HomePage_Banner
HomePage_Banner
HomePage_Banner

ಬ್ರಿಟೀಷ್ ಕಾಲದ ಬಿಇಒ ಕಚೇರಿ ಕಟ್ಟಡ ಶಿಥಿಲ..! ನೆಲ್ಲಿಕಟ್ಟೆಯಲ್ಲಿ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1
  • ಅಲ್ಲಲ್ಲಿ ಒಡೆದ ಹೆಂಚು, ಮಳೆ ನೀರು ಒಳಗೆ
  • ರಸ್ತೆಯಲ್ಲಿ ಘನ ವಾಹನ ಓಡಿದರೆ ಕಟ್ಟಡ ಗಢ ಗಢ

ಪುತ್ತೂರು:ಬ್ರಿಟೀಷ್ ಆಡಳಿತದಲ್ಲಿ ನಿರ್ಮಾಣಗೊಂಡಿದ್ದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಟ್ಟಡಕ್ಕೆ ಇದೀಗ ೮೨ರ ಹರೆಯ.೧೯೩೮ರಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಇದೀಗ ಶಿಥಿಲಗೊಂಡು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ.ಮಳೆ ನೀರು ಅಲ್ಲಲ್ಲಿ ಸೋರುವ ಮೂಲಕ ಕಟ್ಟಡದ ಗೋಡೆಗಳಲ್ಲೆಲ್ಲಾ ಬಿರುಕು ಬಿಟ್ಟು ಅಪಾಯಕ್ಕೆ ಮುನ್ಸೂಚನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕಚೇರಿಯನ್ನು ಸ್ಥಳಾಂತರಿಸುವ ಕುರಿತು ಶಾಸಕರ ನೇತೃತ್ವದಲ್ಲಿ ಚಿಂತನೆ ನಡೆದಿದೆ.

ಸುಮಾರು ೨೦ ಸಿಬ್ಬಂದಿಗಳು ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಬಾರಿಯ ಮಳೆಗಾಲವನ್ನು ಆತಂಕದಿಂದಲೇ ಕಳೆದಿದ್ದಾರೆ.ಕಟ್ಟಡದ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮಾಡಿನ ಹೆಂಚು ಅಲ್ಲಲ್ಲಿ ಒಡೆದ ಕಾರಣ ನಾನಾ ಕಡೆ ಮಳೆ ನೀರು ಸೋರುತ್ತದೆ.ಮಳೆಗಾಲದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಚೇಂಬರ್‌ನಲ್ಲಿ ಕೂಡ ನೀರು ಸೋರುತ್ತಿತ್ತು.ಅವರು ಪದೇ ಪದೇ ತಮ್ಮ ಸ್ಥಳವನ್ನೇ ಬದಲಾಯಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು.೩ ವರ್ಷಗಳ ಹಿಂದೆ ಕಟ್ಟಡ ಸಂಕೀರ್ಣದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸಮತಟ್ಟು ಕೆಲಸ ಮಾಡುವಾಗ ಬಿಇಒ ಕಚೇರಿಯ ಕಂಪೌಂಡ್‌ಗೋಡೆ ಕುಸಿದುದ್ದು ಕಟ್ಟಡವೇ ಕುಸಿಯುವ ಭಯದ ವಾತಾವರಣ ನಿರ್ಮಾಣವಾಗಿತ್ತು.ಬಳಿಕ ಧರೆಗೆ ಕಾಂಕ್ರೀಟ್ ವಾಲ್ ನಿರ್ಮಾಣ ಮಾಡಿ ಭದ್ರತೆ ಮಾಡಲಾಯಿತು.ಆದರೂ ಪ್ರಸ್ತುತ ದಿನಗಳಲ್ಲಿ ಮಳೆ ಇಲ್ಲದಿದ್ದರೂ ರಸ್ತೆಯಲ್ಲಿ ಘನ ವಾಹನಗಳು ಓಡಾಡುವಾಗ ಕಚೇರಿ ಕಟ್ಟಡ ಪೂರ್ಣ ಅದುರುತ್ತಿದ್ದು, ಕಟ್ಟಡದ ಗೋಡೆಯಿಂದ ಮಣ್ಣಿನ ಹುಡಿ ಬೇಳುತ್ತಿದೆ.ಒಟ್ಟಿನಲ್ಲಿ ಅಪಾಯ ಆಗುವ ಮೊದಲು ಬಿಇಒ ಕಚೇರಿ ಸ್ಥಳಾಂತರ ಆಗಬೇಕಾಗಿದೆ ಎನ್ನುವುದು ನಾಗರಿಕರ ಆಗ್ರಹ.

