HomePage_Banner
HomePage_Banner
HomePage_Banner

ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನಿಂದ ರಕ್ತದಾನ ಶಿಬಿರ : ರಕ್ತದಾನದಿಂದ ಕೋಮು ಸೌಹಾರ್ಧತೆ – ನವೀನ್ ಭಂಡಾರಿ

Puttur_Advt_NewsUnder_1
Puttur_Advt_NewsUnder_1

ರಕ್ತದಾನ ಕೋಮು ಸೌಹಾರ್ದತೆಗೆ ನಾಂದಿ ಹಾಡಬಲ್ಲದು: ನವೀನ್ ಭಂಡಾರಿ

ಪುತ್ತೂರು: ರಕ್ತದಾನ ಅಂದರೆ ಶ್ರೇಷ್ಟ ದಾನ, ರಕ್ತದಾನಕ್ಕೆ ಯಾವುದೇ ಜಾತಿ, ಮತ, ಬೇಧ ಅಡ್ಡಿ ಬಾರದು. ರಕ್ತದಾನ ಮಾಡುವುದರಿಂದ ಕೋಮು ಸೌಹಾರ್ದತೆಗೂ ನಾಂದಿ ತರಬಲ್ಲುದಾಗಿದೆ ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ‌ರವರು ಹೇಳಿದರು.

ಅವರು ನ.11 ರಂದು ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಪುತ್ತೂರು ಬ್ಲಡ್‌ ಬ್ಯಾಂಕ್‌ನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ರಕ್ತವು ಎಷ್ಟು ಅವಶ್ಯಕತೆ ಎಂದರೆ ಅವಶ್ಯ ಸಂದರ್ಭದಲ್ಲಿ ರಕ್ತವು ಆಸ್ಪತ್ರೆಯಲ್ಲಿ ಸಿಗದಿದ್ದಾಗ ಅದರ ನೋವು ಅನುಭವಿಸಿದವರಿಗೇ ಮಾತ್ರ ಗೊತ್ತು. ರಕ್ತದಾನ ಮಾಡುವುದರಿಂದ ಜೀವ ಉಳಿಸುವುದು ಮಾತ್ರವಲ್ಲ, ಗರ್ಭಿಣಿಯರಿಗೆ, ವಯಸ್ಸಾದವರಿಗೆ ಹೀಗೆ ಅನೇಕ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯಿರುತ್ತದೆ.

