HomePage_Banner
HomePage_Banner
HomePage_Banner

“ಲವ್ ಜಿಹಾದ್” ತಡೆಗಟ್ಟಲು ಕಠಿಣ ಕಾನೂನು ರೂಪಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ವತಿಯಿಂದ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶಾದ್ಯಂತ “ಲವ್ ಜಿಹಾದ್” ಪ್ರಕರಣಗಳು ಅಪಾಯಕಾರಿಯಾಗಿ.ವಿಪರೀತವಾಗಿ ಹೆಚ್ಚುತ್ತಿದ್ದು ಮುಗ್ಧ ಅಮಾಯಕ ಹಿಂದೂ ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ ಕುಟುಂಬಗಳನ್ನು ಹಿಂದೂ ಸಂಸ್ಕೃತಿ ಸಮಾಜವನ್ನು ರಕ್ಷಿಸಬೇಕೆಂದು ತಕ್ಷಣಕ್ಕೆ ಜಾರಿಗೆ ಬರುವಂತೆ ರಾಜ್ಯ ಸರಕಾರ ಕೂಡಲೇ ಲವ್ ಜಿಹಾದ್ ತಡೆಗಟ್ಟಲು ಮತ್ತು ಮತಾಂತರ ನಿಷೇಧ ಕಾನೂನು ಜಾರಿಗೆ ತರುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೋಳ್ಪಾಡಿ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಕ್ ಸಸಿಹಿತ್ಲು, ಬಜರಂಗದಳ ಪುತ್ತೂರು ನಗರ ಸಂಚಾಲಕ್ ಚೇತನ್ ಬೊಳ್ವಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.