HomePage_Banner
HomePage_Banner
HomePage_Banner

ಇರ್ದೆ- ಉಪ್ಪಳಿಗೆ ಶಾಲೆಯ ಶಿಕ್ಷಕಿ ಸಂಧ್ಯಾ ಬೈಲಾಡಿ ಮುಖ್ಯೋಪಾಧ್ಯಯರಾಗಿ ಪದೋನ್ನತಿ

Puttur_Advt_NewsUnder_1
Puttur_Advt_NewsUnder_1
  • ವಿಟ್ಲ ಬೊಳಂತಿಮುಗೇರು ಸರಕಾರಿ ಪ್ರೌಢಶಾಲೆಗೆ ಶಾಲೆಗೆ ವರ್ಗಾವಣೆ

ಪುತ್ತೂರು: ಇರ್ದೆ – ಉಪ್ಪಳಿಗೆ ಪ್ರೌಢಶಾಲೆಯ ಶಿಕ್ಷಕಿ ಸಂಧ್ಯಾ ಬೈಲಾಡಿ ಅವರು ಮುಖ್ಯೋಪಾಧ್ಯಯರಾಗಿ ಪದೋನ್ನತಿ ಹೊಂದಿ ವಿಟ್ಲ ಕಸಬ ಗ್ರಾಮದ ಬೊಳಂತಿಮುಗೇರು ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ.

1996ರಲ್ಲಿ ಸುಳ್ಯ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆಗೆ ಸೇರ್ಪಡೆಗೊಂಡು ಬೆಳಿಯೂರುಕಟ್ಟೆ ಪ್ರೌಢಶಾಲೆ ಮತ್ತು 2019ರಲ್ಲಿ ಇರ್ದೆ-ಉಪ್ಪಳಿಗೆ ಶಾಲೆಗೆ ವರ್ಗಾವಣೆಗೊಂಡಿದ್ದರು. ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯು ಅವರನ್ನು ಬೊಳಂತಿಮುಗೇರು ಪ್ರೌಢಶಾಲೆಗೆ ಮುಖ್ಯೋಪಾಧ್ಯಯರಾಗಿ ವರ್ಗಾವಣೆಗೊಳಿಸಿದ್ದು, ನ.7ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ರೋಟರಿಕ್ಲಬ್ ಸ್ವರ್ಣ ಪುತ್ತೂರು ಇದರ ಸದಸ್ಯರಾಗಿರುವ ಇವರು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ಅವರ ಪತ್ನಿಯಾಗಿರುವ ಇವರು ಕರಣ್ ಬೈಲಾಡಿ ಮತ್ತು ಗಗನ್ ಬೈಲಾಡಿ ಎಂಬ ಇಬ್ಬರು ಮಕ್ಕಳೊಂದಿಗೆ ಬಲ್ನಾಡು ಗ್ರಾಮದಲ್ಲಿ ವಾಸ್ತವ್ಯ ಹೊಂದಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.