HomePage_Banner
HomePage_Banner
HomePage_Banner

ಕೆದಂಬಾಡಿ : ಲಾಲ್ ಕೃಷ್ಣ ಅಡ್ವಾಣಿಯವರು ಜನ್ಮ ದಿನಾಚರಣೆಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ 93ನೇ ಜನ್ಮದಿನಾಚರಣೆಯನ್ನು ಕೆದಂಬಾಡಿ ಬಿಜೆಪಿ ಬೂತ್ ಸಮಿತಿ 185 ಮತ್ತು ಯುವಮೋರ್ಚಾ ಬೂತ್ ಸಮಿತಿ ಇದರ ವತಿಯಿಂದ ಕುಂಬ್ರದಿಂದ ,ಸಾರೆಪುಣಿ ಯ ರಸ್ತೆಯ ಎರಡು ಭಾಗಗಲಲ್ಲಿ ಪಾದಚಾರಿಗಳಿಗೆ  ನಡೆದಾಡಲು  ಅನುಕೂಲವಾಗುವ ರೀತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸ್ವಚ್ಛತಾ  ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೈರಾಲಿ ಸತ್ಯನಾರಾಯಣ ಶರ್ಮನ್ ಮಾತನಾಡಿ ಪಕ್ಷದ ವತಿಯಿಂದ ನಡೆಸುವ ಸೇವಾ ಚಟುವಟಿಕೆಗಳಿಗೆ ಮೆಚ್ಚಿಗೆ ವ್ಯಕ್ತಪಡಿಸಿ ಸ್ವಚ್ಛತೆ ಎಂಬುವುದು ಪ್ರತಿ ಮನೆಗಳಿಂದ ನಡೆದರೆ ದೇಶ ಸ್ವಚ್ಛವಾಗುವುದು ಎಂಬ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್ ಕೊರಂಗ ಪ್ರಧಾನ ಕಾರ್ಯದರ್ಶಿ ರತನ್ ರೈ ಕುಂಬ್ರ. ಕೆದಂಬಾಡಿ ಸಹಕಾರಿ ಸಂಘದ ಉಪಾಧ್ಯಕ್ಷ ಶಿವರಾಮಗೌಡ ಇದ್ಯಾಪ್ಪೆ ಕೆದಂಬಾಡಿ ಶಕ್ತಿಕೇಂದ್ರದ ಪ್ರಮುಖ್ ನಾರಾಯಣ ಪೂಜಾರಿ ಕುರಿಕ್ಕಾರ. ಬೂತ್ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರ.ಐ.ಇದ್ಪಾಡಿ . ಹಿರಿಯರಾದ ರವೀಂದ್ರನಾಥ ರೈ ಕುಯ್ಯಾರು. ಬಾಲಕೃಷ್ಣ ರೈ ಕೋರಿಕ್ಕಾರ್. ವಿದಿಪ್ ಕುಮಾರ್,ಯುವಮೊರ್ಚಾ ಬೂತ್ ಸಹ ಸಂಚಾಲಕ ರುಗಳಾದ ಹರ್ಷತ್ ಇದ್ಪಾಡಿ  ಜಯರಾಮ ರೈ ಕುರಿಕ್ಕಾರ, ಉದಯ ರೈ ಮಂದಾರ,ಉಮೇಶ್ ಗೌಡ ಇದ್ಯಾಪ್ಪೆ. ಕೃಷ್ಣ ಕುಮಾರ್ ಇದ್ಯಾಪ್ಪೆ, ಚಿರಾಗ್ ರೈ ಬೆದ್ರುಮಾರ್ , ಪ್ರಮೋದ್ ಶ್ರೇಯಾ ರಿಂಗ್, ರಾಮ ಪಾದೆಡ್ಕ,ಹುಕ್ರ ಪಾದೆಡ್ಕ,  ಸುಂದರ ಪಾದೆಡ್ಕ,  ಜೋಗಿ ಕುಂಬ್ರ, ನಾರಾಯಣ ಪರ್ಪುಂಜ, ಮಾಧವ ಪಯಂದೂರು ಉಪಸ್ಥಿತರಿದ್ದರು.
ಸೀತಾರಾಮ ಗೌಡ ಇದ್ಯಾಪ್ಪೆ ಸ್ವಾಗತಿಸಿ.  ಸುಭಾಷ್ ರೈಕುರಿಕ್ಕಾರ ವಂದಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.