HomePage_Banner
HomePage_Banner

ಸಿಡ್ಕೋ ಸೊಸೈಟಿಗೆ ರೂ.9.44 ಲಕ್ಷ ಲಾಭ, ಶೇ.16 ಡಿವಿಡೆಂಡ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಟಿ.ವಿ ರವೀಂದ್ರನ್

 
ಪುತ್ತೂರು: ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಸಂಘವು 2019-20ನೇ ಸಾಲಿನಲ್ಲಿ ರೂ.9,44,549.50 ಲಾಭ ಗಳಿಸಿರುತ್ತದೆ. ಶೇ.16 ಡಿವಿಡೆಂಡ್ ನೀಡಲಾಗುವುದು. ಆಡಿಟ್ ವರ್ಗೀಕರಣದಲ್ಲಿ ಸಂಘವು’ಎ’ ಶ್ರೇಣಿಯನ್ನು ಪಡೆದಿರುತ್ತದೆ ಎಂದು ಅಧ್ಯಕ್ಷ ಟ.ವಿ ರವೀಂದ್ರನ್ ಮಹಾಸಭೆಯಲ್ಲಿ ಹೇಳಿದರು.

ಸಭೆಯು ನ.10ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದಲ್ಲಿ ವರ್ಷಾಂತ್ಯಕ್ಕೆ ಒಟ್ಟು ರೂ.29,46,326 ಪಾಲು ಬಂಡವಾಳ ಇರುತ್ತದೆ. ರೂ.65,000 ಸರಕಾರದ ಬಂಡವಾಳವಿರುತ್ತದೆ. ರೂ.4,22,75,191.41 ಠೇವಣಿ, ರೂ.1,75,41,918 ಸಂಘ ವಿನಿಯೋಗಿಸಿದೆ. ವರ್ಷಾಂತ್ಯಕ್ಕೆ 3,39,82,453 ಹೊರ ಬಾಕಿ ಸಾಲವಾಗಿರುತ್ತದೆ. ಈ ಪೈಕಿ 13,87,753 ವಾಯಿದೆ ದಾಟಿದ ಸಾಲವಾಗಿರುತ್ತದೆ. ಈ ವರ್ಷ ಶೇ.96 ಸಾಲ ವಸೂಲಿಯಾಗಿರುತ್ತದೆ. ಸಂಘದಲ್ಲಿ ರೂ.21,92,901.60 ಸ್ಥಿರ, ಚರ ಸೊತ್ತುಗಳಿವೆ ಎಂದರು.

75% ಬಡ್ಡಿ ರಿಯಾಯಿತಿ;
ಕೊರೋನಾ ಲಾಕ್ ಡೌನ್ ನಿಂದಾಗಿ ಏಪ್ರಿಲ್‌ನಲ್ಲಿ ವ್ಯವಹಾರಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸದಸ್ಯರಿಗೆ ಸಾಲ ಪಾವತಿಸಲು ಸಪ್ಟಂಬರ್ ತನಕ‌ ಕಾಲಾವಕಾಶ ನೀಡಲಾಗಿತ್ತು. ಸರಿಯಾಗಿ ಸಾಲ ಮರು ಪಾವತಿ ಮಾಡಿದವರಿಗೆ ಶೇ.75 ಬಡ್ಡಿ ರಿಯಾಯಿತಿ ‌ನೀಡಲಾಗಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ಈ ರೀತಿ ಯಾವುದೇ ಬ್ಯಾಂಕ್ ಗಳು ರಿಯಾಯಿತಿ ನೀಡಿಲ್ಲ. ಇದೇ ಮೊದಲು ನೀಡಿದ್ದು ಅಡಳಿತ ಮಂಡಳಿಯ ನೀಡಿದ್ದು ಅಭಿನಂದಿಸುವುದಾಗಿ ಸದಸ್ಯರು ತಿಳಿಸಿದರು.

ಅಧಿಕಾರಿಗಳ ಸಭೆ;
ಹೊಸ ಕೈಗಾರಿಕೆಗಳ ಪ್ರಾರಂಭಿಸಲು ಇಲಾಖೆಯ ವೆಬ್ ಸೈಟ್ ನಲ್ಲಿ ನೋಂದಾವಣೆ ಆಗುತ್ತಿಲ್ಲ. ಅದರಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳಿವೆ. ಇದರ ಕುರಿತು ಯಾರಿಗೂ ಸರಿಯಾದ ಮಾಹಿತಿಯಿಲ್ಲ ಎಂದು ಸದಸ್ಯರು ತಿಳಿಸಿದರು. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿಗಳ ಸಭೆ ನಡೆಸಿ‌ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿಯಿದೆ. ಆದರೆ ಅವರು ಕಚೇರಿಗೆ ಯಾವಾಗ ಬರುತ್ತಾರೆ ಎಂಬ ಸರಿಯಾದ ಮಾಹಿತಿಯಿಲ್ಲ. ಸದಸ್ಯರಿಗೆ ಇಲಾಖೆಯ ಮಾಹಿತಿಗಳು ಆವಶ್ಯಕವಾಗಿದೆ. ಹೀಗಾಗಿ ನಮ್ಮ ಸಂಘವು ಕೈಗಾರಿಕಾ ಅಭಿವೃದ್ಧಿ ಸಹಕಾರಿ ಸಂಘವಾಗಿದ್ದು ಸಂಘದ ಕಚೇರಿಯಲ್ಲಿ ವಿಸ್ತರಣಾಧಿಕಾರಿಗಳಿಗೆ ಕಚೇರಿಯನ್ನು ನೀಡುವುದು ಉತ್ತಮ ಎಂದು ಸದಸ್ಯರು ತಿಳಿಸಿದರು.

ನಿರ್ದೇಶಕರಾದ ಪ್ರೇಮಾನಂದ, ಪದ್ಮಶ್ರೀ ಡಾ.ಗಿರೀಶ್ ಭಾರದ್ವಾಜ್, ರವಿರಾಜ ಭಟ್, ಮೀನಾಕ್ಷಿ ಮಂಜುನಾಥ, ಪಿ.ಎಸ್ ಕೃಷ್ಣ ಮೋಹನ ಪಿ.ಎಸ್., ಸುಧೀರ್ ಶೆಟ್ಟಿ ಪಿ., ಕೇಶವ ಬಿ., ಜಗನ್ನಾಥ ರೈ ಸುಳ್ಯ, ಮಹಾಲಕ್ಷ್ಮಿ, ‌ಸುರೇಖಾ ಡಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರಸನ್ನ ಕುಮಾರ್ ರೈ, ಲೆಕ್ಕಿಗ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕರಾದ ಮಹಾಲಕ್ಷ್ಮೀ ಪ್ರಾರ್ಥಿಸಿದರು. ಮೋಹನ್ ಕುಮಾರ್ ಬೊಳ್ಳಾಡಿ ವಂದಿಸಿದರು. ಸಿಬಂದಿ ಜಗದೀಶ, ಪಿಗ್ಮಿ ಸಂಗ್ರಾಹಕ ಮುರಳಿ ಯಂ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.