ಯಾರಿಗಾದರೂ ರಕ್ತದ ಅವಶ್ಯಕತೆ ಕಂಡುಬಂದಲ್ಲಿ ತಾನು ಮೊದಲು ಫೋನಾಯಿಸುವುದು ರೋಟರಿ ಸಂಸ್ಥೆಗೆ. ರಕ್ತದಾನ ಶಿಬಿರಗಳನ್ನು ಮಾಡುವಲ್ಲಿ ರೋಟರಿ ಸಂಸ್ಥೆಯು ನಿರಂತರ ಶ್ರಮಿಸುತ್ತಿದ್ದು, ಈ ಕಾಯಕವು ಮುಂದಿನ ದಿನಗಳಲ್ಲೂ ನಿರಂತರ ಮುಂದುವರೆಯುತ್ತಿರಲಿ ಎಂದು ಹೇಳಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯರವರು ಮಾತನಾಡಿ, ಅನ್ನದಾನ ಎಂಬುದು ಮಹಾದಾನ, ಅದರಂತೆ ರಕ್ತದಾನ ಎಂಬುದು ಶ್ರೇಷ್ಟ ದಾನವಾಗಿರುತ್ತದೆ. ಹೊಟ್ಟೆಗೆ ಅನ್ನ ಸಿಗದಿದ್ದರೂ ಮೂರು ದಿನ ಬದುಕಬಹುದು ಆದರೆ ತುರ್ತು ಸಂದರ್ಭದಲ್ಲಿ ರಕ್ತ ಸಿಗದಿದ್ದಲ್ಲಿ ಮನುಷ್ಯ ಅರ್ಧ ಗಂಟೆಯೂ ಬದುಕುಳಿಯಲು ಸಾಧ್ಯವಿಲ್ಲ. ರಕ್ತದಾನ ಮಾಡಿದ್ದಷ್ಟು ಹೃದಯ ನಿರಂತರ ಚಟುವಟಿಕೆಯಿಂದಿರುತ್ತದೆ ಮತ್ತು ಆರೋಗ್ಯ ಉತ್ತಮದಾಯಕವಾಗಿರುತ್ತದೆ ಎಂಬುದು ವೈದ್ಯಕೀಯ ಅಂಕಿ ಅಂಶಗಳಿಂದ ದೃಢಪಟ್ಟಿದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಜಯಂತ್ ನಡುಬೈಲುರವರು ಸ್ವಾಗತಿಸಿ ಮಾತನಾಡಿ, ರಕ್ತದಾನ ಶಿಬಿರವು ಜನರಿಗೆ ಉಪಯುಕ್ತ ಶಿಬಿರವಾಗಿದೆ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ಉತ್ತಮವೆನಿಸಿದೆ. ಜನರ ಜೀವವನ್ನು ಉಳಿಸುವ ಕೈಂಕರ್ಯವನ್ನು ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ರೋಟರಿ ಸಂಸ್ಥೆಯು ಮಾಡುತ್ತಿದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಕಾರ್ಯದರ್ಶಿ ರವಿಕುಮಾರ್ ರೈ ವಂದಿಸಿ, ಮಾಜಿ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಪೂರ್ವದ ಕಾರ್ಯ ಅಪೂರ್ವವೆನಿಸಿದೆ…
ಪ್ರಸ್ತುತ ದಿನಗಳಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಾಗಿದೆ ಆದರೆ ರಕ್ತದ ಕೊರತೆ ಬಹಳಷ್ಟಿದೆ. ರಕ್ತದಾನ ಮಾಡಲು ಯಾವುದೇ ಮುಹೂರ್ತದ ಅಗತ್ಯವಿಲ್ಲ. ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವವನ್ನು ಉಳಿಸಬಹುದಾಗಿದೆ. ಹಿಂದೆ ರಕ್ತದ ಅವಶ್ಯಕತೆ ಬಂದಾಗ ಮಂಗಳೂರನ್ನು ಅವಲಂಬಿಸಬೇಕಾಗಿತ್ತು. ಪ್ರಸ್ತುತ ಪುತ್ತೂರಲ್ಲಿಯೇ ಸಿಗುವಂತಹ ವ್ಯವಸ್ಥೆಗಳಾಗಿವೆ. ಪುರುಷರು ಮೂರು ತಿಂಗಳಿಗೊಮ್ಮೆ, ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ರೋಟರಿ ಪೂರ್ವದವರು ಹಮ್ಮಿಕೊಂಡ ಈ ರಕ್ತದಾನ ಶಿಬಿರವು ನಿಜಕ್ಕೂ ಅಪೂರ್ವವೆನಿಸಿದೆ.

ಡಾ.ರಾಮಚಂದ್ರ ಭಟ್, ವೈದ್ಯಾಧಿಕಾರಿ, ಬ್ಲಡ್‌ಬ್ಯಾಂಕ್, ಪುತ್ತೂರು

40 ಮಂದಿ ರಕ್ತದಾನಿಗಳು..
ಸಭಾ ಕಾರ್ಯಕ್ರಮದ ಬಳಿಕ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪುರುಷರು ಹಾಗೂ ಮಹಿಳೆಯರು ಸೇರಿದಂತೆ 40 ಮಂದಿ ರಕ್ತದಾನಿಗಳು ರಕ್ತದಾನವನ್ನು ಮಾಡಿರುತ್ತಾರೆ. ಕಾರ್ಯಕ್ರಮದ ಯಶಸ್ಸಿಗೆ ರೋಟರಿ ಬ್ಲಡ್‌ ಬ್ಯಾಂಕಿನ ಸಿಬ್ಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.