾಡಿದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬಂಟ್ವಾಳ ತಾಲೂಕಿನ ಪೆರ್ನೆಯ ಆಶೀರ್ವಾದ ಕಟ್ಟಡದಲ್ಲಿ ಅಡಿಕೆ ಖರೀದಿ ಅಂಗಡಿ ನಡೆಸುತ್ತಿದ್ದ ದೀಪಕ್ ಜಿ. ಶೆಟ್ಟಿಯವರು ಅ.೨೭ ರಂದು ಸಂಜೆ ಅಂಗಡಿಗೆ ಬಾಗಿಲು ಹಾಕಿ ಅಡಿಕೆ ಮಾರಾಟ ಮಾಡಿದ ಮೂರುವರೆ ಲಕ್ಷ ನಗದಿನೊಂದಿಗೆ ಪದೆಬರಿಯ ತನ್ನ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆಕ್ಟೀವಾದಲ್ಲಿ ಅವರನ್ನು ಹಿಂಭಾಲಿಸಿಕೊಂಡು ಬಂದ ದರೋಡೆಕೋರರ ತಂಡ ಬಿಳಿಯೂರಿನ ಪೆಜಕುಡೆ (ಪಜೆಕೋಡಿ) ಎಂಬಲ್ಲಿ ದೀಪಕ್ ಅವರನ್ನು ಅಡ್ಡಗಟ್ಟಿ ಅವರಿಗೆ ಚೂರಿಯಿಂದ ಇರಿದು, ಅವರಲ್ಲಿದ್ದ ಮೂರುವರೆ ಲಕ್ಷ ನಗದು, ಒಂದೂವರೆ ಪವನ್‌ನ ಒಂದು ಚಿನ್ನದ ಸರ ಹಾಗೂ ಲಾವಾ ಕಂಪೆನಿಯ ಮೊಬೈಲ್ ಸೆಟ್ ಅನ್ನು ದರೋಡೆ ನಡೆಸಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ದೀಪಕ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಇದೀಗ ದರೋಡೆಕೋರರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಾದ ಅಪ್ರೀದ್ ಮತ್ತು ಜುರೈಝ್‌ನನ್ನು ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆದ ಪೊಲೀಸರು, ಮೊಹಮ್ಮದ್ ತಂಝೀಲ್‌ನನ್ನು ಕಡೇಶಿವಾಲಯದ ಬಳಿ ಬಸ್‌ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳೆಲ್ಲರೂ 25 ವರ್ಷದೊಳಗಿನವರಾಗಿದ್ದು, ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. ಈ ಪ್ರಕರಣದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.


ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶ ಹಾಗೂ ಪುತ್ತೂರು ವಿಭಾಗದ ಪೊಲೀಸ್ ಸಹಾಯಕ ಅಧೀಕ್ಷಕರ ನಿದೇರ್ಶನದಂತೆ ಪ್ರೊಬೆಷನರಿ ಐಪಿಎಸ್ ರೋಹನ್ ಜಗದೀಶ್, ಪುತ್ತೂರು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ನೇತೃತ್ವದಲ್ಲಿ ಈ ಪ್ರಕರಣವನ್ನು ಭೇಧಿಸಿದ ವಿಶೇಷ ಪತ್ತೆತಂಡದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ, ಸಿಬ್ಬಂದಿಗಳಾದ ಚೋಮ, ಜನಾರ್ದನ, ಹರೀಶ್ಚಂದ್ರ, ಶೇಖರ, ಹರೀಶ, ಬಾಲಕೃಷ್ಣ, ಹಿತೋಷ, ಕುಶಾಲಪ್ಪ, ಇರ್ಷಾದ್ ಪಡಂಗಡಿ, ಪ್ರತಾಪ್, ಚಂದ್ರಶೇಖರ, ವಿನಾಯಕ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ಕಚೇರಿಯ ಸಿಬ್ಬಂದಿಗಳಾದ ಧರ್ಣಪ್ಪ, ಅಬ್ದುಲ್ ಸಲೀಂ, ಶಿವರಾಮ, ಜಗದೀಶ್ ಅತ್ತಾಜೆ, ಜಿಲ್ಲಾ ಗಣಕಯಂತ್ರ ವಿಭಾಗದ ದಿವಾಕರ, ಸಂಪತ್, ಬಂಟ್ವಾಳ ಸಂಚಾರ ಠಾಣೆಯ ಸಿಬ್ಬಂದಿ ದೇವದಾಸ್, ಇಲಾಖೆಯ ವಾಹನ ಚಾಲಕರಾದ ಬಂದೆನವಾಜ್ ಬುಡ್ಡಿ, ಕನಕರಾಜ್, ರಂಜಿತ್ ಇದ್ದರು. ಗ್ರಾಮಾಂತರ ಪ್ರದೇಶದಲ್ಲಿ ದರೋಡೆ ನಡೆದು, ಪರಿಸರದಲ್ಲಿ ಭೀತಿಗೆ ಕಾರಣವಾಗಿದ್ದ ಈ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.