ಕೆಡವಲೇ ಬೇಕಾದ ಅನಿವಾರ್ಯತೆ: ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ಕಟ್ಟಡಗಳಲ್ಲಿ ಹಳೆ ತಾಲೂಕು ಕಚೇರಿ ಕಟ್ಟಡ (ಹಿಂದಿನ ಜೈಲು ಕಟ್ಟಡ), ಕೋರ್ಟ್ ಕಟ್ಟಡ, ಉಪ ನೋಂದಣಾಧಿಕಾರಿ ಕಟ್ಟಡ, ಸಹಾಯಕ ಆಯುಕ್ತರ ಕಚೇರಿ ಕಟ್ಟಡಗಳು ಸೇರಿವೆ.ಎ.ಸಿ.ಕಚೇರಿ ಕಟ್ಟಡವನ್ನು ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ೧೦ ವರ್ಷಗಳ ಹಿಂದೆ ವಿರೋಧದ ನಡುವೆಯೂ ಕೆಡವಲಾಗಿತ್ತು.ಉಪ ನೋಂದಣಾಧಿಕಾರಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸಿದ ಬಳಿಕ ಆ ಕಟ್ಟಡವನ್ನೂ ಕೆಡವಿ, ಆ ಜಾಗವನ್ನು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಮಹಿಳಾ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ.೧೯೩೮ರಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ಬಿಇಒ ಕಚೇರಿ ಇದ್ದು ಈ ಕಟ್ಟಡವನ್ನು ಭವಿಷ್ಯದಲ್ಲಿ ಕೆಡವಲೇ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಸದ್ಯ ಕಚೇರಿ ಸ್ಥಳಾಂತರ: ಬಿಇಒ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದು ಶಾಸಕ ಸಂಜೀವ ಮಠಂದೂರು ಗಮನಕ್ಕೆ ಬಂದಿದೆ. ಅವರು ಸದ್ಯಕ್ಕೆ ಕಚೇರಿಯನ್ನು ಸ್ಥಳಾಂತರಿಸಲು ಸೂಚಿಸಿದ್ದಾರೆ.ತಾಪಂ ಕಟ್ಟಡ ಇಲ್ಲವೇ ಗುರುಭವನಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆದಿದೆ. ಎರಡೂ ಕಡೆ ಕೆಲವೊಂದು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾಗಿದ್ದು, ಅದಕ್ಕೆ ಅನುದಾನ ಬೇಕಾಗಿದೆ. ನಮ್ಮ ಇಲಾಖೆಯಲ್ಲಿ ಸದ್ಯಕ್ಕೆ ಅನುದಾನ ಲಭ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ತಿಳಿಸಿದ್ದಾರೆ.

ನೂತನ ಕಟ್ಟಡಕ್ಕೆ ಹೊಸ ಪ್ಲಾನ್
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ನೂತನ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಇದೀಗ ಯೋಜನೆ ಹಳೆಯದಾದ ಕಾರಣ ಹೊಸದಾಗಿ ಪ್ಲ್ಯಾನ್, ನಕಾಶೆ ತಯಾರಿಸಲು ಶಾಸಕ ಸಂಜೀವ ಮಠಂದೂರು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ.ಅದರಂತೆ ಇಲಾಖೆ ವತಿಯಿಂದ ಬಿಇಒ ಕಚೇರಿಯಿಂದ ಮಾಹಿತಿ ಪಡೆಯಲಾಗಿದ್ದು, ಶೀಘ್ರದಲ್ಲೇ ಹೊಸ ಯೋಜನೆ ರೂಪಿಸಲಾಗುವುದು ಎಂದು ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ರಾಜಾರಾಂ ತಿಳಿಸಿದ್ದಾರೆ.

ಶೀಘ್ರ ಸ್ಥಳಾಂತರಕ್ಕೆ ಸಿದ್ಧತೆ
ಬಿಇಒ ಕಚೇರಿ ಕಟ್ಟಡ ಪೂರ್ಣ ಶಿಥಿಲಗೊಂಡಿದೆ. ಹಾಗಾಗಿ ಸದ್ಯದ ಮಟ್ಟಿಗೆ ನೆಲ್ಲಿಕಟ್ಟೆ ಎಲಿಮೆಂಟ್ರಿ ಶಾಲೆಗೆ ಸ್ಥಳಾಂತರ ಮಾಡುವ ಯೋಜನೆ ಇದೆ.ಆದರೆ ಶಾಲಾ ಕಟ್ಟಡ ಹೇಗಿದೆ ಎಂದು ಪರಿಶೀಲಿಸುವ ಅಗತ್ಯವಿದೆ. ಹೊಸ ಕಟ್ಟಡ ನಿರ್ಮಾಣಕ್ಕೂ ಸರಕಾರದ ಶಿಕ್ಷಣ ಇಲಾಖೆಯಿಂದಲೂ ಅನುದಾನ ಲಭ್ಯವಾಗಿಲ್ಲ.ಮುಂದೆ ಅನುದಾನಕ್ಕೆ ವ್ಯವಸ್ಥೆ ಮಾಡಿ ನೆಲ್ಲಿಕಟ್ಟೆಯಲ್ಲಿರುವ ಸರಕಾರಿ ಶಾಲೆಯ ಆವರಣದ ಬಳಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಇರುವಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಹಾಕಲಾಗುವುದು
ಸಂಜೀವ ಮಠಂದೂರು, ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.