HomePage_Banner
HomePage_Banner
HomePage_Banner

ನೆಟ್ಟಣಿಗೆ ಮುಡ್ನೂರು ಗ್ರಾಮದ ಆದಿದ್ರಾವಿಡ ಸಮಾಜ ಸೇವಾ ಸಂಘ ರಚನೆ

Puttur_Advt_NewsUnder_1
Puttur_Advt_NewsUnder_1


ಈಶ್ವರಮಂಗಲ: ನೆಟ್ಟಣಿಗೆ ಮುಡ್ನೂರು ಗ್ರಾಮದ ಆದಿದ್ರಾವಿಡ ಸಮಾಜ ಸೇವಾ ಸಂಘವನ್ನು ರಚಿಸುವ ಸಲುವಾಗಿ ಆದಿದ್ರಾವಿಡ ಸಮಾಜ ಬಾಂಧವರ ಸಭೆಯನ್ನು ಈಶ್ವರಮಂಗಲದ “ಅನುಗ್ರಹ” ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಮಲ್ಲೇಶ್ ಕೆಮ್ಮತ್ತಡ್ಕ ವಹಿಸಿದ್ದರು. ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ರಾಮ ಮೇನಾಲ ಪ್ರಾಸ್ತಾವಿಕ ಮಾತನಾಡಿ ಸಂಘದ ಧ್ಯೇಯ ಧೋರಣೆ ಮತ್ತು ಉದ್ದೇಶದ ಬಗ್ಗೆ ಸವಿವರವಾಗಿ ಹೇಳಿದರು. ನಂತರ 2020-2021ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ವಿಜಯ ಗುತ್ತು, ಗೌರವಾಧ್ಯಕ್ಷರಾಗಿ ಸುಂದರ ಜಿ., ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಕೆಮ್ಮತ್ತಡ್ಕ, ಕಾರ್ಯದರ್ಶಿ ಶ್ರೀಕಾಂತ್ ಮೈರೋಳು, ಕೋಶಾಧಿಕಾರಿ ಕೊರಗಪ್ಪ ವಜ್ರಮೂಲೆ, ಉಪಾಧ್ಯಕ್ಷರಾಗಿ ಬಾಬು ಮೈರೋಳು, ಕು. ಅಶ್ವಿನಿ ವಜ್ರಮೂಲೆ ಮತ್ತು ಪ್ರವೀಣ ಮೈರೋಳು, ಜೊತೆ ಕಾರ್ಯದರ್ಶಿಗಳಾಗಿ ಸುಬ್ಬ ಕಟ್ಟತ್ತಾರು ಮತ್ತು ವೆಂಕಪ್ಪ ಮೇನಾಲ, ಸಂಘಟನಾ ಕಾರ್ಯದರ್ಶಿ ತಾರನಾಥ ನೂಜಿಬೈಲು, ಕ್ರೀಡಾ ಕಾರ್ಯದರ್ಶಿ ಸತೀಶ ಬೆದ್ರಾಡಿ, ಸಾಂಸ್ಕೃತಿಕ ಕಾರ್ಯದರ್ಶಿ ಕು. ದೀಕ್ಷಿತಾ ಮೇನಾಲ, ಗೌರವ ಸಲಹೆಗಾರರಾಗಿ ರಾಮ ಮೇನಾಲ, ವಿಶ್ವನಾಥ ಗುತ್ತು, ರವಿ ಬೆದ್ರಾಡಿ, ಕರಿಯಪ್ಪ ವಜ್ರಮೂಲೆ ಮತ್ತು ಸಾಂತಪ್ಪ ಸಜಂಕಾಡಿ, ಸಾಮಾಜಿಕ ಜಾಲತಾಣದ ಪ್ರತಿನಿಧಿಯಾಗಿ ಶಿವಪ್ಪ ಗುತ್ತು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕುಶಾಲಪ್ಪ ಮೇನಾಲ, ಪ್ರಸಾದ್ ಮೈರೋಳು, ಶಂಕರ ಗುತ್ತು, ಶರತ್ ಮೈರೋಳು, ರಮೇಶ್ ವಜ್ರಮೂಲೆ, ನಾಗೇಶ ಬೆಳ್ಳಿಚಡವು, ಪೊಡಿಯ ಬೆಳ್ಳಿಚಡವು, ಶ್ರೀಮತಿ ಸಂಜೀವಿ ವಜ್ರಮೂಲೆ, ಮೋಹನ ಕೆಮ್ಮತ್ತಡ್ಕ ಮತ್ತು ವಸಂತ ಗುತ್ತು ಇವರನ್ನು ಆಯ್ಕೆಮಾಡಲಾಯಿತು. ವೇದಿಕೆಯಲ್ಲಿ ಸುಂದರ ಜಿ., ತಾರನಾಥ ನೂಜಿಬೈಲು, ಪೊಡಿಯ ಬೆಳ್ಳಿಚಡವು, ಬಾಬು ಮೈರೋಳು, ರವಿ ಬೆದ್ರಾಡಿ ಉಪಸ್ಥಿತರಿದ್ದರು. ಸಭೆಯ ಪ್ರಾರಂಭದಲ್ಲಿ ವಿಜಯ ಗುತ್ತು ಪ್ರಾರ್ಥಿಸಿದರು. ಸುಂದರ ಜಿ ಸ್ವಾಗತಿಸಿ, ತಾರನಾಥ ನೂಜಿಬೈಲು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.