HomePage_Banner
HomePage_Banner
HomePage_Banner

ನಗರಸಭೆ ವ್ಯಾಪ್ತಿಯಲ್ಲಿ ಅಪಾಯಕಾರಿ ಮರದ ಗೆಲ್ಲುಗಳ ತೆರವು | ಕೊಂಬೆಟ್ಟಿನಲ್ಲಿ ಆರಂಭವಾದ ಕಾರ್ಯಾಚರಣೆ ಎಲ್ಲಾ ವಾರ್ಡ್‌ಗಳಿಗೆ ಮಾದರಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ನಗರಸಭೆಯ ವ್ಯಾಪ್ತಿಯೊಳಗೆ ರಸ್ತೆ, ಮನೆಗಳು, ಕಚೇರಿಗಳ ಬದಿಯಲ್ಲಿ ಅಪಾಯಕಾರಿ ಮರಗಳಿದ್ದರೆ ಅದರ ರೆಂಬೆ ಕೊಂಬೆಗಳನ್ನು ಕತ್ತರಿಸುವ ಕುರಿತು ಶಾಸಕ ಸಂಜೀವ ಮಠಂದೂರು ನೀಡಿದ ಸೂಚನೆಯಂತೆ ಇತ್ತೀಚೆಗೆ ಕೊಂಬೆಟ್ಟಿನಲ್ಲಿ ಅಪಾಯಕಾರಿ ಮರದ ಗೆಲ್ಲು ತೆರವು ಗೊಳಿಸಿದ ಬಳಿಕ ನ.10ರಂದು ಸರಕಾರಿ ಆಸ್ಪತ್ರೆಯ ವಠಾರದ ಹಿಂಬದಿಯ ಸಾರ್ವಜನಿಕ ವಾಸ್ತವ್ಯದ ರಸ್ತೆ ಬದಿಯಲ್ಲಿನ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವು ಕಾರ್ಯಾಚರಣೆ ನಡೆಸಲಾಯಿತು.

ಸರಕಾರಿ ಆಸ್ಪತ್ರೆ ವಠಾರದ ಹಿಂಬದಿಯಲ್ಲಿ ಸಾರ್ವಜನಿಕ ವಾಸ್ತವ್ಯದ ಮನೆಗಳಿಗೆ ಹೋಗುವ ರಸ್ತೆ ಬದಿ ಅಪಾಯಕಾರಿ ಮೇ ಫ್ಲವರ್ ಮರಗಳಿದ್ದು, ಆಗಲೋ ಈಗಲು ಬೀಳುವ ಸ್ಥಿತಿಯಲ್ಲಿದ್ದು, ಜೊತೆಗೆ ಮರಗಳ ಬೇರುಗಳು ಮೇಲಕ್ಕೆ ಬಂದ ಹಿನ್ನೆಲೆಯಲ್ಲಿ ಆವರಣಗೋಡೆಯೊಂದು ವಾಲಿದ್ದು, ಈಗಲೋ ಆಗಲೋ ಬೀಳುವಂತಿತ್ತು. ಈ ಕುರಿತು ಸ್ಥಳೀಯರು ನಗರಸಭೆ ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರ ಮೂಲಕ ಶಾಸಕರ ಗಮನಕ್ಕೆ ತಂದಿದ್ದರು. ಶಾಸಕರು ಬೆಳ್ಳಂ ಬೆಳಗ್ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತಕ್ಷಣ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರುವುಗೊಳಿಸುವಂತೆ ಮೆಸ್ಕಾಂ ಇಂಜಿನಿಯರ್‌ಗಳಿಗೆ ಸೂಚಿಸಿದರು. ಜೊತೆಗೆ ಸರಕಾರಿ ಆಸ್ಪತ್ರೆಯ ವಾಲಿದ ಆವರಣಗೋಡೆಯನ್ನು ತೆರವು ಮಾಡಿ ದುರಸ್ಥಿಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.

ಆಸ್ಪತ್ರೆಯಿಂದಾಗುವ ಸಮಸ್ಯೆ..
ಸಾರ್ವಜನಿಕ ರಸ್ತೆಯ ಫಲಾನುಭವಿಗಳು ಸರಕಾರಿ ಆಸ್ಪತ್ರೆಯ ತಡೆಗೋಡೆಗಳು ಅಪಾಯಕಾರಿಯಲ್ಲಿದೆ. ನೀರಿನ ಟ್ಯಾಂಕ್‌ನ ಒಂದು ಬಂದಿ ಆವರಣಗೋಡೆ ಇಲ್ಲದೆ ಅಪಾಯದ ಸ್ಥಿತಿಯಲ್ಲಿದೆ. ಟ್ಯಾಂಕ್‌ನಲ್ಲಿ ಒಮ್ಮೊಮ್ಮೆ ನೀರು ಓವರ್ ಪ್ಲೋ ಆಗಿ ರಸ್ತೆಯುದ್ದಕ್ಕೂ ಗಂಟೆಗಟ್ಟಲೆ ಹರಿಯುತ್ತಿದ್ದರೂ ಆಸ್ಪತ್ರೆಯಿಂದ ಅದರ ನಿರ್ವಹಣೆ ಆಗುತ್ತಿಲ್ಲ. ಆಸ್ಪತ್ರೆಯ ಕಡೆಯಿಂದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದಿರಂದ ಪರಿಸರ ಸ್ವಚ್ಛತೆಗೆ ತಡೆಯಾಗಿದೆ. ಹಳೆ ಕಾಲದ ಆವರಣಗೋಡೆಗಳಾಗಿದ್ದರಿಂದ ದಾರಿಯಲ್ಲಿ ಸಾರ್ವಜನಿಕರು ಭಯದಿಂದಲೇ ಓಡಾಟ ಮಾಡಬೇಕಾಗಿದೆ ಎಂದು ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಶಾಸಕರು ಈ ಕುರಿತು ಸರಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ನೀಲಾ ನಕಾಶೆ ಸಿದ್ಧವಾಗಿದೆ. ಅಭಿವೃದ್ದಿ ಕಾಮಗಾರಿ ವೇಳೆ ಎಲ್ಲವು ಸರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯೆರಾಗಿರುವ ಮತ್ತು ನಗರಸಭೆ ಉಪಾಧ್ಯಕ್ಷರೂ ಆಗಿರುವ ವಿದ್ಯಾ ಆರ್ ಗೌರಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭಾ ಸ್ಥಳೀಯ ಸದಸ್ಯೆ ಯಶೋಧ ಹರೀಶ್, ಸ್ಥಳೀಯರಾದ ಸ್ವಾಮಿ ಮಾದವ, ನ್ಯಾಯವಾದಿ ಪಿ.ಕೆ.ಸತೀಶನ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.