HomePage_Banner
HomePage_Banner
HomePage_Banner

ಪುತ್ತೂರು ದಲಿತ ಯುವ ಸಂಘಟನೆಯಿಂದ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ದಲಿತ ಯುವ ಘಟಕ ಪುತ್ತೂರು ಇದರ ವತಿಯಿಂದ ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕದಲ್ಲಿ ಕಷ್ಟದಲ್ಲಿರುವ ಬಡ ದಲಿತ ಕುಟುಂಬಗಳಿಗೆ ದಿನನಿತ್ಯದ ಆಹಾರ ಸಾಮಗ್ರಿಗಳನ್ನು ಯುವ ದಲಿತ ನಾಯಕರಾದ ಕೇಶವ ಪಡೀಲ್ ಇವರ ಸಾರಥ್ಯದಲ್ಲಿ ವಿತರಿಸಲಾಯಿತು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿಯವರು ಅಧ್ಯಕ್ಷತೆ ವಹಿಸಿ ಪ್ರಸ್ತುತ ದಿನಗಳಲ್ಲಿ ದೇಶದ ಇಕ್ಕೆಲಗಳಲ್ಲಿ ದಲಿತರ ಮೇಲಾಗುವ ದೌರ್ಜನ್ಯದ ವಿರುದ್ಧ ನಾವೆಲ್ಲರು ಒಂದಾಗಿ ಧ್ವನಿ ಎತ್ತ ಬೇಕು, ಕಷ್ಟದಲ್ಲಿರುವ ನಮ್ಮ ಸಮುದಾಯದ ಬಡ ಕುಟುಂಬ ಗಳಿಗೆ ನಾವೆಲ್ಲರು ಜೊತೆಯಾಗಿ ಆಸರೆಯಾಗಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಸಾಮಾಜಿಕ ಕಾರ್ಯಕರ್ತ ಲೋಕೇಶ್ ಗೌಡ ಅಲುಂಬುಡ ಮಾತನಾಡಿ ಸರ್ಕಾರದಿಂದ ದಲಿತ ಸಮುದಾಯಕ್ಕೆ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಇದಕ್ಕಾಗಿ ತಮ್ಮಿಂದಾಗುವ ಸಹಾಯವನ್ನು ಮಾಡುವುದಾಗಿ ಹೇಳಿದರು. ನಿಡ್ಪಳ್ಳಿ ಗ್ರಾಮಪಂಚಾಯತ್ ಉಪಾಧ್ಯಕ್ಷ ರಾದ ಅವಿನಾಶ್ ರೈ ನಿಡ್ಪಳ್ಳಿ ,ಯುವ ದಲಿತ ನಾಯಕ ವಸಂತ ಪಟ್ಟೆ, ಆಸಿಫ್ ನಿಡ್ಪಳ್ಳಿ, ಮೊಹಮ್ಮದ್ ಕುಂಞಿ ತಂಬುತ್ತಡ್ಕ , ಶರೀಫ್ ತಂಬುತ್ತಡ್ಕ, ಪ್ರವೀಣ್ ತಂಬುತ್ತಡ್ಕ, ಮೊಯ್ದಿನ್ ತಂಬುತ್ತಡ್ಕ, ಸತೀಶ್, ನಜೀರ್, ಗಣೇಶ್ ಯುವ ಘಟಕದ ಇನ್ನೂ ಅನೇಕ ಕಾರ್ಯಕರ್ತರು, ಫಲಾನುಭವಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು ೨೦ ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಜಗನ್ ತಂಬುತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.