HomePage_Banner
HomePage_Banner
HomePage_Banner

ಕೆಮ್ಮಿಂಜೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಆಯ್ಕೆ

Puttur_Advt_NewsUnder_1
Puttur_Advt_NewsUnder_1
  • ಆಡಳಿತಾಧಿಕಾರಿಯವರಿಂದ ಅಧಿಕಾರ ಹಸ್ತಾಂತರ
    ಪುತ್ತೂರು: ಇತಿಹಾಸ ಪ್ರಸಿದ್ದ‌ ಕೆಮ್ಮಿಂಜಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷರಾಗಿ ಕೆಮ್ಮಿಂಜೆ‌ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರು ಆಯ್ಕೆಯಾಗಿದ್ದಾರೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಗೊಳಪಟ್ಟ `ಸಿ’ ಗ್ರೇಡ್ ಗೆ ಸೇರಿದ ಕೆಮ್ಮಿಂಜೆ ಗ್ರಾಮದ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರಕಾರದ ನಿಯಾಮಾವಳಿಯಂತೆ ಪ.ಜಾತಿ ಮತ್ತು ಪ.ಪಂಗಡದಿಂದ ವಿಶ್ವನಾಥ ನಾಯ್ಕ್ ನೈತ್ತಾಡಿ, ಮಹಿಳಾ ಕ್ಷೇತ್ರದಿಂದ ವಿನುತಾ ಮೋಹನ್ ಕೆಮ್ಮಿಂಜೆ ದೇವಸ್ಥಾನ ರಸ್ತೆ ಹಾಗೂ ಟಿ.ಪ್ರೇಮಲತಾ ರಾವ್ ನಾರಾಯಣ ಭಟ್ ಕಾಂಪೌಂಡ್ ಬೊಳುವಾರು, ಸುಬ್ರಹ್ಮಣ್ಯ ಬಳ್ಳಕುರಾಯ ಪಳಿಕೆ ರಸ್ತೆ, ದಯಾನಂದ ಎಂ ಮೊಟ್ಟೆತ್ತಡ್ಕ, ವಿಶ್ವನಾಥ ಗೌಡ ಕಲ್ಲಗುಡ್ಡೆ, ಚಂದ್ರಶೇಖರ ಕೆ, ಶಿವಧ್ವಜ ಮನೆ ದರ್ಬೆ, ಪಿ.ಆನಂದ ಪೂಜಾರಿ ಸಂಜಯ ನಗರ ಹಾಗೂ ಅರ್ಚಕ ಸ್ಥಾನದಿಂದ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ್ ಭಟ್ ರವರನ್ನು ನೇಮಕಗೊಳಿಸಲಾಗಿತ್ತು.

ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ‌ ಮುರಳಿಕೃಷ್ಣ ಹಸಂತಡ್ಕ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಉಪತಹಶೀಲ್ದಾರ್ ಸುಲೋಚನ ಪಿ.ಕೆಯವರ ನೇತೃತ್ವದಲ್ಲಿ ನ.11 ರಂದು ದೇವಸ್ಥಾನದಲ್ಲಿ ಸಭೆ ನಡೆಸಿ ನೂತನ ಅಧ್ಯಕ್ಷ ರನ್ನು ಆಯ್ಕೆ ಮಾಡಲಾಯಿತು. ಆಡಳಿತಾಧಿಕಾರಿ ಸುಲೋಚನ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ನಾಗನ ಸಾನಿಧ್ಯವನ್ನು ಹೊಂದಿರುವ ಜನರಿಗೆ ಅತೀ ಹತ್ತಿರವಾದ ಸುಬ್ರಹ್ಮಣ್ಯನ ಪುನ್ಯ ಕ್ಷೇತ್ರವಾಗಿದೆ. ಸರಕಾರದ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ 9 ಜನರ ನೂತನ ಸಮಿತಿಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿ ಅಧ್ಯಕ್ಷರ ಅಯ್ಕೆ ಮಾಡಿದ್ದು ದೇವಸ್ಥಾನ ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.

ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮಾತನಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯ್ಕೆ ದೈವ ಸಂಕಲ್ಪದಂತೆ ನಡೆದಿದೆ. ಅದರ ಹಿಂದೆ ಯಾರೂ ಹೋಗಲಿಲ್ಲ. ಊರವರೇ ಸೇರಿಕೊಂಡು ತಮ್ಮ ಆರಾಧನಾ ಕ್ಷೇತ್ರಕ್ಕೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಸಮಿತಿಯ ಪ್ರತಿಯೊಬ್ಬರೂ ಸಮರ್ಪನಾ ಭಾವದಿಂದ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ

ಜಿಲ್ಲಾ‌ ಧಾರ್ಮಿಕ ಪರಿಷತ್ತಿನ‌ ಸದಸ್ಯ ಗಿರೀಶ್ ತಂತ್ರಿ, ನಗರ ಸಭಾ ಸದಸ್ಯರಾದ ಪಿ.ಜಿ ಜಗನ್ನಿವಾಸ ರಾವ್, ಬಾಲಚಂದ್ರ ಕರಿಯಾಳ,‌ ಮಮತಾ ರಂಜನ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.